ಯುವ ಬಗ್ಗೆ ಹೀಗಂದಿದ್ದೇಕೆ ಶ್ರೀದೇವಿ ಭೈರಪ್ಪ? ಮದುವೆ ಯಾವಾಗ ಅಂದಿದ್ದಕ್ಕೆ ಉತ್ತರ ಏನು?
ಪತ್ನಿಯಿಂದ ಡಿವೋರ್ಸ್ ಕೇಳಿ ನಟ ಯುವರಾಜ್‌ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇಯಿದೆ. ಮದುವೆಯಾಗಿ 5 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಲು ನಿರ್ಧರಿಸಿದ್ದರು. ಯುವ ರಾಜ್‌ಕುಮಾರ್ ಮೇಲೂ ಶ್ರೀದೇವಿ ಭೈರಪ್ಪ ಗಂಭೀರ ಆರೋಪಗಳನ್ನ ಮಾಡಿದ್ದರು.
"ವೃತ್ತಿಪರ ಸೌಹಾರ್ಧತೆಯನ್ನು ಕಾಪಾಡಿಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ" ಎಂದು ಬೇಸರ ಹೊರಹಾಕಿದ್ದರು. ಲೀಗಲ್ ನೋಟೀಸ್‌ಗೆ ಶ್ರೀದೇವಿ ವಕೀಲರ ಮೂಲಕ ಉತ್ತರ ಕೊಟ್ಟಿದ್ದರು.

ವಿದ್ಯಾಭ್ಯಾಸಕ್ಕಾಗಿ ಶ್ರೀದೇವಿ ಭೈರಪ್ಪ ವಿದೇಶದಲ್ಲಿ ಇದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಕೆ ಆಗಾಗ್ಗೆ ಇನ್‌ಸ್ಟ್ರಾಮ್ ಸ್ಟೋರಿಯಲ್ಲಿ ಮನಸ್ಸಿನ ಭಾವನೆಗಳು ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಮದುವೆ, ಯುವರಾಜ್‌ಕುಮಾರ್ ಬಗ್ಗೆ ಹಾಕಿರುವ ಸ್ಟೋರಿಗಳು ವೈರಲ್ ಆಗುತ್ತಿದೆ. "ಮದುವೆ ಬೇಡ, ಮದುವೆ ಆಗಿ ನೋವು ಅನುಭವಿಸುವುದು ಬೇಡ" ಎನ್ನುವ ರೀಲ್‌ವೊಂದನ್ನು ಶ್ರೀದೇವಿ ಹಂಚಿಕೊಂಡಿದ್ದಾರೆ.
ನೀವು ಅತಿಹೆಚ್ಚು ಕೇಳಿದ ಹಾಡು ಯಾವುದು ಎಂದು ಶ್ರೀದೇವಿ ಭೈರಪ್ಪ ಒಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಾಕಷ್ಟು ಜನ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಯುವ ರಾಜ್‌ಕುಮಾರ್ ಹಾಗೂ ಮದುವೆ ಬಗೆ ಕೇಳಿದ್ದಾರೆ. ಅದಕ್ಕೆ ತಮ್ಮದೇ ಶೈಲಿಯಲ್ಲಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಯುವರಾಜ್‌ಕುಮಾರ್ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದಾರೆ. ಅದಕ್ಕೆ "ಬಾನಿಗೊಂದು ಎಲ್ಲೆ ಎಲ್ಲಿದೆ" ಹಾಡಿನ ಲಿಂಕ್ ಅನ್ನು ಶ್ರೀದೇವಿ ಹಂಚಿಕೊಂಡಿದ್ದಾರೆ.

"ನಿಮ್ಮ ಮದುವೆ ಯಾವಾಗ ಅಕ್ಕಾ"? ಎಂದು ಮತ್ತೊಬ್ಬರು ಕೇಳಿದ್ದಾರೆ. ಅದಕ್ಕೆ ನಗುವ ಎಮೋಜಿಯನ್ನು ಶ್ರೀದೇವಿ ಭೈರಪ್ಪ ಹಾಕಿಕೊಂಡಿದ್ದಾರೆ. ಮದುವೆ ಸಹವಾಸವೇ ಸಾಕು ಎನ್ನುವಂತೆ ಕಾಮೆಂಟ್ ಮಾಡಿದ್ದಾರೆ. ಅದು ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಶ್ರೀದೇವಿ ಯುವ ರಾಜ್‌ಕುಮಾರ್‌ಗೆ ತಿರುಗೇಟು ಕೊಟ್ಟುತ್ತಾ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ಕಿಡಿಗೇಡಿಗಳು ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ವಿನಯ್ ರಾಜ್‌ಕುಮಾರ್ ಹಾಗೂ ಶಿವಣ್ಣ ದಂಪತಿ ಆಕೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರು. ಇದಕ್ಕೆ ಶ್ರೀದೇವಿ ಭೈರಪ್ಪ ವ್ಯಂಗ್ಯವಾಡಿದ್ದರು.
ಶಿವಣ್ಣ ಮಾಡಿದ್ದ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿ "ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲಾ ನಡೆಯುವಾಗ ಮಾತಾಡದೆ ಸುಮ್ಮನೆ ಇದ್ರಲ್ಲ, ಅವಾಗ ನಿದ್ದೆ ಮಾಡ್ತಾ ಇದ್ರಾ ಎಲ್ಲಾ?" ಎಂದು ಶ್ರೀದೇವಿ ಅಣಕವಾಡಿದ್ದರು.
ವಿನಯ್ ರಾಜ್‌ಕುಮಾರ್ ಮಾಡಿದ್ದ ಪೋಸ್ಟ್ ನೋಡಿ "ಇಷ್ಟು ದಿನ ಎಲ್ಲಿದ್ದಪ್ಪ" ಎಂದು ಶ್ರೀದೇವಿ ಕುಹಕವಾಡಿದ್ದರು. 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಜವಾಬ್ದಾರಿಯನ್ನು ಶ್ರೀದೇವಿ ವಹಿಸಿಕೊಂಡಿದ್ದರು. 7 ವರ್ಷಗಳ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಮೈಸೂರಿನಲ್ಲಿ ಹುಟ್ಟಿ ಬೆಳೆದವರು ಶ್ರೀದೇವಿ. ತಮ್ಮ ಮಗಳ ಮೇಲಿನ ಆರೋಪಗಳಿಗೆ ತಂದೆ ಭೈರಪ್ಪ ಕೂಡ ತಿರುಗೇಟು ನೀಡಿದ್ದರು.
ಯುವರಾಜ್ ನನ್ನ ಜೊತೆ ಬಹಳ ಚೆನ್ನಾಗಿಯೇ ಇದ್ದ. ನನಗೆ ಹುಷಾರಿಲ್ಲ ಅಂದ್ರೆ ಇಬ್ಬರೂ ಬರುತ್ತಿದ್ದರು. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ಗೊತ್ತಿರುವಂತೆ ಅವರ ಮನೆಯವರದ್ದೇ ಸಮಸ್ಯೆ. ಅವರೇ ಹೇಳಿಕೊಟ್ಟ ಹೀಗೆಲ್ಲಾ ಮಾಡಿಸುತ್ತಿದ್ದಾರೆ. ಹಣ ಆಸ್ತಿ ವಿಚಾರಕ್ಕೆ ಮನಸ್ತಾಪ ಎನ್ನುವುದು ಸುಳ್ಳು. ಅವರಿಗಿಂತ ನಮ್ಮ ಬಳಿ ಜಾಸ್ತಿ ಆಸ್ತಿ ಇದೆ ಎಂದು ಶ್ರೀದೇವಿ ತಂದೆ ಭೈರಪ್ಪ ಟಿವಿ9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.


Click it and Unblock the Notifications











