ತುಂಬಾ ಇಷ್ಟ ಪಟ್ಟು ಮದುವೆ ಆಗಿದ್ದೆ,ಗ್ಯಾಸ್ ಸ್ಟವ್ ಕೂಡ ಬಿಡದೇ ಎಲ್ಲ ಎತ್ಕೊಂಡು ಓಡಿ ಹೋದಳು- ಪಾರು ಶ್ರೀಧರ್..!
ಕೆಲವರ ನಸೀಬೇ ಹಾಗೇ ! ಯಾವುದನ್ನು ಹೆಚ್ಚು ಪ್ರೀತಿ ಮಾಡುತ್ತಾರೋ .. ಅತಿಯಾಗಿ ಮೋಹಿಸುತ್ತಾರೋ .. ಇನ್ನಿಲ್ಲದಂತೆ ಇಷ್ಟ ಪಡುತ್ತಾರೋ.. ಕಟ್ಟ ಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ. ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತೆ. ಕೊನೆಯವರೆಗೆ ಕೂಡ ಮನಸಿಗಾದ ಈ ಗಾಯದ ನೋವು ಬಹಳ ಆಳವಾಗಿರುತ್ತದೆ.ಇದಕ್ಕೆ ಶ್ರೀಧರ್ ಹಂಚಿಕೊಂಡ ತಮ್ಮ ಬದುಕಿನ ಮನಕಲಕುವ ಕಥೆ ಮತ್ತೊಂದು ಉದಾಹರಣೆ.
ಹೌದು, ಶ್ರೀಧರ್.. ಕನ್ನಡದ ಕಿರುತೆರೆಯ ಖ್ಯಾತ ಕಲಾವಿದ. ಕಳೆದ ಕೆಲ ದಿನಗಳಿಂದ ತೀವೃ ಅನಾರೋಗ್ಯಕ್ಕೀಡಾಗಿ ನರಳುತ್ತಿರುವ ಶ್ರೀಧರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುತು ಸಿಗದಷ್ಟು ಬದಲಾಗಿದ್ದಾರೆ. ಆರ್ಥಿಕ ಸಹಾಯಕ್ಕಾಗಿ ಮನವಿಯನ್ನು ಕೂಡ ಮಾಡಿದ್ದಾರೆ.

ಶ್ರೀಧರ್ ಅವರ ಅನಾರೋಗ್ಯದ ಕುರಿತು ಕಮಲಿ ಖ್ಯಾತಿಯ ಅಂಕಿತಾ ಮಾಹಿತಿಯನ್ನು ಹಂಚಿಕೊಂಡಿದ್ದು ವಿಡಿಯೋ ಮೂಲಕ ಸಹಾಯ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇವರೆಲ್ಲರ ಮನವಿಗೆ ಜನಸಾಮಾನ್ಯರಿಂದ ಮತ್ತು ಕಿರುತೆರೆಯ ಬಾಕಿ ಕಲಾವಿದರಿಂದ ಸ್ಪಂದನೆ ಸಿಗುತ್ತಿದೆ. ಇದರ ನಡುವೆ ಈಗ ಶ್ರೀಧರ್ ತಮ್ಮ ವ್ಯೆಯಕ್ತಿಕ ಬದುಕಿನ ಕೆಲ ಖಾಸಗಿ ಪುಟಗಳನ್ನು ತಿರುವಿ ಹಾಕಿದ್ದಾರೆ. ಮೋಸ ಮಾಡಿ ಹೋದ ತಮ್ಮ ಹೆಂಡತಿಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಈ ಕುರಿತು ಮಾತನಾಡಿರುವ ಶ್ರೀಧರ್ ನಾನು ಮೊದಲು ಏಕಾಂಗಿಯಾಗಿರಲಿಲ್ಲ, ನನಗೆ ಮದುವೆ ಆಗಿತ್ತು ಎಂದು ಹೇಳಿದ್ದಾರೆ. ಹನ್ನೊಂದು ವರ್ಷ ಸಂಸಾರ ಮಾಡಿದ್ದೇ, ಐದು ವರ್ಷದ ಮಗ ಕೂಡ ನನಗೆ ಇದ್ದಾನೆ ಎಂದಿರುವ ಶ್ರೀಧರ್ ಅವಳಿಗೆ ಇಂಡಿಪೆಂಡೆಂಟ್ ಲೈಫ್ ಬೇಕಿತ್ತು, ಹೀಗಾಗಿ ಮಗನಿಗೆ ಐದು ವರ್ಷ ಆಗುವುದನ್ನೇ ಕಾಯುತ್ತಿದ್ದ ಆಕೆ, ಹೀಗೆ ಒಂದು ದಿನ ನಾನು ಬೆಳಗ್ಗೆ ಚಿತ್ರೀಕರಣಕ್ಕೆ ತೆರಳಿದಾಗ ನನ್ನ ಮನೆಯಲ್ಲಿರುವ ಗ್ಯಾಸ್ ಸ್ಟವ್ ಕೂಡ ಬಿಡದೇ ನನ್ನ ಮಗನನ್ನು ಕರೆದುಕೊಂಡು ಎಲ್ಲ ಎತ್ತಿಕೊಂಡು ಓಡಿ ಹೋದಳು ಎಂದು ಹೇಳಿದ್ದಾರೆ. ನನ್ನ ದುಡ್ಡೆಲ್ಲ ತೆಗೆದುಕೊಂಡು ಆ ದುಡ್ಡಿನಲ್ಲಿ ಜಾಗವನ್ನು ಖರೀದಿ ಮಾಡಿ ನಿನ್ನ ಹೆಸರಿಗೆ ಮಾಡುಸುತ್ತೇನೆ ಎಂದು ಹೇಳಿ ಎಲ್ಲ ಅವರ ಅಪ್ಪನ ಹೆಸರಿಗೆ ಮಾಡಿಸಿದಳು ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಕೊರೊನಾ ಸಮಯದಲ್ಲಿ ಮೊಬೈಲ್‌ನಲ್ಲಿ ಮಗ ಆನ್‌ಲೈನ್ ಪಾಠ ಕೇಳುತ್ತಿದ್ದ, ಆಗ ನಾನು ಕೆಲಸಕ್ಕೆ ಹೋಗಬೇಕು ನಿನ್ನ ಮೊಬೈಲ್ ಕೊಡುವ ಅಂತ ಹೇಳಿದೆ. ಅದಕ್ಕೆ ಅವರು ವಿದ್ಯಾಭ್ಯಾಸ ಹಾಳಾಗಿ ಹೋಗಲಿ ಎಂದು ಹೇಳಿದರು ಎಂದಿರುವ ಶ್ರೀಧರ್ ಆಗ ನನಗೆ ಸಿಟ್ಟು ಬಂತು ಮಗನ ವಿದ್ಯಾಭ್ಯಾಸದ ಬಗ್ಗೆ ಹಾಗೆಲ್ಲಾ ಮಾತನಾಡಿಬೇಡಿ ಅಂತಾ ಜೋರಾಗಿ ಬೈದೆ ಎಂದು ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಒಂದಲ್ಲೊಂದು ದಿನ ಅವರು ಹೋಗ್ತಾರೆ ಎಂದು ನನಗೆ ಗೊತ್ತಿತ್ತು, ಯಾಕೆಂದರೆ ಮೊದಲಿಂದ ಅವರು ಹೇಳುತ್ತಲೇ ಇದ್ದರು ಎಂದಿರುವ ಶ್ರೀಧರ್, ನಾನು ಅವರ ಮಾತುಗಳಿಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ ಯಾಕೆಂದರೆ ತುಂಬಾ ಇಷ್ಟ ಪಟ್ಟು ಮದುವೆ ಆಗಿದ್ದೇ ಎಂದು ಹೇಳಿದ್ದಾರೆ. ಹಿಂದೆ ಮುಂದೆ ದಿಕ್ಕು ಇಲ್ಲದೆ ಇರುವ ಗಂಡಸಿನ ಜೊತೆ ಎಷ್ಟೆಲ್ಲ ಆಟ ಆಡಿದರು ಎಂದು ಬೇಸರದ ನುಡಿಗಳನ್ನಾಡಿದ್ದಾರೆ.
ಮುಂದುವರೆದು ನನ್ನ ಜೀವನದಲ್ಲಿ ಆ ತರಹದ ಹೆಣ್ಣನ್ನು ನಾನು ನೋಡಿಲ್ಲ ಎಂದಿರುವ ಶ್ರೀಧರ್, ಮದುವೆಯಾಗುವ ಸಮಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ನನ್ನ ಸಂಪಾದನೆ ತುಂಬಾನೇ ಚೆನ್ನಾಗಿತ್ತು. ಐದು ನಿಮಿಷ ಕೂಡ ನಾನು ವ್ಯರ್ಥ ಮಾಡುತ್ತಿರಲಿಲ್ಲ, ಆದರೆ ನನ್ನ ಜೀವನ ಹೀಗೆ ಆಗಿ ಹೋಯ್ತಲ್ಲಾ ಅಂತ ಬೇಜಾರಾಗುತ್ತಿದೆ ಎಂದು ಹೇಳಿದ್ದಾರೆ.
ಒಮ್ಮೊಮ್ಮೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಬೇಜಾರಾದಾಗಲೆಲ್ಲಾ ನಾನು ಊಟ ಬಿಟ್ಟಿದ್ದೀನಿ ಎಂದು ಹೇಳಿರುವ ಶ್ರೀಧರ್, ಈಗ ಆಯುರ್ವೇದಿಕ್ ಚಿಕಿತ್ಸೆ ಉಲ್ಟಾ ಹೊಡೆದಿದೆ, ಅನಾರೋಗ್ಯಕ್ಕೀಡಾದ ನಂತರ ನಾಣು ಒಬ್ಬನೇ ಆಸ್ಪತ್ರೆಗೆ ಓಡಾಡುತ್ತಿದ್ದೆ ಆಗ ನನ್ನ ಪರಿಸ್ಥಿತಿ ಗಮನಿಸಿ ನನ್ನ ಜೊತೆ ಕೆಲಸ ಮಾಡುವ ಕಲಾವಿದರು ಸಹಾಯಕ್ಕೆ ಬಂದರು ಎಂದು ಹೇಳಿದ್ದಾರೆ. ಆ ನಂತರ ನನ್ನ ಅಮ್ಮನಿಗೆ ಕೂಡ ವಿಚಾರ ತಿಳಿಯಿತು ಆ ನಂತರ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು ಈಗ ಇಲ್ಲಿ ಅಡ್ಮಿಟ್ ಮಾಡಿದ್ದಾರೆ ಎಂದು ಕೂಡ ಶ್ರೀಧರ್ ಹೇಳಿದ್ದಾರೆ. ಸದ್ಯ ಶ್ರೀಧರ್ ಅವರು ತಮ್ಮ ಬಗ್ಗೆ ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾಧಲ್ಲಿ ವೈರಲ್ ಆಗಿದೆ.
ಇನ್ನು ಇದೇ ಸಮಯದಲ್ಲಿ ಬೇರೆಯವರಿಗೆ ಮಾಡಿದ್ದ ಸಹಾಯದ ಕುರಿತು ಕೂಡ ಮಾತನಾಡಿರುವ ಶ್ರೀಧರ್, ಯಾರಿಗೋ ಸ್ವಲ್ಪ ದುಡ್ಡು ಕೊಟ್ಟಿದ್ದೆ ಅವರು ಕೂಡ ಕೊರೊನಾ ಸಮಯದಲ್ಲಿ ಹಣ ವಾಪಸ್ ಕೊಡದೇ ಓಡಿ ಹೋದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತುಂಬಾ ಕಷ್ಟ ಆಯ್ತು. ಧಾರಾವಾಹಿಗಳೆಲ್ಲಾ ನಿಂತು ಹೋಗಿದ್ದವು. 20, 22 ವರ್ಷ ಇದ್ದಾಗ ಕಲಾವಿದ ಆಗಬೇಕು ಅಂತಾ ಮನೆಯಿಂದ ಹೊರಗೆ ಬಂದೆ ಆದರೆ ಈಗ ಯಾರು ಇಲ್ಲ ನನ್ನ ನೋಡಿಕೊಳ್ಳಲು ಮತ್ತೆ ನನ್ನ ಅಮ್ಮ ಮತ್ತು ನನ್ನ ತಮ್ಮಂದಿರೇ ಬರಬೇಕಾಯ್ತು ಎಂದು ನೊಂದುಕೊಂಡು ಮಾತನಾಡಿದ್ದಾರೆ. ಇದೆಲ್ಲ ಯಾರ ಹತ್ತಿರ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಬಿಕ್ಕಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ತಮ್ಮ ಆರೋಗ್ಯ ಪರಿಸ್ಥಿತಿಯ ಕುರಿತು ಮಾತನಾಡಿದ್ದ ಶ್ರೀಧರ್, ನನಗೆ ಯಾವ ದುರಭ್ಯಾಸ ಇಲ್ಲ ಆದರೂ ನನಗೆ ಯಾಕೆ ಈ ರೀತಿ ಆಗಿದೆ ಎಂದು ನೊಂದುಕೊಂಡು ಮಾತನಾಡಿರುವ ಶ್ರೀಧರ್ ಸ್ನೇಹಿತರು ಸಹಾಯ ಮಾಡುತ್ತಿದ್ದಾರೆ, ನಾನು ಬದುಕಬೇಕು, ಮೊದಲಿನಂತೆ ಆಗಬೇಕು, ಹಲವು ತಿಂಗಳಿಂದ ಮನೆಯ ಬಾಡಿಗೆಯನ್ನು ಕೂಡ ಕಟ್ಟಿಲ್ಲ, ನಟನೆಯ ಜೊತೆ ನಾನು ಇಡ್ಲಿ, ದೋಸೆ, ವಡೆ ಮಾರುತ್ತಿದ್ದೆ ಎಂದು ಕಣ್ಣೀರು ಹಾಕಿದ್ದರು.
ಸದ್ಯ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ನನ್ನ ಜೊತೆ ಕೆಲಸ ಮಾಡಿದ ನನ್ನ ಧಾರಾವಾಹಿಯ ಎರಡು ಮೂರು ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ ಎಂದಿರುವ ಶ್ರೀಧರ್ ಅವರು ಆರ್ಥಿಕ ಸಹಾಯವನ್ನು ಕೂಡ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ದಿನಕ್ಕೆ ಹತ್ತು ಹನ್ನೆರಡು ಸಾವಿರ ಖರ್ಚಾಗುತ್ತಿದೆ, ಏನಾದರೂ ಟೆಸ್ಟ್‌ಗಳನ್ನು ಮಾಡಿಸಿದರೆ ಬಿಲ್ ಇನ್ನು ಹೆಚ್ಚಾಗುತ್ತೆ ಎಂದು ಬೇಸರ ಮಾಡಿಕೊಂಡಿರುವ ಶ್ರೀಧರ್ ಈಗಾಗಲೇ ಮೂರು ಲಕ್ಷ ಖರ್ಚು ಆಗಿದೆ ಎಂದು ಹೇಳಿದ್ದರು.
ಐಸಿಯುನಲ್ಲಿ ದಾಖಲಾದರೆ ಒಂದು ದಿನಕ್ಕೆ 60 ಸಾವಿರ ಬೇಕಂತೆ, ಆ ಹಂತಕ್ಕೆ ಹೋಗದೇ ಇರಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ ಎಂದಿರುವ ಶ್ರೀಧರ್ ಸದ್ಯ ನನ್ನ ತಾಯಿ ನನ್ನನ್ನೂ ಈಗ ನೋಡಿಕೊಳ್ಳುತ್ತಿದ್ದಾರೆ, ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎನ್ನುವಂತಾಗಿದೆ ನನ್ನ ಪರಿಸ್ಥಿತಿ ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದರು.
ನನಗೆ ಯಾರು ಇಲ್ಲ ಎಂದುಕೊಂಡಿದ್ದೇ ಆದರೆ ಅನೇಕರು ನನಗೆ ಸಹಾಯ ಮಾಡುತ್ತಿದ್ದಾರೆ, ಇದೆಲ್ಲದರಿಂದ ಮಾತ್ರೆಗೆ, ನನ್ನ ಸಣ್ಣ ಪುಟ್ಟ ಖರ್ಚಿಗೆ ಇದರಿಂದ ಸಹಾಯವಾಗುತ್ತಿದೆ ಎಂದಿರುವ ಶ್ರೀಧರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರ ಬರುವಾಗ ಎಷ್ಟು ಬಿಲ್ ಆಗುತ್ತೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ಧಾರೆ. ನಾನು ಹೊರ ಬಂದ ನಂತರ ಕೂಡ ಒಂದೆರಡು ವರ್ಷ ಯಾವ ಕೆಲಸ ಕೂಡ ಮಾಡುವಂತೆ ಇಲ್ಲ ನಾನು ಎಷ್ಟು ಚೆನ್ನಾಗಿದ್ದೆ ಗೊತ್ತಾ? ಎಂದು ಶ್ರೀಧರ್ ಕಣ್ಣೀರು ಹಾಕಿದ್ದರು.
ಒಟ್ನಲ್ಲಿ ಸದ್ಯ ಶ್ರೀಧರ್ ತಮ್ಮ ಬದುಕಿನಲ್ಲಾದ ಮೋಸ, ನಂಬಿಕೆ ದ್ರೋಹ ಮತ್ತು ವಂಚನೆಯ ಕುರಿತು ಮಾತನಾಡಿದ್ದಾರೆ. ಶ್ರೀಧರ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಬಗೆಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications











