ಯುವ ಹಾಗೂ ಆ ನಟಿ ಬಗ್ಗೆ ಏನ್ ಹೇಳ್ತೀರಾ? ನೆಟ್ಟಿಗನ ಪ್ರಶ್ನೆಗೆ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ

By ಫಿಲ್ಮಿಬೀಟ್ ಡೆಸ್ಕ್

ನಟ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದೂರಾಗಲು ನಿರ್ಧರಿಸಿದ್ದಾರೆ. ಪತ್ನಿಯಿಂದ ವಿಚ್ಛೇದನ ಕೋರಿ ಯುವ ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ಇನ್ನು ಮುಕ್ತಾಯವಾಗಿಲ್ಲ. ಯುವ ಹಾಗೂ ಆ ನಟಿಯ ನಡುವೆ ಆಪ್ತ ಸಂಬಂಧವಿದೆ ಎಂದು ಶ್ರೀದೇವಿ ಆರೋಪಿಸಿದ್ದು ಗೊತ್ತೇಯಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ಶ್ರೀದೇವಿ ಭೈರಪ್ಪ ನೆಟ್ಟಿಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸದ್ಯ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ನೆಟ್ಟಿಗರ ವಿಚಿತ್ರ ಪ್ರಶ್ನೆಗಳಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಯುವ ಹಾಗೂ ಆ ನಟಿಯ ಬಗ್ಗೆ ಏನು ಹೇಳುತ್ತೀರಾ ಎಂದು ಒಬ್ಬರು ಕೇಳಿದ್ದಾರೆ. ನಟಿಯ ಹೆಸರನನು ಬ್ಲರ್ ಮಾಡಿ ಆ ಪ್ರಶ್ನೆಗೆ ಶ್ರೀದೇವಿ ಉತ್ತರ ಕೊಟ್ಟಿದ್ದಾರೆ.

Sridevi Bhyrappa s Sharp Instagram Replies on actress Amid Yuva Rajkumar Divorce Row Go Viral

ಶ್ರೀದೇವಿ ಭೈರಪ್ಪ, ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಆ ನಟಿ ಕೂಡ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಅದೇ ಕಾರಣಕ್ಕೆ ಆಕೆಯ ಹೆಸರನ್ನು ಅಳಿಸಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗನ ಪ್ರಶ್ನೆಗೆ ರಿಪ್ಲೇ ಮಾಡಿ "ಮೋಸ ಮಾಡುವುದು ಒಂದು ಆಯ್ಕೆ, ತಪ್ಪಲ್ಲ" ಎಂದು ಯುವರಾಜ್‌ಕುಮಾರ್ ಬಗ್ಗೆ ಕುಟುಕಿದ್ದಾರೆ. ಸದ್ಯ ಈ ಸ್ಕ್ರೀನ್‌ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅದಕ್ಕೂ ಮುನ್ನ ಅಭಿಮಾನಿಯೊಬ್ಬರು ಯುವರಾಜ್‌ಕುಮಾರ್ ಬಗ್ಗೆ ಏನ್ ಹೇಳ್ತೀರಾ? ಎನ್ನುವ ಪ್ರಶ್ನೆಗೆ "ಬಾನಿಗೊಂದು ಎಲ್ಲೆ ಎಲ್ಲಿದೆ' ಹಾಡನ್ನು ಶ್ರೀದೇವಿ ಹಂಚಿಕೊಂಡಿದ್ದದು. "ನಿಮ್ಮ ಮದುವೆ ಯಾವಾಗ ಅಕ್ಕಾ" ಮತ್ತೊಬ್ಬರು ಕೇಳಿದ್ದಕ್ಕೆ ನಗುವ ಎಮೋಜಿಯನ್ನು ಶ್ರೀದೇವಿ ಹಾಕಿಕೊಂಡಿದ್ದರು. ಮದುವೆ ಬೇಡವೇ ಬೇಡ, ಅದರಂತಹ ನರಕ ಮತ್ತೊಂದಿಲ್ಲ ಎನ್ನುವಂತೆ ರೀಲ್ ಒಂದನ್ನು ಕೂಡ ಪೋಸ್ಟ್ ಮಾಡಿದ್ದರು.

Sridevi Bhyrappa s Sharp Instagram Replies on actress Amid Yuva Rajkumar Divorce Row Go Viral

7 ವರ್ಷಗಳ ಕಾಲ ಪ್ರೀತಿಸಿ ಬಳಿಕ ಪೋಷಕರ ಒಪ್ಪಿಗೆ ಪಡೆದು 2019ರಲ್ಲಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಮದುವೆ ಆಗಿದ್ದರು. 4 ವರ್ಷಗಳ ಬಳಿಕ ಡಿವೋರ್ಸ್ ಕೋರಿ ಯುವ ಅರ್ಜಿ ಸಲ್ಲಿಸಿದ್ದರು. ಯುವ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡುವಾಗ ಆ ನಟಿಯ ಹೆಸರನ್ನು ಶ್ರೀದೇವಿ ತೆಗೆದುಕೊಂಡಿದ್ದರು. ಆ ನಟಿ ಹಾಗೂ ಯುವರಾಜ್ ಸಂಬಂಧದಲ್ಲಿದ್ದಾರೆ. ನಾನು ಅಮೆರಿಕಕ್ಕೆ ಹೋದಾಗ ಇಬ್ಬರೂ ಸಜೀವನ ನಡೆಸಿದ್ದಾರೆ, ಆಕೆಗೋಸ್ಕರ ನನ್ನನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನ ನಡೆದಿತ್ತು ಎಂದು ಶ್ರೀದೇವಿ ತಮ್ಮ ವಕೀಲರ ಮೂಲಕ ಆರೋಪ ಮಾಡಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಆ ನಟಿ ಕೋರ್ಟ್‌ಗೆ ಹೋಗಿದ್ದರು. ನಿರ್ಭಂದಕಾಜ್ಞೆ ಆದೇಶಿಸಿದ್ದ ಸಿಟಿ ಸಿವಿಲ್ ಕೋರ್ಟ್ ಶ್ರೀದೇವಿ ಅವರಿಗೆ ನೊಟೀಸ್ ಜಾರಿ ಮಾಡುವಂತೆ ಆದೇಶಿಸಿತ್ತು. ಅವಕಾಶ ಸಿಕ್ಕಾಗಲೆಲ್ಲಾ ಯುವ ಹಾಗೂ ಅವರ ಕುಟುಂಬದವ ಮೇಲೆ ಶ್ರೀದೇವಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಡಿಗೇಡಿಗಳು ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದರು. ಆಗ ಶಿವಣ್ಣ, ಗೀತಾ ದಂಪತಿ ಹಾಗೂ ವಿನಯ್ ರಾಜ್‌ಕುಮಾರ್ ರಮ್ಯಾಗೆ ಬೆಂಬಲ ಸೂಚಿಸಿದ್ದರು. ಆಗ ಶ್ರೀದೇವಿ ಪ್ರತಿಕ್ರಿಯಿಸಿ ವ್ಯಂಗ್ಯವಾಡಿ ತಿರುಗೇಟು ನೀಡಿದ್ದರು. ನಿಮ್ಮ ಮನೆಯಲ್ಲಿ ಒಂದು ಹೆಣ್ಣಿಗೆ ಅನ್ಯಾಯವಾದಾಗ ಏನು ಮಾಡ್ತಿದ್ರಿ ಎಂದು ಪ್ರಶ್ನಿಸಿದ್ದರು.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕಾಗಿ ಶ್ರೀದೇವಿ ಭೈರಪ್ಪ ತೆರಳಿದ್ದರು. ಯುವ ರಾಜ್‌ಕುಮಾರ್ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'ಯುವ' ಬಳಿಕ 'ಎಕ್ಕ' ಚಿತ್ರದಲ್ಲಿ ನಟಿಸಿದ್ದರು. ದುನಿಯಾ ಸೂರಿ ನಿರ್ದೇಶನದಲ್ಲಿ 3ನೇ ಸಿನಿಮಾ ಮೂಡಿ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X