ಅಕ್ಟೋಬರ್ 14ಕ್ಕೆ 'ಮದಗಜ' ಕಡೆಯಿಂದ ಸಿಕ್ತಿದೆ ಭರ್ಜರಿ ಗಿಫ್ಟ್

ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ದಸರಾ ಹಬ್ಬಕ್ಕೆ ಶ್ರೀಮುರಳಿ ನಟನೆಯ ಮದಗಜ ಸಿನಿಮಾದಿಂದ ಸಖತ್ ಸುದ್ದಿ ಹೊರಬಿದ್ದಿದೆ. ಹೌದು, ಶ್ರೀಮುರಳಿ ನಟನೆಯ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮದಗಜ ಸಿನಿಮಾದ ಟೀಸರ್ ಇದೇ ತಿಂಗಳು ದಸರ ಪ್ರಯುಕ್ತ ಅಭಿಮಾನಿಗಳ ಮುಂದೆ ಬರ್ತಿದೆ. ಮದಗಜ ಸಿನಿಮಾದ ಎರಡನೇ ಟೀಸರ್ ಅಕ್ಟೋಬರ್ 14, ಸಂಜೆ 5.5ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಮದಗಜ ಸದ್ಯ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಮದಗಜ ಸಿನಿಮಾತಂಡ ಸದ್ಯ ಟೀಸರ್ ಮೂಲಕ ಬರ್ತಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಮದಗಜ ಡಿಸೆಂಬರ್ ತಿಂಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗಿದ್ದು, ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

Sriimurali starrer Madhagaja Theatrical Teaser to release on 14th Oct at 5.05pm

ಅಂದಹಾಗೆ ಮದಗಜ ಸಿನಿಮಾ ಉಮಾಪತಿ ಫಿಲಂಸ್ ನಲ್ಲಿ ಮೂಡಿಬಂದಿದೆ. ರಾಬರ್ಟ್ ಬಿಡುಗಡೆ ಬಳಿಕ ಉಮಾಪತಿ ಮತ್ತೊಂದು ದೊಡ್ಡ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ.

ಮದಗಜ ಚಿತ್ರದಲ್ಲಿ ನಟ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಆಶಿಕಾ ಶ್ರೀಮುರಳಿ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಆಶಿಕಾ ಅವರ ಎರಡು ಲುಕ್ ಬಿಡುಗಡೆಯಾಗಿದೆ. ಆಶಿಕಾ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲು ಬಿಡುಗಡೆಯಾಗಿದ್ದ ಪೋಸ್ಟರ್ ನಲ್ಲಿ ಆಶಿಕಾ ಪಕ್ಕ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಾಸ್ ಲುಕ್‌ ನಲ್ಲಿ ಎಂಟ್ರಿ ಕೊಟ್ಟಿದ್ದರು. ಸಿಗರೇಟು ಸೇಯುತ್ತಾ ಖದರ್ ಲುಕ್ ನಲ್ಲಿ ಆಶಿಕಾ ಅಭಿಮಾನಿಗಳ ಮುಂದೆ ಬಂದಿದ್ದರು.

ಇನ್ನು ಮದಗಜ ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದಕ್ಷಿಣ ಭಾರತದ ಖ್ಯಾತ ವಿಲನ್ ಎನಿಸಿಕೊಂಡಿರುವ ಜಗಪತಿ ಬಾಬು ಎಂಟ್ರಿ ಈ ಚಿತ್ರಕ್ಕೆ ಮತ್ತಷ್ಟು ಧಮ್ ಹೆಚ್ಚಿಸಿದೆ. ಈಗಾಗಲೇ ಜಗಪತಿ ಬಾಬು ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಟೀಸರ್ ಸಹ ರಿಲೀಸ್ ಆಗಿದ್ದು, ಥ್ರಿಲ್ ಹೆಚ್ಚಿಸಿದೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಅದಾಗಲೇ ಮೂರು ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ.

More from Filmibeat

English summary
Actor Sriimurali starrer Madhagaja Theatrical Teaser to release on 14th Oct at 5.05pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X