ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ.!

By Bharath Kumar

Recommended Video

ರಾಣಾ ದಗ್ಗುಬಾಟಿ ತಮ್ಮನ ಬಗ್ಗೆ ಬಾಯಿ ಬಿಟ್ಟ ಶ್ರೀರೆಡ್ಡಿ | Filmibeat Kannada

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನನಗೆ ಮೋಸ ಮಾಡಿದ್ದಾರೆ ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ನಟಿಯರನ್ನ ಮಂಚಕ್ಕೆ ಕರೆಯುವ ವ್ಯಕ್ತಿಗಳು ಹೆಚ್ಚಿದ್ದಾರೆ ಎಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವ ನಟಿ ಶ್ರೀರೆಡ್ಡಿ ಕೊನೆಗೂ ಖ್ಯಾತ ನಿರ್ಮಾಪಕರ ಮಗನ ಮುಖವಾಡ ಕಳಚಿದ್ದಾರೆ.

ಹೈದ್ರಾಬಾದ್ ನ ಸರ್ಕಾರಿ ಸ್ಟುಡಿಯೋಗೆ ಕರೆಸಿ ನನ್ನನ್ನು, ಖ್ಯಾತ ನಿರ್ಮಾಪಕನ ಮಗ ದೈಹಿಕವಾಗಿ ಬಳಸಿಕೊಂಡು, ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಶ್ರೀರೆಡ್ಡಿ ಈಗ ಫೋಟೋಗಳನ್ನ ಲೀಕ್ ಮಾಡಿದ್ದಾರೆ.

ಇಷ್ಟು ದಿನ ಆಧಾರವಿಲ್ಲದೇ ಮಾತನಾಡುತ್ತಿದ್ದ ನಟಿ ಈಗ ಫೋಟೋಗಳನ್ನ ಬಹಿರಂಗಪಡಿಸಿ ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ್ದಾರೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ತೆಲುಗು ಮಂದಿ, ಮುಂದೆ ಮತ್ಯಾರು ಹೆಸರು ಮತ್ತು ಫೋಟೋಗಳು ಸೋರಿಕೆಯಾಗುತ್ತೆ ಎಂಬ ಕುತೂಹಲದಿಂದ ಕಾಯುವಂತಾಗಿದೆ. ಅಷ್ಟಕ್ಕೂ, ಶ್ರೀರೆಡ್ಡಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಆ ನಿರ್ಮಾಪಕನ ಮಗ ಯಾರು.? ಎಂದು ತಿಳಿಯಲು ಮುಂದೆ ಓದಿ.....

ರಾಣಾ ದಗ್ಗುಬಾಟಿ ಸಹೋದರನ ಫೋಟೋ ಲೀಕ್

ರಾಣಾ ದಗ್ಗುಬಾಟಿ ಸಹೋದರನ ಫೋಟೋ ಲೀಕ್

'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ ಅವರ ತಂದೆ ಸುರೇಶ್ ಬಾಬು ತೆಲುಗು ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ. ಇವರಿಗೆ ಇಬ್ಬರು ಮಕ್ಕಳು. ರಾಣಾ ಮತ್ತು ಅಭಿರಾಮ್. ಶ್ರೀರೆಡ್ಡಿ ಆರೋಪ ಮಾಡಿರುವುದು ರಾಣಾ ಸಹೋದರ ಅಭಿರಾಮ್ ವಿರುದ್ಧ. ಅಭಿರಾಮ್ ಮತ್ತು ಶ್ರೀರೆಡ್ಡಿ ಆತ್ಮೀಯವಾಗಿರುವ ಕೆಲ ಫೋಟೋಗಳನ್ನ ನಟಿ ಬಹಿರಂಗಪಡಿಸಿದ್ದಾರೆ.

ಸ್ಟುಡಿಯೋಗೆ ಕರೆಸಿ ವಂಚನೆ ಮಾಡಿದ್ದಾನೆ

ಸ್ಟುಡಿಯೋಗೆ ಕರೆಸಿ ವಂಚನೆ ಮಾಡಿದ್ದಾನೆ

ಹೈದ್ರಾಬಾದ್ ನ ಸ್ಟುಡಿಯೋಗೆ ಕರೆಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದಕ್ಕೆ ಸಾಕ್ಷಿ ನೀಡಿದ್ದೇನೆ. ನನಗೆ ಅನ್ಯಾಯ ಮಾಡಿದ್ದು, ಸುರೇಶ್ ಬಾಬು ಅವರ ಮಗ. ನನ್ನನ್ನು ಇಷ್ಟು ದಿನ ನಿಂದಿಸುತ್ತಿದ್ದವರು ಧೈರ್ಯವಿದ್ರೆ, ಸುರೇಶ್ ಬಾಬು ಕುಟುಂಬವನ್ನ ಪ್ರಶ್ನಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ಹೆಣ್ಣು ಮಕ್ಕಳಿಗೆ ಅನ್ಯಾವಾಗಿದೆ

ಹಲವು ಹೆಣ್ಣು ಮಕ್ಕಳಿಗೆ ಅನ್ಯಾವಾಗಿದೆ

ಕೇವಲ ನನಗೆ ಮಾತ್ರವಲ್ಲ, ಈ ರೀತಿ ಹಲವು ಹೆಣ್ಣು ಮಕ್ಕಳಿಗೆ ಅಭಿರಾಮ್ ಮೋಸ ಮಾಡಿದ್ದಾನೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ, ಸ್ಟುಡಿಯೋದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಶ್ರೀರೆಡ್ಡಿ ಗಂಭೀರ ಆರೋಪ ಮಾಡ್ತಿದ್ದಾರೆ.

ಇನ್ನು ಹಲವು ಸಿನಿ ಕುಟುಂಬದವರಿದ್ದಾರೆ

ಇನ್ನು ಹಲವು ಸಿನಿ ಕುಟುಂಬದವರಿದ್ದಾರೆ

''ಈಗ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಬಗ್ಗೆ ಮಾತ್ರ ಲೀಕ್ ಮಾಡಿದ್ದೀನಿ. ಇಂಡಸ್ಟ್ರಿಯಲ್ಲಿ ಇನ್ನು ಅನೇಕರು ಈ ರೀತಿ ನಟಿಯರಿಗೆ, ಯುವತಿಯರಿಗೆ ಮೋಸ ಮಾಡಿದ್ದಾರೆ. ಅವರ ಫೋಟೋಗಳು ಕೂಡ ನನ್ನ ಬಳಿ ಇದೆ. ಅದನ್ನ ಕೂಡ ಬಹಿರಂಗಪಡಿಸುತ್ತೇನೆ. ಅವರ ಮನೆಯ ಎದುರು ಅಥವಾ ಸ್ಟುಡಿಯೋ ಎದುರು ಪ್ರತಿಭಟನೆ ಮಾಡಲಿ'' ಎಂದು ಕಿಡಿಕಾರಿದ್ದಾರೆ.

ಕಲಾವಿದರ ಸಂಘದಿಂದ ನಿಷೇದ

ಕಲಾವಿದರ ಸಂಘದಿಂದ ನಿಷೇದ

ತೆಲುಗು ವಾಣಿಜ್ಯ ಮಂಡಳಿ ಎದುರೆ ಅರೆನಗ್ನ ಪ್ರತಿಭಟನೆ ಮಾಡಿದ್ದ ನಟಿಯನ್ನ ಈಗಾಗಲೇ ತೆಲುಗು ಸಿನಿಮಾ ಕಲಾವಿದರ ಸಂಘ ನಿಷೇದ ಮಾಡಿದೆ. ಇದರ ಬೆನ್ನಲ್ಲೆ ಈಗ ಶ್ರೀರೆಡ್ಡಿ ಅಭಿರಾಮ್ ಫೋಟೋ ಲೀಕ್ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

More from Filmibeat

English summary
After getting banned from the Movie Artist Association (MAA), Sri Reddy has been continuously revealing many shocking secrets about Telugu film industry’s people. Recently, Sri Reddy has revealed the name of the top producer’s son’s name and photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X