»   » ರಕುಲ್ ಪ್ರೀತ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡಿತೀನಿ ಎಂದು ಧಮ್ಕಿ ಹಾಕಿದ ನಟಿ

ರಕುಲ್ ಪ್ರೀತ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡಿತೀನಿ ಎಂದು ಧಮ್ಕಿ ಹಾಕಿದ ನಟಿ

Posted By:
Subscribe to Filmibeat Kannada
ಶ್ರೀರೆಡ್ಡಿ ಬಗ್ಗೆ ಮಾತನಾಡಿದ ಕಂಗನಾ | Filmibeat Kannada

ತೆಲುಗು ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಈಗ ಬಹುಬೇಡಿಕೆಯ ನಟಿ. ಟಾಲಿವುಡ್ ನ ಸ್ಟಾರ್ ನಟರ ಜೊತೆಯಲ್ಲಿ ತೆರೆ ಹಂಚಿಕೊಳ್ಳುತ್ತಿರುವ ರಕುಲ್, ಮೂಲತಃ ಉತ್ತರ ಭಾರತದವರಾಗಿದ್ದರು, ತೆಲುಗಿನ ನಟಿಯೇ ಆಗಿಬಿಟ್ಟಿದ್ದಾರೆ.

ಹೀಗೆ, ಮುದ್ದಾದ ಅಭಿನಯ ಮತ್ತು ಸೌಂದರ್ಯದಿಂದ ತೆಲುಗು ಜನರ ಮನಸ್ಸು ಕದ್ದಿರುವ ರಕುಲ್ ಗೆ ಈಗ ತೆಲುಗು ನಟಿಯರೇ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ಇಂತಹದೊಂದು ಪರಿಸ್ಥಿತಿ ಈಗ ಟಾಲಿವುಡ್ ನಲ್ಲಿ ನಿರ್ಮಾಣವಾಗಿದೆ.

ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ.!

ಅದು ಎಷ್ಟರ ಮಟ್ಟಿಗೆ ಅಂದ್ರೆ, ತೆಲುಗಿನ ನಟಿಯೊಬ್ಬರು ರಕುಲ್ ಪ್ರೀತ್ ಸಿಂಗ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡೆಯುತ್ತೇವೆ ಎಂದು ಧಮ್ಕಿ ಹಾಕುವ ಹಂತಕ್ಕೆ ಟಾರ್ಗೆಟ್ ಆಗುತ್ತಿದ್ದಾರೆ. ಅಷ್ಟಕ್ಕೂ, ರಕುಲ್ ಮಾಡಿದ ತಪ್ಪೇನು.? ರಕುಲ್ ಮೇಲೆ ಏಕೆ ತೆಲುಗು ನಟಿಯ ಕೋಪ ಎಂಬುದು ಪೂರ್ತಿ ತಿಳಿಯಲು ಈ ಸ್ಟೋರಿ ಪೂರ್ತಿ ಓದಿ....

'ಕಾಸ್ಟಿಂಗ್ ಕೌಚ್' ಬಗ್ಗೆ ಮಾತನಾಡಿದ್ದೇ ತಪ್ಪಾಯಿತು

ಸದ್ಯ, ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶ್ರೀರೆಡ್ಡಿ, ಮಾಧವಿ ಲತಾ ಎಂಬ ತೆಲುಗು ನಟಿಯರು ನಿರ್ಮಾಪಕ, ನಿರ್ದೇಶಕ, ನಟರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನಮಗೆ ವಂಚಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇಂತಹ ಸಮಯದಲ್ಲಿ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ ಎಂದಿದ್ದರು. ಇದು ಸಹಜವಾಗಿ ಕೆಲವರಿಗೆ ಕೋಪಕ್ಕೆ ಕಾರಣವಾಗಿದೆ.

ರಕುಲ್ ಪ್ರೀತ್ ಭಾಷಣದಲ್ಲಿ ಏನಿತ್ತು.?

ತೆಲುಗು ಸಿನಿ ಕಲಾವಿದರು ಸೇರಿ ಮಾಡಿದ್ದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ರಕುಲ್ ಪ್ರೀತ್ ಸಿಂಗ್ ''ಶ್ರೀ ರೆಡ್ಡಿ ಮತ್ತು ಮಾಧವಿ ಲತಾ ಅವರ ಬಗ್ಗೆ ನನಗೆ ಗೊತ್ತಿಲ್ಲ. ಕಾಸ್ಟಿಂಗ್ ಕೌಚ್ ಎಂಬುದು ತೆಲುಗು ಇಂಡಸ್ಟ್ರಿಯಲ್ಲಿಲ್ಲ. ನಾನು ಟಾಲಿವುಡ್ ಕ್ಷೇತ್ರದಲ್ಲಿ ಸುರಕ್ಷಿತವಾಗಿದ್ದೇನೆ. ಅಂತಹ ಸಂದರ್ಭಗಳು ಇಲ್ಲಿಲ್ಲ. ನಾನು ಮುಂಬೈನಲ್ಲಿ ಕೂಡ ಇದೇ ಹೇಳುತ್ತೇನೆ'' ಎಂದಿದ್ದರು.

ಕೋಟಿ ರೂಪಾಯಿ ಕೊಟ್ಟರು ಅರ್ಹತೆ ಇರುತ್ತೆ.!

''ನಾನು ಅವಕಾಶಕ್ಕಾಗಿ ಯಾರ ಬಳಿಯೂ ಹೋಗಿಲ್ಲ. ಬೇರೆಯವರು ಅವಕಾಶಕ್ಕಾಗಿ ಹೋಗ್ತಾರೇನೂ ನನಗೆ ಗೊತ್ತಿಲ್ಲ. ಇಲ್ಲಿಯವರೆಗೂ ಯಾವುದೇ ಅನುಭವ ಆಗಿಲ್ಲ. ಕೋಟಿ ರೂಪಾಯಿ ಕೊಟ್ಟರು ಅಲ್ಲಿ ಅರ್ಹತೆಗೆ ಮಾತ್ರ ಬೆಲೆ ಇರುತ್ತೆ. ಪ್ರತಿಭೆ ಇದ್ದರೇ ಮಾತ್ರವೇ ಕೋಟಿ ರೂಪಾಯಿ ಸಿನಿಮಾಗಳಲ್ಲಿಯೂ ಅವಕಾಶ ಸಿಗೋದು'' ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಧಮ್ಕಿ ಹಾಕಿದ ಶ್ರೀರೆಡ್ಡಿ

ರಕುಲ್ ಪ್ರೀತ್ ಸಿಂಗ್ ಅವರ ಈ ಹೇಳಿಕೆಯನ್ನ ಖಂಡಿಸಿರುವ ನಟಿ ಶ್ರೀರೆಡ್ಡಿ ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಕುಲ್ ಅವರನ್ನ ಹೀಯಾಳಿಸಿದ್ದಾರೆ. ಉತ್ತರ ಭಾರತದಿಂದ ಬಂದು ಇಲ್ಲಿ ಮಾತನಾಡಬೇಡ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ, ಜಾಸ್ತಿ ಮಾತಾಡಿದ್ರೆ ಶೂಟಿಂಗ್ ಸ್ಥಳಕ್ಕೆ ಬಂದ ಹೊಡೆಯುತ್ತೇವೆ ಎಂದು ಅವಾಝ್ ಹಾಕಿದ್ದಾರೆ.

English summary
Actor Rakul Preet Singh reacts to the accusations made by Telugu actors Maadhavi Latha and Sri Reddy, who recently staged a protest against sexual harassment in Tollywood by stripping. now, Srireddy warns indirectly to Rakul Preet Singh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X