»   » 'IFFI 2017' ಕಾರ್ಯಕ್ರಮದಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ

'IFFI 2017' ಕಾರ್ಯಕ್ರಮದಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ

Posted By:
Subscribe to Filmibeat Kannada
IFFI 2017' ಕಾರ್ಯಕ್ರಮದಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ | Filmibeat Kannada

48ನೇ IFFI (International Film Festival of India) ಕಾರ್ಯಕ್ರಮ ನಿನ್ನೆ ಗೋವಾದಲ್ಲಿ ಪ್ರಾರಂಭವಾಗಿದೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಶ್ರೀದೇವಿ ಮತ್ತು ಅವರ ಪುತ್ರಿ ಜಾಹ್ನವಿ ಭಾಗಿಯಾಗಿದ್ದರು.

ಸದ್ಯ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಯಾಗುವುದಕ್ಕೆ ಸಿದ್ಧವಾಗಿರುವ ಶ್ರೀದೇವಿ ಪುತ್ರಿ ಜಾಹ್ನವಿ, ಕಾರ್ಯಕ್ರಮದಲ್ಲಿ ತಾಯಿಯೊಂದಿಗೆ ಸಖತ್ತಾಗಿ ಮಿಂಚಿದರು. ಇನ್ನು ''ಗೋವಾದಲ್ಲಿ ಪ್ರಾರಂಭವಾದ ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು ಖುಷಿ ನೀಡಿದೆ'' ಎಂದು ಶ್ರೀದೇವಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಾರ್ಯಕ್ರಮದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಉಳಿದಂತೆ ಕಾರ್ಯಕ್ರಮದಲ್ಲಿ ನಟ ಶಾರೂಖ್ ಖಾನ್, ಅನುಪಮ್ ಖೇರ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಾಗಿದ್ದರು.

Sridevi And Daughter Janhvi Kapoor in IFFI 2017

ಅಂದಹಾಗೆ, ಈ ಬಾರಿ ನಡೆಯುತ್ತಿರುವ IFFI ಕಾರ್ಯಕ್ರಮದಲ್ಲಿ ಒಟ್ಟು 82 ದೇಶದ 195 ಸಿನಿಮಾಗಳು ಪ್ರದರ್ಶನವಾಗಲಿದೆ. ನಿನ್ನೆ ಶುರುವಾಗಿರುವ ಈ ಕಾರ್ಯಕ್ರಮ ನವೆಂಬರ್ 28ಕ್ಕೆ ಅಂತ್ಯವಾಗಲಿದೆ.

English summary
Sridevi And Daughter Jhanvi kapoor in IFFI 2017. ಐ.ಐ.ಎಫ್.ಎ 2017 ಕಾರ್ಯಕ್ರಮದಲ್ಲಿ ನಟಿ ಶ್ರೀ ದೇವಿ ಮತ್ತು ಅವರ ಪುತ್ರಿ ಜಾನವಿ ಭಾಗಿಯಾಗಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada