ಬಹುಭಾಷಾ ನಟಿ ಖುಷ್ಬೂ ಪತಿ ಸುಂದರ್ ವಿರುದ್ಧ ಶ್ರೀರೆಡ್ಡಿ ಫೈರ್

By Bharath Kumar

ಸುಮಾರು ಎರಡ್ಮೂರು ತಿಂಗಳಿನಿಂದ ಈ ಶ್ರೀರೆಡ್ಡಿ ಎಂಬ ಹೆಸರು ಚಿತ್ರರಂಗದಲ್ಲಿ ಬೆಂಬಿಡದ ಭೂತದಂತೆ ಕಾಡುತ್ತಿದೆ. ದಿನಕ್ಕೊಬ್ಬ ನಿರ್ದೇಶಕ, ನಟ, ನಿರ್ಮಾಪಕನ ಬಗ್ಗೆ ಬೆಚ್ಚಿಬೀಳಿಸುವಂತಹ ಮಾಹಿತಿಗಳನ್ನ ಬಿಚ್ಚಿಡ್ತಿದ್ದಾರೆ.

ಇಷ್ಟು ದಿನ ತೆಲುಗು ಇಂಡಸ್ಟ್ರಿಯನ್ನ ಟಾರ್ಗೆಟ್ ಮಾಡಿದ್ದ ಶ್ರೀರೆಡ್ಡಿ ಈಗ ತಮಿಳು ಇಂಡಸ್ಟ್ರಿಯ ಹಿಂದೆ ಬಿದ್ದಿದ್ದಾರೆ. ನಟ ಶ್ರೀಕಾಂತ್, ಸಂದಿಪ್ ಕಿಷ್ಣಾಲ್, ರಾಘವ ಲಾರೆನ್ಸ್ ಅವರ ಬಗ್ಗೆ ಲೈಂಗಿಕ ದುರ್ಬಳಕೆಯ ಆರೋಪ ಮಾಡ್ತಿದ್ದಾರೆ.

ಈಗ ತಾಜಾ ಹೆಸರಂದ್ರೆ ತಮಿಳು ನಿರ್ದೇಶಕ ಕಮ್ ನಟ ಸುಂದರ್ ಸಿ ಅವರ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಡುತ್ತೇನೆ ಎಂದು ಕಿಡಿಕಾರಿದ್ದಾರೆ. 'ಅರನ್ ಮನೈ' ಚಿತ್ರದ ಚಿತ್ರೀಕರಣ ವೇಳೆ ನನ್ನನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನ ಆಗಿತ್ತು ಎಂದು ಬಾಂಬ್ ಸಿಡಿಸಿದ್ದಾರೆ. ಏನಿದು ಪ್ರಕರಣ? ಮುಂದೆ ಓದಿ....

ಸುಂದರ್ ಸಿ ಟಾರ್ಗೆಟ್

ಸುಂದರ್ ಸಿ ಟಾರ್ಗೆಟ್

ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ ಹಾಗೂ ಬಹುಭಾಷಾ ನಟಿ ಖುಷ್ಬೂ ಅವರ ಪತಿ ಸುಂದರ್ ಸಿ ಅವರನ್ನ ಟಾರ್ಗೆಟ್ ಮಾಡಿರುವ ಶ್ರೀರೆಡ್ಡಿ 'ಅರನ್ ಮನೈ' ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಘಟನೆಯೊಂದನ್ನ ವಿವರಿಸಿದ್ದಾರೆ.

ಹೈದ್ರಾಬಾದ್ ನಲ್ಲಿ ಆಗಿದ್ದೇನು.?

ಹೈದ್ರಾಬಾದ್ ನಲ್ಲಿ ಆಗಿದ್ದೇನು.?

''ಅರನ್ ಮನೈ ಚಿತ್ರದ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯುತ್ತಿತ್ತು. ಆಗ ನನಗೆ ಗಣೇಶ್ ಎಂಬುವರು ಫೋನ್ ಮಾಡಿದ್ರು. ಅವರು ಆ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಗೊತ್ತಿರುವವರಿಂದ ನಂಬರ್ ಪಡೆದುಕೊಂಡಿದ್ದ ಅವರು ಫೋನ್ ಮಾಡಿದ ನಂತರ ನಾನು ಸೆಟ್ ಗೆ ಹೋದೆ. ಅಲ್ಲಿ ಸುಂದರ್ ಸಿ ಅವರನ್ನ ಪರಿಚಯ ಮಾಡಿಕೊಟ್ಟರು. ಜೊತೆಗೆ ನನ್ನ ಫೇಸ್ ಬುಕ್ ಫ್ರೆಂಡ್ ಸೆಂಥಿಲ್ ಕುಮಾರ್ ಅವರನ್ನ ಕೂಡ ಭೇಟಿ ಮಾಡಿದೆ.'' - ಶ್ರೀರೆಡ್ಡಿ

ಆಮಿಷ ನೀಡಿ ವಂಚನೆ

ಆಮಿಷ ನೀಡಿ ವಂಚನೆ

''ಮುಂದಿನ ಸಿನಿಮಾದಲ್ಲಿ ನಿನಗೆ ಮುಖ್ಯಪಾತ್ರದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿದರು. ಮರುದಿನ ನನ್ನನ್ನು 'ನೊವೊಟೆಲ್'ಗೆ ಬರಲು ಫೋನ್ ಮಾಡಿದರು. ಯಾಕಂದ್ರೆ, ಮುಂದಿನ ಚಿತ್ರದಲ್ಲಿ ಅವಕಾಶ ಕೊಡಬೇಕಂದ್ರೆ, ಸುಂದರ್ ಸಿ ಅವರ ಜೊತೆ ಲೈಂಗಿಕವಾಗಿ ಕಾಂಪ್ರುಮೇಸ್ ಆಗಬೇಕು ಎಂದು ಹೇಳಿದರು. ಆಮೇಲೆ ಏನಾಯ್ತು ಎಂದು ಪೆರಮಾಳ್ ಅವರಿಗೆ ಗೊತ್ತಿದೆ. ಗಣೇಶ್ ವಂಚಕ, ಅವನು ನನಗೆ ಸಹಾಯ ಮಾಡಲಿಲ್ಲ'' ಎಂದು ಬರೆದುಕೊಂಡಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ಸುಂದರ್

ಕಾನೂನು ಕ್ರಮಕ್ಕೆ ಮುಂದಾದ ಸುಂದರ್

ಶ್ರೀರೆಡ್ಡಿ ಮಾಡಿರುವ ಆರೋಪದ ಬಗ್ಗೆ ಸುಂದರ್ ಸಿ ಅವರು ಪ್ರತಿಕ್ರಿಯಿಸಿದ್ದು, ಶ್ರೀರೆಡ್ಡಿ ಆರೋಪದಲ್ಲಿ ಸತ್ಯವಿಲ್ಲ. ನಾನು ಕಾನೂನು ಕ್ರಮ ಜರುಗಿಸುತ್ತೇನೆ. ಶೀಘ್ರದಲ್ಲೇ ಪೊಲೀಸ್ ದೂರು ನೀಡುತ್ತೇನೆ ಎಂದಿದ್ದಾರೆ.

ಲಾರೆನ್ಸ್ ವಿರುದ್ಧವೂ ಆರೋಪ

ಲಾರೆನ್ಸ್ ವಿರುದ್ಧವೂ ಆರೋಪ

ನಿರ್ದೇಶಕ ಸುಂದರ್ ಸಿ ವಿರುದ್ಧ ಮಾತ್ರವಲ್ಲ, ನೃತ್ಯ ಸಂಯೋಜಕ ಕಮ್ ನಿರ್ದೇಶಕ ರಾಘವ ಲಾರೆನ್ಸ್, ನಟ ಸಂದಿಪ್ ಕಿಶ್ಣಾಲ್ ಅವರ ಮೇಲೆಯೂ ವಂಚನೆ ಆರೋಪ ಮಾಡಿದ್ದಾರೆ ಶ್ರೀರೆಡ್ಡಿ.

ವಿಶಾಲ್ ಬೆದರಿಕೆ.!

ವಿಶಾಲ್ ಬೆದರಿಕೆ.!

ಇನ್ನು ತಮಿಳು ಚಿತ್ರರಂಗದ ನಟ, ನಿರ್ದೇಶಕರನ್ನ ಟಾರ್ಗೆಟ್ ಮಾಡಿರುವ ಶ್ರೀರೆಡ್ಡಿಗೆ ತಮಿಳು ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ಬೆದರಿಕೆ ಹಾಕಿದ್ದಾರೆ ಎಂದು ಶ್ರೀರೆಡ್ಡಿ ಹೇಳುತ್ತಿದ್ದಾರೆ. ಸಾಕ್ಷಿ ಇದ್ದರೇ ತೆಗೆದುಕೊಂಡು ಬಾ, ಸಮಸ್ಯೆ ಬಗೆಹರಿಸೋಣ ಎಂದು ಈ ಹಿಂದೆಯೇ ವಿಶಾಲ್, ಶ್ರೀರೆಡ್ಡಿ ಹೇಳಿದ್ದರು. ಆದ್ರೂ, ಫೇಸ್ ಬುಕ್ ನಲ್ಲಿ ಪೊಸ್ಟ್ ಹಾಕುವ ಮೂಲಕ ಎಲ್ಲರನ್ನ ಕಾಡುತ್ತಿದ್ದಾರೆ ಈ ನಟಿ.

More from Filmibeat

English summary
Telugu actress Sri Reddy has accused actor cum director Sundar C of wanting her to compromise sexually to get a lead chance in his movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X