»   » ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

Posted By:
Subscribe to Filmibeat Kannada
ಪವನ್ ಕಲ್ಯಾಣ್ ರನ್ನು ಅಣ್ಣ ಎಂದ ಶ್ರೀರೆಡ್ಡಿ | FIlmibeat Kannada

'ಕಾಸ್ಟಿಂಗ್ ಕೌಚ್' ವಿರುದ್ಧ ಮಾತನಾಡಿ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ತೆಲುಗು ನಟಿ ಶ್ರೀರೆಡ್ಡಿ ಟಾಲಿವುಡ್ ಇಂಡಸ್ಟ್ರಿಯ ಕರಾಳ ಮುಖವನ್ನ ಬಹಿರಂಗಪಡಿಸುತ್ತಿದ್ದಾರೆ.

ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಜೊತೆಗಿನ ಖಾಸಗಿ ಫೋಟೋ ಬಿಡುಗಡೆ ಮಾಡಿದ್ದ ನಟಿ, ಈಗ ಬರಹಗಾರ ಕೋನ ವೆಂಕಟ್ ಅವರ ಜೊತೆಗಿನ ವಾಟ್ಸಾಪ್ ಸಂಭಾಷಣೆಯನ್ನ ರಿವಿಲ್ ಮಾಡಿ ಗಂಭೀರ ಆರೋಪವನ್ನ ಮಾಡಿದ್ದಾರೆ.

ಶ್ರೀರೆಡ್ಡಿ ಸಂಚಲನ: ಮತ್ತೊಬ್ಬ ದೊಡ್ಡ ವ್ಯಕ್ತಿಯ ಹೆಸರು ಬಯಲುಗೆಳೆದ ನಟಿ

ಹೀಗೆ, ತೆಲುಗು ಇಂಡಸ್ಟ್ರಿಯ ಪ್ರಮುಖರನ್ನ ಟಾರ್ಗೆಟ್ ಮಾಡಿರುವ ಶ್ರೀರೆಡ್ಡಿ ಒಬ್ಬೊಬ್ಬರ ಹೆಸರನ್ನೇ ಬಹಿರಂಗಪಡಿಸುತ್ತಿದ್ದು, ಮತ್ತಷ್ಟು ಜನರ ಹೆಸರು ಮತ್ತು ದಾಖಲೆಯನ್ನ ಮಾಧ್ಯಮದ ಮುಂದೆ ಇಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಶ್ರೀರೆಡ್ಡಿಯ ನೆರವಿಗೆ ಯಾರೂ ಬಾರದ ಹಿನ್ನೆಲೆ ಪವನ್ ಕಲ್ಯಾಣ್ ಅವರ ಹೆಸರನ್ನ ಶ್ರೀರೆಡ್ಡಿ ಪ್ರಸ್ತಾಪಿಸಿದ್ದಾರೆ. ಮುಂದೆ ಓದಿ.....

ಪವನ್ ಕಲ್ಯಾಣ್ ಸುಮ್ಮನಿರುವುದು ಸರಿಯಲ್ಲ.!

ರಾಜಕೀಯವಾಗಿ, ಸಾಮಾಜಿಕವಾಗಿ ಅನೇಕ ಸಮಸ್ಯೆಗಳ ಬಗ್ಗೆ ಭಾಷಣಗಳನ್ನ ಮಾಡುವ ತೆಲುಗು ನಟ ಪವನ್ ಕಲ್ಯಾಣ್ ಅವರು ಇಂಡಸ್ಟ್ರಿಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಸುಮ್ಮನಿರುವುದು ಸರಿಯಲ್ಲ. ದಯವಿಟ್ಟು ಮಾತನಾಡಿ ಎಂದು ಶ್ರೀರೆಡ್ಡಿ ಆಗ್ರಹಿಸಿದ್ದಾರೆ.

ತಂಗಿ ನೆರವಿಗೆ ಬರುವಂತೆ ಅಣ್ಣನಿಗೆ ಮನವಿ

ನಿಮಗೆ ಇಷ್ಟು ಅಭಿಮಾನಿಗಳು ಸಿಕ್ಕಿದ್ದು, ನೀವು ಇಷ್ಟು ಯಶಸ್ಸು ಗಳಿಸಿರುವುದು ಸಿನಿಮಾ ಇಂಡಸ್ಟ್ರಿಯಿಂದ. ಈಗ ಸಿನಿಲೋಕದಿಂದ ಸ್ವಲ್ಪ ದೂರ ಆಗಿದ್ದೀರಾ ಅಂದ್ರೆ, ಇಲ್ಲಿನ ಸಮಸ್ಯೆಗಳು ಏನೇ ಇದ್ರು ನನಗೇನು ಎಂದುಕೊಳ್ಳಬೇಡಿ. ದಯವಿಟ್ಟು ಈ ಬಗ್ಗೆ ಮಾತನಾಡಿ ಅಣ್ಣ ಎಂದು ಕೇಳಿಕೊಳ್ಳುತ್ತಿದ್ದಾರೆ.

ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ.!

ಅನ್ಯಾಯ ನಡೆಯಬಾರದು ಎಂದು ಹೇಳಿ

ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿರುವಾಗ ನಿಮ್ಮ ಕಿವಿಗೆ ಬಿದ್ದಿಲ್ಲ ಎನ್ನುವುದಿಲ್ಲ. ಇದೊಂದು ಹೆಣ್ಣಿನ ಸಮಸ್ಯೆ. ನೀವು ಒಂದು ಸಲ ಮಾತನಾಡಿ. ಎಲ್ಲರಿಗೂ ಹೇಳಿ ಅನ್ಯಾಯ ನಡೆಯಬಾರದು ಎಂದು. ದೊಡ್ಡ ದೊಡ್ಡ ನಿರ್ಮಾಪಕರು, ದೊಡ್ಡ ನಿರ್ದೇಶಕರಾದ್ರೂ ಯಾರನ್ನ ರಕ್ಷಿಸಬಾರದು. ಎಲ್ಲರನ್ನ ಹೊರಹಾಕಿ ಎಂದು ಹೇಳಿ ಅಣ್ಣ ಎಂದು ಶ್ರೀರೆಡ್ಡಿ ಮನವಿ ಮಾಡಿದ್ದಾರೆ.

ದೊಡ್ಡವರು ಬುಡಕ್ಕೆ ಕೈ ಹಾಕಿರುವ ಶ್ರೀರೆಡ್ಡಿ

ಈಗಾಗಲೇ ತೆಲುಗು ಇಂಡಸ್ಟ್ರಿಯ ದೊಡ್ಡ ದೊಡ್ಡ ಕುಟುಂಬಗಳ ಬಗ್ಗೆ ಕಾಮೆಂಟ್ ಮಾಡಿರುವ ಶ್ರೀರೆಡ್ಡಿ, ಇಡೀ ಇಂಡಸ್ಟ್ರಿಯನ್ನ ನಾಲ್ಕು ಕುಟುಂಬಗಳು ಆಳುತ್ತಿವೆ ಎಂದು ಆರೋಪಿಸಿದ್ದರು. ಅದರ ಮೊದಲನೇಯದು ಎಂಬಂತೆ ವಿಕ್ಟರಿ ವೆಂಕಟೇಶ್ ಅವರ ಫ್ಯಾಮಿಲಿ ಸುರೇಶ್ ಬಾಬು ಅವರ ಮಗನ ವಿರುದ್ಧ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಫೋಟೋ ಬಿಡುಗಡೆ ಮಾಡಿದ್ದಾರೆ.

English summary
A struggling Telugu actress, Sri Reddy, has opened up on the casting couch in Tollywood. She demands Pawan Kalyan To Responds.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X