ಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿ

By Bharath Kumar

ತೆಲುಗು ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಗ್ಗೆ ಹಾಗೂ ಅವರ ತಮ್ಮ ಅಲ್ಲು ಸಿರೀಶ್ ಬಗ್ಗೆ ಕೇಳಿರ್ತೀರಾ. ಆದ್ರೆ, ಮತ್ತೊಬ್ಬ ಅಲ್ಲು ಬ್ರದರ್ ಬಗ್ಗೆ ಬಹುಶಃ ಕೇಳಿರುವುದಿಲ್ಲ.

ಇದೀಗ, ಕಾಸ್ಟಿಂಗ್ ಕೌಚ್ ಖ್ಯಾತಿಯ ನಟಿ ಶ್ರೀರೆಡ್ಡಿ ಅವರನ್ನ ಪರಿಚಯ ಮಾಡಿದ್ದಾರೆ. ಇಷ್ಟು ದಿನ ಮೆಗಾಫ್ಯಾಮಿಲಿ, ದಗ್ಗುಬಾಟಿ ಫ್ಯಾಮಿಲಿ ಸದಸ್ಯರನ್ನ ಟಾರ್ಗೆಟ್ ಮಾಡಿದ್ದ ಶ್ರೀರೆಡ್ಡಿ ಈಗ ಅಲ್ಲು ಅರವಿಂದ್ ಫ್ಯಾಮಿಲಿಯನ್ನ ಗುರಿ ಮಾಡಿದ್ದಾರೆ.

ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ದಗ್ಗುಬಾಟಿ, ಪವನ್ ಕಲ್ಯಾಣ್, ನಾನಿ, ಅಂತಹ ದೊಡ್ಡ ನಟರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಈಕೆ ಈಗ ಅಲ್ಲು ಅರ್ಜುನ್ ಸಹೋದರ ಅಲ್ಲು ಬಾಬಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಏನದು.? ಮುಂದೆ ಓದಿ...

ಅಲ್ಲು ಸಹೋದರನ ಜೊತೆ ಕುಚ್ ಕುಚ್

ಅಲ್ಲು ಸಹೋದರನ ಜೊತೆ ಕುಚ್ ಕುಚ್

ಅಲ್ಲು ಅರ್ಜುನ್ ಅವರ ಅಣ್ಣ ಅಲ್ಲು ಬಾಬಿ ಅವರ ಬಗ್ಗೆ ಸ್ಟೇಟಸ್ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ''ನಾನು ಇತ್ತೀಚಿನ ದಿನಗಳಲ್ಲಿ ಪಬ್ ಗೆ ಬರ್ತಿಲ್ಲ ಅಂತ ನೀನು ನನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಿಯಾ ಎಂದು ನನಗೆ ಗೊತ್ತು ನೊವೊಟೆಲ್ ಸ್ವಿಮ್ಮಿಂಗ್ ಪೂಲ್ ಬಳಿ ನಾವಿಬ್ಬರು ಎಂಜಾಯ್ ಮಾಡಿದ್ವಿ ನೆನಪಿದಿಯಾ'' ಎಂದು ಶ್ರೀರೆಡ್ಡಿ ಬಾಂಬ್ ಸಿಡಿಸಿದ್ದಾರೆ.

ನನ್ನನ್ನು ಬಳಸಿಕೊಂಡಿದ್ದಾರೆ

ನನ್ನನ್ನು ಬಳಸಿಕೊಂಡಿದ್ದಾರೆ

ದುಬಾರಿ ಪಬ್ ಅಂದ್ರೆ ಅಲ್ಲು ಅರ್ಜುನ್ ಸಹೋದರನಿಗೆ ಹೆಚ್ಚು ಒಲವು. ಸದಾ ಪಬ್ ಗಳಲ್ಲಿ ಕಾಲ ಕಳೆಯುವ ಬಾಬಿ ನನ್ನ ಜೊತೆಯೂ ತುಂಬಾ ಚೆನ್ನಾಗಿ ಇದ್ದಾರೆ. ನನ್ನ ಜೊತೆ ಡ್ಯಾನ್ಸ್ ಮಾಡಿದ್ದಾರೆ, ಮಾತಾಡಿದ್ದಾರೆ, ಇನ್ನು ಹೆಚ್ಚು ಕೆಲಸ ಮಾಡಿದ್ದೀವಿ. ಸಮಯ ಬಂದಾಗ ಮಾತಾಡೋಣ, ಇನ್ನು ಸಮಯವಿದೆ ಎಂದು ಶ್ರೀರೆಡ್ಡಿ ಬರೆದುಕೊಂಡಿದ್ದಾರೆ.

ತಮಿಳುನಾಡಲ್ಲಿ ಸಂಚಲನ

ತಮಿಳುನಾಡಲ್ಲಿ ಸಂಚಲನ

ಇಷ್ಟು ದಿನ ತೆಲುಗು ಸಿನಿತಾರೆಯರ ಪಾಲಿಗೆ ಶತ್ರುವಾಗಿದ್ದ ಶ್ರೀರೆಡ್ಡಿ ಈಗ ತಮಿಳುನಾಡಿಗೂ ಕಂಟಕವಾಗಿದ್ದಾರೆ. ನಿರ್ದೇಶಕ ಎಆರ್ ಮುರಗದಾಸ್, ಸುಂದರ್ ಸಿ, ಸಂದಿಪ್ ಕಿಶ್ಣಾಲ್, ಶ್ರೀಕಾಂತ್ ಸೇರಿದಂತೆ ಹಲವರ ಮೇಲೆ ಲೈಂಗಿಕ ದುರ್ಬಳಕೆ ಆರೋಪ ಮಾಡಿದ್ದಾರೆ.

ಸಿಡಿದೆದ್ದ ವಿಶಾಲ್

ಸಿಡಿದೆದ್ದ ವಿಶಾಲ್

ಇನ್ನು ತಮಿಳು ಕಲಾವಿದ ಹಾಗೂ ನಿರ್ದೇಶಕನ್ನ ಟಾರ್ಗೆಟ್ ಮಾಡಿರುವ ಶ್ರೀರೆಡ್ಡಿ ವಿರುದ್ಧ ತಮಿಳು ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆಗಳಿಲ್ಲದೇ ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ ತರ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದ್ರೆ, ಶ್ರೀರೆಡ್ಡಿ ಮಾತ್ರ ವಿಶಾಲ್ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

More from Filmibeat

English summary
Sri reddy actress wrote a message to Allu Bobby, the elder brother of Allu Arjun asking him not to miss her as she is not going to the pubs and clubs where the duo used to meet and dance a lot, also flirting around.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X