Paraak Teaser: ಶ್ರೀಮುರಳಿ ಈಸ್ ಬ್ಯಾಕ್; 'ಪರಾಕ್' ರೋರಿಂಗ್ ಟೀಸರ್ ಸೂಪರ್
'ಬಘೀರ' ಹಿಟ್ ಬಳಿಕ ಸೈಲೆಂಟ್ ಆಗಿದ್ದ ಶ್ರೀಮುರಳಿ 'ಪರಾಕ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಹಾಲೇಶ್ ಕೊಗುಂಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಅಖಿಲೇಶ್ ಕೋಗುಂಡಿ, ಆಶಿಕ್ ಮಾಡಲ್, ದೀಪಕ್ ಅಶ್ವಥ್ ನಾರಾಯಣ ಬಂಡವಾಳ ಹೂಡಿದ್ದಾರೆ. ಮತ್ತೊಮ್ಮೆ ಮಾಸ್ ಅವತಾರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರಿಸಿದ್ದಾರೆ. ಸಣ್ಣ ಟೀಸರ್ ಝಲಕ್ ಸಿನಿರಸಿಕರ ಗಮನ ಸೆಳೆದಿದೆ.
ಪ್ರೇಕ್ಷಕರ ಮನ ಗೆದ್ದರೂ 'ಬಘೀರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. ಆ ಬಳಿಕ ಶ್ರೀಮುರಳಿ ನಟನೆಯ 'ಉಗ್ರಾಯುಧಂ' ಹಾಗೂ 'ಪರಾಕ್' ಸಿನಿಮಾಗಳು ಘೋಷಣೆ ಆಗಿತ್ತು. ಇತ್ತೀಚೆಗೆ ರೋರಿಂಗ್ ಸ್ಟಾರ್ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಮಾಡಿದ್ದಾರೆ. 'ಉಗ್ರಂ' ಬಳಿಕ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬೇಗ ಬೇಗ ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಧಾವಂತ ಬಿಟ್ಟು ನಿಧಾನ ಆದರೂ ಸರಿ ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಅಂಥದ್ದೇ ಪ್ರಯತ್ನ 'ಪರಾಕ್' ಎನ್ನುವುದು ಗೊತ್ತಾಗುತ್ತಿದೆ.

ಒಂದು ಸಣ್ಣ ಆಕ್ಷನ್ ಸನ್ನಿವೇಶವನ್ನು 'ಪರಾಕ್' ಟೀಸರ್‌ನಲ್ಲಿ ನೋಡಬಹುದು. ವಿಷ್ಯುವಲ್ಸ್, ಕ್ಯಾಮರಾ ವರ್ಕ್, ಶ್ರೀಮುರಳಿ ಪರ್ಫಾರ್ಮನ್ಸ್, ಚರಣ್ ರಾಜ್ ಮ್ಯೂಸಿಕ್ ಎಲ್ಲವೂ ಮಜವಾಗಿದೆ. ಇದು ಕನ್ನಡ ಸಿನಿರಸಿಕರಿಗೆ ಬೇಕಾಗಿದ್ದು ಎಂದು ನೋಡಿದವರು ಕಾಮೆಂಟ್ ಮಾಡುತ್ತಿದ್ದಾರೆ. ರವಿವರ್ಮಾ ಆಕ್ಷನ್ ಕಂಪೋಸ್ ಮಾಡಿದ್ದಾರೆ. ಶ್ರೀಮುರಳಿ ಖಡಕ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
ಗಾಯಗೊಂಡ ನಾಯಕ ತನ್ನ ಕೈಗೆ ಆಗಿರುವ ಪೆಟ್ಟಿಗೆ ತಾನೇ ಹೊಲಿಗೆ ಹಾಕಿಕೊಳ್ಳುವುದರೊಂದಿಗೆ 'ಪರಾಕ್' ಟೀಸರ್ ಶುರುವಾಗುತ್ತದೆ. ಹೊರಗಡೆಯಿಂದ ಎದುರಾಳಿಗಳು ಬಂದು ಬಾಗಿಲು ಬಡಿಯುತ್ತಿರುತ್ತಾರೆ. 'ತಿಳಿಯದು ಏತಕೆ ಈ ಮೌನ' ಎನ್ನುವ ಮೆಲೋಡಿ ಸಾಂಗ್ ಹಿನ್ನೆಲೆಯಲ್ಲಿ ಆತನ ವಿಧ್ವಂಸ ಶುರುವಾಗುತ್ತದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ ಚಿತ್ರಕ್ಕಿದೆ. ಟೀಸರ್ ಬಹಳ ಚೆನ್ನಾಗಿ ಕಟ್ ಮಾಡಿದ್ದು ಪ್ರತಿ ಫ್ರೇಮ್ ಇಂಟ್ರೆಸ್ಟಿಂಗ್ ಅನ್ನಿಸುತ್ತದೆ. ಮೊದಲ ನೋಟದಲ್ಲೇ 'ಪರಾಕ್' ಸಿನಿಮಾ ಮೇಲೆ ಭರವಸೆ ಮೂಡುವಂತಿದೆ.
'ಪರಾಕ್' ಟೀಸರ್ ಮಾಡೋಕೆ 3 ವರ್ಷ ಸಮಯ ಹಿಡಿಸಿತು ಎಂದು ಶ್ರೀಮುರಳಿ ಹೇಳಿದ್ದಾರೆ. ಕಾರಣಾಂತರಗಳಿಂದ ಕೊಂಚ ತಡವಾಗಿದೆ. ಆದಷ್ಟು ಬೇಗ ಸಿನಿಮಾ ಮಾಡಬೇಕು. ಹೊಸ ತಂಡ ಕಟ್ಟಿಕೊಂಡು ಸಿನಿಮಾ ಮಾಡ್ತಿದ್ದೀವಿ. ಇನ್ಮುಂದೆ ಬೇಗ ಬೇಗ ಸಿನಿಮಾ ಮಾಡ್ತೀನಿ. ತಡ ಮಾಡಲ್ಲ. ನದಿಯಲ್ಲಿ ಈಜಲು ಹೋದ್ವಿ. ಇದು ನದಿ ಅಲ್ಲ, ಸಮುದ್ರ ಎಂದು ಗೊತ್ತಾಯ್ತು. ಹಾಗಾಗಿ ಸಾಕಷ್ಟು ಬದಲಾವಣೆಯಾಗಿ ಸಮಯ ಬೇಕಾಯಿತು. ಅದು ಸರಿಯಲ್ಲ ಎನ್ನುವುದು ನನಗೂ ಗೊತ್ತು. ಎಲ್ಲಾ ಕೋನದಲ್ಲಿ ಕೂಡ ಇದು ಒಳ್ಳೆಯದು. ಆದಷ್ಟು ಬೇಗ ಈ ಸಿನಿಮಾ ಮುಗಿಸಿ ರಿಲೀಸ್ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.
ಮಾತು ಮುಂದುವರೆಸಿದ ಶ್ರೀಮುರಳಿ ನನ್ನ ತಾಯ್ನಾಡು, ನಮ್ಮ ಭಾಷೆ, ನಮ್ಮ ನೆಲ ಮೊದಲು. ಒಳ್ಳೆ ಸಿನಿಮಾ ಮಾಡುವುದು ನಮ್ಮ ಪ್ರಯತ್ನ. ಆಮೇಲೆ ಬೇರೆ ಭಾಷೆ ಕಡೆ ಹೋಗುವುದು. ದೊಡ್ಡ ಸಿನಿಮಾ ಮಾಡ್ತಿದ್ದೀವಿ ಎನ್ನುವುದಲ್ಲ. ಆದರೆ ಹೊಸದಾಗಿ ಏನಾದರೂ ಮಾಡಲು ಪ್ರಯತ್ನ ಮಾಡ್ತಿದ್ದೀವಿ. ಆತುರದಲ್ಲಿ ಸಿನಿಮಾ ಮಾಡುವುದು ಬೇರೆ, ಬುದ್ಧಿವಂತಿಕೆಯಿಂದ ಸಿನಿಮಾ ಮಾಡುವುದು ಮುಖ್ಯ. ಈ ವರ್ಷವೇ ಚಿತ್ರೀಕರಣ ಮುಗಿಸುವ ಲೆಕ್ಕಾಚಾರದಲ್ಲಿದ್ದೀವಿ. ಖಂಡಿತ ಬೇಗ ಪ್ರೇಕ್ಷಕರ ಮುಂದೆ ಬರ್ತೀವಿ" ಎಂದು ವಿವರಿಸಿದ್ದಾರೆ.


Click it and Unblock the Notifications