For Quick Alerts
  ALLOW NOTIFICATIONS  
  For Daily Alerts

  'ಕ್ರಿಕೆಟ್ ದೇವರು' ಸಚಿನ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿ ಟ್ರೋಲ್ಡ್

  |
  ಸಚಿನ್ ವಿರುದ್ಧ ವಿವಾದ ಹುಟ್ಟು ಹಾಕಿದ ನಟಿ ಶ್ರೀರೆಡ್ಡಿ | Filmibeat Kannada

  ಇಷ್ಟು ದಿನ ಸಿನಿಮಾ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಆರೋಪಗಳ ಸುರಿಮಳೆ ಮಾಡುತ್ತಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಬಾಂಬ್ ಸಿಡಿಸಿದ್ದಾರೆ.

  ಸಚಿನ್ ತೆಂಡೂಲ್ಕರ್ ಅವರು ಒಮ್ಮೆ ಹೈದರಾಬಾದ್ ಗೆ ಬಂದಿದ್ದಾಗ 'ಚಾರ್ಮಿಂಗ್ ಹುಡುಗಿ ಜೊತೆ ರೋಮ್ಯಾನ್ಸ್ ಮಾಡಿದ್ದರು ಎಂದು ಹೇಳುವ ಮೂಲಕ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

  ಬಹುಭಾಷಾ ನಟಿ ಖುಷ್ಬೂ ಪತಿ ಸುಂದರ್ ವಿರುದ್ಧ ಶ್ರೀರೆಡ್ಡಿ ಫೈರ್ಬಹುಭಾಷಾ ನಟಿ ಖುಷ್ಬೂ ಪತಿ ಸುಂದರ್ ವಿರುದ್ಧ ಶ್ರೀರೆಡ್ಡಿ ಫೈರ್

  ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ಶ್ರೀರೆಡ್ಡಿ ''ರೋಮ್ಯಾಂಟಿಕ್ ಕ್ರಿಕೆಟರ್ ಎಂದೇ ಗುರುತಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು, ಹೈದರಾಬಾದ್ ಗೆ ಬಂದಿದ್ದಾಗ ಅವರ ಜೊತೆ ಚಾರ್ಮಿಂಗ್ ಹುಡುಗಿ ರೋಮ್ಯಾನ್ಸ್ ಮಾಡಿದ್ದಳು. ಚಾಮುಂಡೇಶ್ವರ್ ಸ್ವಾಮಿ ಇವರಿಗೆ ಮಧ್ಯವರ್ತಿಯಾಗಿದ್ದರು. ಗ್ರೇಟ್ ವ್ಯಕ್ತಿಗಳು ಅದ್ಭುತವಾಗಿ ಆಟವಾಡ್ತಾರೆ, ಅಂದ್ರೆ ರೋಮ್ಯಾನ್ಸ್ ಚೆನ್ನಾಗಿ ಮಾಡ್ತಾರೆ'' ಎಂದು ವ್ಯಂಗ್ಯ ಮಾಡಿದ್ದಾರೆ.

  ತಮಿಳು 'ಸ್ಟಾರ್' ನಟನ ಮೇಲೆ ಶ್ರೀರೆಡ್ಡಿ ಎನ್ ಕೌಂಟರ್.!ತಮಿಳು 'ಸ್ಟಾರ್' ನಟನ ಮೇಲೆ ಶ್ರೀರೆಡ್ಡಿ ಎನ್ ಕೌಂಟರ್.!

  ಸಹಜವಾಗಿ ಇದು ಸಚಿನ್ ತೆಂಡೂಲ್ಕರ್ ಅಭಿಮಾನಿಗಳನ್ನ ಕೆರಳಿಸಿದೆ. ಇದು ಪ್ರಚಾರಕ್ಕಾಗಿ ಸಚಿನ್ ಅವರ ಹೆಸರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಶ್ರೀರೆಡ್ಡಿಯ ಈ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

  'ಸಚಿನ್ ಅವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು. ನೀವು ನಿಜವಾದ ಭಾರತೀಯರಾಗಿದ್ದರೇ ಸಚಿನ್ ಬಗ್ಗೆ ಹೀಗೆ ಮಾತನಾಡುತ್ತಿರಲಿಲ್ಲ' ಎಂದು ಕಾಲೆಳೆಯುತ್ತಿದ್ದಾರೆ. 'ಇಷ್ಟು ದಿನ ನೀನು ಆರೋಪ ಮಾಡಿದ್ದಾಗ ಅದರಲ್ಲಿ ಏನೋ ವಿಷ್ಯವಿದೆ ಎಂದು ಕೊಂಡಿದ್ದೆ. ಆದ್ರೆ, ಇಂದು ನೀನು ಬರಿ ಸುಳ್ಳು ಎಂದು ಗೊತ್ತಾಗಿದೆ' ಎಂದು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.

  ಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿ

  ಕ್ರಿಕೆಟ್ ಜಗತ್ತಿನಲ್ಲಿ ಯಾವುದೇ ವಿವಾದಗಳಿಲ್ಲದೇ ದಶಕಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಲೆಜೆಂಡ್ ಆಗಿ ಜೀವಿಸಿದ ವ್ಯಕ್ತಿ ಸಚಿನ್ ತೆಂಡೂಲ್ಕರ್. ಇಂತವರ ಮೇಲೆ ಆರೋಪ ಬಂದಿರುವ ನಿಜಕ್ಕೂ ಆಶ್ಚರ್ಯ ಉಂಟು ಮಾಡಿದೆ.

  English summary
  Actress Sri Reddy is back in the news with another sensation that cricketer Sachin Tendulkar allegedly had romance with Charmi'ng girl in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X