ಡಾ.ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಯಾರು..?

By ಫಿಲ್ಮಿಬೀಟ್ ಡೆಸ್ಕ್

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ವಿಚಾರದಲ್ಲಿ ಕೂಡ ಸದ್ಯಕ್ಕೆ ಇದೇ ಆಗಿದ್ದು.

ಹೌದು, ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಯಬಹುದಾಗಿದ್ದ, ಬಗೆ ಹರಿಸಬೇಕಿದ್ದ .. ಯುವರಾಜ್ ಕುಮಾರ್ ಮತ್ತು ಶ್ರೀದೇವಿಯ ವಿರಸ ಪ್ರಸಂಗದ ಕುರಿತು ಬೀದಿಯಲ್ಲಿ ನಿಂತು ಜನ ಮಾತನಾಡುತ್ತಿದ್ದಾರೆ. ದೊಡ್ಮನೆಯಲ್ಲಿ ಹೀಗಾಗಬಾರದಿತ್ತು ಎಂದು ಮರಮರ ಮರಗುತ್ತಿದ್ದಾರೆ. ಇನ್ನೂ ಕೆಲವರು ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಡಿ, ಜೊತೆಯಾಗಿ ಬದುಕಿ ಬಾಳಿ ಎಂಬ ಸಲಹೆಯನ್ನೂ ಕೂಡ ಕೊಡುತ್ತಿದ್ದಾರೆ. ಆದರೆ ಹಿತವಾಗಿದ್ದರೆ ಸಂಸಾರ. ಹಿತ ತಪ್ಪಿದ ಮೇಲೆ ಯಾರಿಗ್ಯಾರು ಇಲ್ಲ. ಈ ಸತ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಿಳಿ ಹಾಳೆಗಳು ಸದ್ಯಕ್ಕೆ ಹೇಳುತ್ತಿವೆ.

Sridevi Byrappa s counter notice post-divorce filing went viral

ಹೌದು. ಯುವ ರಾಜ್‌ಕುಮಾರ್ ನೀಡಿದ ಲೀಗಲ್ ನೋಟೀಸ್‌ಗೆ ಶ್ರೀದೇವಿ ತಮ್ಮ ವಕೀಲರ ಮೂಲಕ ನೀಡಿದ್ದಾರೆ ಎನ್ನಲಾದ ರಿಪ್ಲೈ ನೋಟೀಸ್‌ವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಬರೋಬ್ಬರಿ ಹತ್ತು ಪೇಜ್ ಇರುವ ಈ ನೋಟೀಸ್‌ ನಲ್ಲಿ ಹನ್ನೊಂದು ಅಂಶಗಳನ್ನ ಉಲ್ಲೇಖಿಸಲಾಗಿದೆ. ಆ ಹನ್ನೊಂದರಲ್ಲಿ 07.08 ಮತ್ತು 09ರಲ್ಲಿ ದಾಖಲಾದ ಅಂಶಗಳು ಹೀಗಿವೆ.

7. ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮತ್ತು ಡಾ. ರಾಜ್‌ಕುಮಾರ್ ಅವರ ಕಲಿಕೆಯ ಅಪ್ಲಿಕೇಶನ್ ಹಿಂದಿನ ರೂವಾರಿ ನಮ್ಮ ಕಕ್ಷಿದಾರದಾರು ( ಶ್ರೀದೇವಿ ಬೈರಪ್ಪ) ಅವರೇ ಹೊರತು ಬೇರೆಯವರು ಅಲ್ಲ. ನಿಮ್ಮ ಕ್ಲೈಂಟ್‌ನ ( ಯುವರಾಜ್ ಕುಮಾರ್ ) ಕುಟುಂಬದಿಂದ ನಡೆಸಲ್ಪಡುವ ಮತ್ತು ನಿರ್ವಹಿಸಲ್ಪಡುವ ಇತರ ಉದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಪಾಲುದಾರಿಕೆಯಲ್ಲಿ ಶುರುವಾದ ಸಂಸ್ಥೆಗಳೇ ಇವೆರಡು.

Sridevi Byrappa s counter notice post-divorce filing went viral

ಹಲವಾರು ಸ್ಥಿರ ಸ್ವತ್ತುಗಳನ್ನು ಹೊಂದಿದ್ದರೂ ದಿನನಿತ್ಯದ ಕಾರ್ಯನಿರ್ವಹಣೆಯನ್ನು ನಿರ್ವಹಿಸಲು ಕಷ್ಟಪಡುತ್ತಿದ್ದ ಅಸ್ಥಿರತೆ ಮತ್ತು ಅವ್ಯವಸ್ಥೆಯ ಕುಟುಂಬಕ್ಕೆ ನಮ್ಮ ಕಕ್ಷಿದಾರದಾರು ( ಶ್ರೀದೇವಿ ಬೈರಪ್ಪ) ಮದುವೆಯಾಗಿ ಸೇರಿದರು. ಮದುವೆಗೆ ಮುಂಚೆಯೇ ಮನೆಯನ್ನು ನಡೆಸುವ ಹೊರೆಯನ್ನು ಹೊತ್ತುಕೊಂಡರು. ಇನ್ನೂ ಮದುವೆ ಸಮಯದಲ್ಲಿ ನಿಮ್ಮ ಕ್ಲೈಂಟ್‌ನ (ಯುವರಾಜ್ ಕುಮಾರ್) ಕುಟುಂಬ ನಡೆಸುತ್ತಿದ್ದ ವ್ಯವಹಾರ ನಷ್ಟದಲ್ಲಿದ್ದಿದ್ದು ತಿಳಿದ ಸಂಗತಿ. ಹೀಗಾಗಿಯೇ ಕುಟುಂಬ ಉಳಿಸಿಕೊಳ್ಳಲು, ಆರ್ಥಿಕವಾಗಿ ನೆರವಾಗಲು ಈ ಎರಡು ಸಂಸ್ಥೆಗಳನ್ನ ಆರಂಭ ಮಾಡಲಾಗಿತ್ತು. ತಮ್ಮ ಸ್ವಂತ ಗಳಿಕೆಯ ಮೂಲಕ ಹಣವನ್ನು ತಂದ ಕಾರಣ ನಿಮ್ಮ ಕ್ಲೈಂಟ್‌ನ ( ಯುವರಾಜ್ ಕುಮಾರ್ ) ಬದುಕಿನಲ್ಲಿ ಸ್ಥಿರತೆ ಕಂಡು ಬಂತು.

ಇನ್ನೂ ಹಣಕಾಸಿಗೆ ಸಂಬಂಧಿಸಿದ ವ್ಯವಹಾರ ಮತ್ತು ನಿರ್ಧಾರ ನಿಮ್ಮ ಕ್ಲೈಂಟ್‌ (ಯುವರಾಜ್ ಕುಮಾರ್) ಅವರದ್ದೇ ಆಗಿತ್ತು. ನಮ್ಮ ಕಕ್ಷಿದಾರದಾರು ( ಶ್ರೀದೇವಿ ಬೈರಪ್ಪ) ನಿಮ್ಮ ಕ್ಲೈಂಟ್‌(ಯುವರಾಜ್ ಕುಮಾರ್) ಸೂಚನೆಯಂತೆ ಕಾರ್ಯವನ್ನ ನಿರ್ವಹಿಸುತ್ತಿದ್ದರು.ಇನ್ನೂ ನಿಮ್ಮ ಕ್ಲೈಂಟ್‌ (ಯುವರಾಜ್ ಕುಮಾರ್) ಕಛೇರಿಯಲ್ಲಿ ತನ್ನ ಅಲಭ್ಯತೆಯನ್ನು ಬಹಳ ಜಾಣತನದಿಂದ ಉಲ್ಲೇಖಿಸಿದ್ದಾರೆ ಮತ್ತು ಹಣಕಾಸಿನ ನಿರ್ಧಾರಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರದೆ ನಮ್ಮ ಕಕ್ಷಿದಾರರನ್ನೇ ಎಲ್ಲ ವಹಿವಾಟುಗಳಿಗೆ ಜವಾಬ್ಧಾರಿಯನ್ನಾಗಿಸಿದ್ದಾರೆ.ಆದರೆ ವಾಸ್ತವದಲ್ಲಿ ನಿಮ್ಮ ಕ್ಲೈಂಟ್‌ (ಯುವರಾಜ್ ಕುಮಾರ್) ಮತ್ತು ಅವರ ತಂಡ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಜೊತೆ ಎಲ್ಲವನ್ನೂ ನಿಯಂತ್ರಣ ಮಾಡುತ್ತಿದ್ದರು. ನಿಮ್ಮ ಕ್ಲೈಂಟ್ (ಯುವರಾಜ್ ಕುಮಾರ್) ಒದಗಿಸಿದ ಅನುಮೋದನೆಗಳ ಆಧಾರದ ಮೇಲೆ ಬ್ಯಾಂಕ್ ವರ್ಗಾವಣೆಗಳಿಗೆ OTP ಗಳನ್ನು ಒದಗಿಸುವುದು ಮತ್ತು ಕುಟುಂಬ ಮತ್ತು ಆಪ್ತ
ಸ್ನೇಹಿತರಿಗೆ ನೀಡಬೇಕಾದ ಕೆಲವು ಹಣಕಾಸಿನ ನಿರ್ವಹಣೆಯನ್ನು ಸಕ್ರಿಯಗೊಳಿಸುವುದನ್ನು ಹೊರತುಪಡಿಸಿ, ನಮ್ಮ ಕಕ್ಷಿದಾರದಾರು (ಶ್ರೀದೇವಿ ಬೈರಪ್ಪ) ತನ್ನ ಸ್ವಂತ ಉಪಯೋಹಕ್ಕೆ ಯಾವುದೇ ಹಣ ಬಳಿಸಿಲ್ಲ. ಅಕಾಡೆಮಿಯನ್ನು ಸ್ಥಾಪಿಸುವಲ್ಲಿನ ಅಸಮರ್ಥತೆ ಭಾಗಶಃ ನಿಜವಾಗಿದೆ ಆದರೆ ಅಸಮರ್ಥತೆ, ದುರುಪಯೋಗ, ಮತ್ತು ದುಷ್ಕೃತ್ಯಗಳ ಎಲ್ಲಾ ಆರೋಪಗಳನ್ನು ನಿರಾಕರಿಸಲಾಗಿದೆ ಮತ್ತು ನಿಮ್ಮ ಕ್ಲೈಂಟ್‌ಗೆ ಕಟ್ಟುನಿಟ್ಟಾದ ಪುರಾವೆಗಳನ್ನು ಹಾಕಲಾಗುತ್ತದೆ. Ms.ಗಿರಿಜಾ ಶ್ರೀನಿವಾಸ್ ಅವರ ಹಕ್ಕುಗಳು ನ್ಯಾಯಾಂಗ ದಾಖಲೆಯಾಗಿದೆ ಮತ್ತು ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ. ನಮ್ಮ ಕಕ್ಷಿದಾರರ ( ಶ್ರೀದೇವಿ ಬೈರಪ್ಪ ) ಜೊತೆ ಭಿನ್ನಾಭಿಪ್ರಾಯಗಳಿದ್ದರೆ ಕಳೆದ 08 ವರ್ಷಗಳಿಂದ ನಿಮ್ಮ ಕ್ಲೈಂಟ್‌ ( ಯುವರಾಜ್ ಕುಮಾರ್ ) ಮೌನವಾಗಿದ್ದೇಕೆ..? ಕ್ರಮ ತೆಗೆದುಕೊಳ್ಳದಿರಲು ಕಾರಣವೇನು..? ನಿಮ್ಮ ಕ್ಲೈಂಟ್‌ ( ಯುವರಾಜ್ ಕುಮಾರ್ ) ನಮ್ಮ ಕಕ್ಷಿದಾರರ ( ಶ್ರೀದೇವಿ ಬೈರಪ್ಪ ) ಜೊತೆಯ ಪಾಲುದಾರಿಕೆಯನ್ನ ಯಾಕೆ ಮುರಿಯಲಿಲ್ಲ..? ಅವರ ಸಹ ನಟಿ ಎಂ.ಸಪ್ತಮಿ ಗೌಡ ಅವರೊಂದಿಗಿನ ಸಂಬಂಧ ಬೆಳಕಿಗೆ ಬಂದಾಗ ಮಾತ್ರ ನಮ್ಮ ಕಕ್ಷಿದಾರರ ( ಶ್ರೀದೇವಿ ಬೈರಪ್ಪ) ವಿರುದ್ಧ ಈ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಏಕೆ..?

Sridevi Byrappa s counter notice post-divorce filing went viral

8. ನಮ್ಮ ಕಕ್ಷಿದಾರದಾರು ( ಶ್ರೀದೇವಿ ಬೈರಪ್ಪ) ನಿಮ್ಮ ಕ್ಲೈಂಟ್ (ಯುವರಾಜ್ ಕುಮಾರ್) ಅವರನ್ನು ತನ್ನ ಪೂರ್ವಜರ ಕುಟುಂಬದ ಆಸ್ತಿ ಮೂಲಕ ಸಾಲವನ್ನು ಪಡೆದುಕೊಳ್ಳಲು ಒತ್ತಾಯಿಸಿದರು, ಅಕಾಡೆಮಿಯ ಹೊರಗಿನ ತನ್ನ ವೈಯಕ್ತಿಕ ವ್ಯವಹಾರದ ಆಕಾಂಕ್ಷೆಗಳಿಗಾಗಿ ಅಕಾಡೆಮಿಯನ್ನು ಬಳಸಿಕೊಂಡು ಸಾಲವನ್ನು ಪಡೆದುಕೊಂಡರು ಎಂಬ ನಿಮ್ಮ ಆರೋಪವನ್ನ ನಮ್ಮ ಕಕ್ಷಿದಾರದಾರು (ಶ್ರೀದೇವಿ ಬೈರಪ್ಪ) ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ. ಒಂದು ವೇಳೆ ನಿಮ್ಮ ಕ್ಲೈಂಟ್ ( ಯುವರಾಜ್ ಕುಮಾರ್ ) ನಮ್ಮ ಕಕ್ಷಿದಾರದಾರರಿಂದ (ಶ್ರೀದೇವಿ ಬೈರಪ್ಪ) ಮೋಸ ಹೋಗಿದ್ದರೆ ಸಂಸ್ಥೆಯಲ್ಲಿರುವ ಇನ್ನು ಇಬ್ಬರು ಪಾಲುದಾರರು, ಇತರ ಪದಾಧಿಕಾರಿಗಳು ಏನು ಮಾಡುತ್ತಿದ್ದರು..?

ಯುವ ರಾಜ್‌ಕುಮಾರ್ ನೀಡಿದ ಲೀಗಲ್ ನೋಟೀಸ್‌ಗೆ ಶ್ರೀದೇವಿ ವಕೀಲರ ಮೂಲಕ ನೀಡಿದ ರಿಪ್ಲೈ ನೋಟೀಸ್ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಇನ್ನೂ 7 ಅಂಶಗಳ ದೊಡ್ಡ ಆರೋಪಗಳ ಪಟ್ಟಿನೇ ಇದೆ. ಒಂದು ವೇಳೆ ಇದು ಶ್ರೀದೇವಿ ಬೈರಪ್ಪ ಅವರ ಪ್ರತಿಕ್ರಿಯೆಯೇ ಆಗಿದ್ದರು. ಯುವ ಮೇಲೆ ಹಾಗೂ ನಟಿಯ ಮೇಲೆ ಗಂಭೀರ ಆರೋಪ ಮಾಡಿದಂತಾಗುತ್ತೆ.

More from Filmibeat

English summary
Sridevi Byrappa's reaction, in the form of a counter notice given by her advocates to Yuvaraj Kumar's representatives, went viral after he filed for divorce."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X