For Quick Alerts
  ALLOW NOTIFICATIONS  
  For Daily Alerts

  'ನಿಮ್ಮ ಪ್ರೀತಿಯನ್ನು ನಾನು ತಿರಸ್ಕರಿಸುವುದಿಲ್ಲ, ನೀವಿದ್ದಲ್ಲಿಯೇ ಹಾರೈಸಿ': ಶ್ರೀಮುರಳಿ ವಿನಂತಿ

  |

  ಡಿಸೆಂಬರ್ 17 ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬ. ನೆಚ್ಚಿನ ನಟನ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಸ್ಟಾರ್ ನಟನ ಮನೆ ಬಳಿ ಜಮಾಯಿಸುವುದು ಸಹಜ. ಈ ವರ್ಷ ಅಂತಹ ಸಂಪ್ರದಾಯ ಬೇಡವೆಂದು ನಟ ಶ್ರೀಮುರಳಿ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

  ನಮ್ಮಿಂದ ಬೇರೆಯವರಿಗೆ ತೊಂದರೆ ಆಗೋದು ನನಗೆ ಇಷ್ಟ ಇಲ್ಲ ಎಂದ Sri Murali | Madagaja | Filmibeat Kannada

  ಕೊರೊನಾ ವೈರಸ್ ಭೀತಿಯಿರುವುದರಿಂದ ಯಾರಿಂದಲೂ ಯಾರಿಗೂ ಕಷ್ಟವಾಗಬಾರದು ಎಂಬ ಕಾರಣಕ್ಕೆ ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸದಿರಲು ಶ್ರೀಮುರಳಿ ನಿರ್ಧರಿಸಿದ್ದಾರೆ. ಹೀಗಾಗಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಪೂರ್ವಕ ಪತ್ರ ಬರೆದಿದ್ದಾರೆ. ಮುಂದೆ ಓದಿ....

  ಡಿಸೆಂಬರ್ 17ಕ್ಕೆ ಹೊಂಬಾಳೆ ಹೊಸ ಸಿನಿಮಾ: ಎಲ್ಲರ ಕಣ್ಣು ಆ ನಟನೆ ಮೇಲೆ!

  ಮನೆ ಹತ್ತಿರ ಬಂದು ಬೇಸರರಾಗಬೇಡಿ

  ಮನೆ ಹತ್ತಿರ ಬಂದು ಬೇಸರರಾಗಬೇಡಿ

  ''ಅಭಿಮಾನಿಗಳಲ್ಲಿ ಮನವಿ...

  ಈ ಬಾರಿ ನನ್ನ ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲಾಗುವುದಿಲ್ಲ...ಕಾರಣ...COVID! ನಮ್ಮಿಂದಾರಿಂದಲೂ ಬೇರೆ ಯಾರಿಗು ಅನಾನುಕೂಲ ಆಗುವುದ ಬೇಡ. ನಾನು ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ. ಯಾರು ಸಹಿತ ಮನೆ ಹತ್ತಿರ ಬಂದು ಬೇಸರರಾಗಬೇಡಿ, ಯಾವ ಹಾರ, ಕೇಕ್, ಗಿಫ್ಟ್ ‘ಗಳಿಗೆ ಖರ್ಚ್ ಮಾಡಬೇಡಿ.'' - ಶ್ರೀಮುರಳಿ

  ಅನ್ನದಾನ ಮಾಡಿ

  ಅನ್ನದಾನ ಮಾಡಿ

  ''ಬದಲಾಗಿ ಹಸಿವಿರುವವರಿಗೆ ಕೈಯಲ್ಲಿ ಆದಷ್ಟು ಅನ್ನದಾನವನ್ನ ಮಾಡಿ ಎಂದು ಕೋರಿಕೊಳ್ಳುತ್ತೀನಿ. ನಮ್ಮ ಎಲ್ಲಾ ಸಂಘದ ಚಿನ್ನ'ಗಳಿಗೆ ಈ ಮೂಲಕ ನಾನು ತಿಳಿಸುತ್ತಿದ್ದೀನಿ. Pls note. ನಿಮ್ಮನ್ನು ನೋಡೋಕಾಗದ ಬೇಸರ ನನಗೂ ಇದೆ. ಹಾಗಾಗಿ ಅಭಿಮಾನಿ ದೇವರೆ ಆದಷ್ಟು ಬೇಗ ಎಲ್ಲವೂ ಸುಧಾರಿಸಿಕೊಂಡಿದ ನಂತರ ಸಿಗೊಣ.'' - ಶ್ರೀಮುರಳಿ

  ನಿಮ್ಮ ಪ್ರೀತಿ ನಾನು ತಿರಸ್ಕರಿಸುವುದಿಲ್ಲ

  ನಿಮ್ಮ ಪ್ರೀತಿ ನಾನು ತಿರಸ್ಕರಿಸುವುದಿಲ್ಲ

  ''ನಿಮ್ಮ ಪ್ರೀತಿ, ಅಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದೆೇನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ. ಇಂತಿ ನಿಮ್ಮ ಪ್ರೀತಿಯ, ಶ್ರೀ ಮುರಳಿ.''

  ಮದಗಜ ಟೀಸರ್, ಹೊಸ ಸಿನಿಮಾ ಘೋಷಣೆ

  ಮದಗಜ ಟೀಸರ್, ಹೊಸ ಸಿನಿಮಾ ಘೋಷಣೆ

  ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದರ ಜೊತೆಗೆ ಎರಡು ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರಾಜೆಕ್ಟ್‌ಗಳನ್ನು ಸಹ ಹುಟ್ಟುಹಬ್ಬದ ವಿಶೇಷವಾಗಿ ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ.

  English summary
  Kannada actor Roaring star Sriimurali requests fans not to come to his home to celebrate his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X