»   » 10 ವರ್ಷದ ಖುಷಿಯಲ್ಲಿ ಶ್ರೀ ಮುರಳಿ ದಂಪತಿ : ಪತಿ ಬಗ್ಗೆ ಪತ್ನಿಯ ಅಕ್ಕರೆಯ ಮಾತು

10 ವರ್ಷದ ಖುಷಿಯಲ್ಲಿ ಶ್ರೀ ಮುರಳಿ ದಂಪತಿ : ಪತಿ ಬಗ್ಗೆ ಪತ್ನಿಯ ಅಕ್ಕರೆಯ ಮಾತು

Posted By:
Subscribe to Filmibeat Kannada

ನಟ ಶ್ರೀ ಮುರಳಿ ಇಂದು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಶ್ರೀ ಮುರಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಈಗ ಸಂತಸದಲ್ಲಿದೆ. ಕಾರಣ ಇಂದು ಶ್ರೀ ಮುರಳಿ ಮತ್ತು ಅವರ ಪತ್ನಿ ವಿದ್ಯಾ ಅವರ ವಿವಾಹ ವಾರ್ಷಿಕೋತ್ಸವ.

ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ಎಂದು ಮದುವೆ ಆಗಿದ್ದರು. ಇನ್ನು ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ಈ ಜೋಡಿ ಇನ್ಟಾಗ್ರಾಮ್ ನಲ್ಲಿ ಪರಸ್ಪರ ಶುಭಾಶಯವನ್ನು ಕೋರಿದ್ದಾರೆ. ಶ್ರೀ ಮುರಳಿ ಹೆಂಡತಿಯ ಫೋಟೋ ಹಾಕಿ ವಿಶ್ ಮಾಡಿದರೆ, ವಿದ್ಯಾ ತಮ್ಮ ಪ್ರೀತಿಯ ಪತಿ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ.

srimurali and his wife vidyasrimurali calibrated their wedding anniversary

''ನಮ್ಮ ಕಷ್ಟದ ದಿನದಲ್ಲಿ ನೀವು ಬೆಳಕು ಮೂಡುವಂತೆ ಮಾಡಿದ್ರಿ. ನನ್ನ ಮುಖದಲ್ಲಿ ನಗು ತರಿಸಿದ್ರಿ. ಅಗತ್ಯ ಇದ್ದಾಗ ತಾಯಿಯ ರೀತಿ ನನ್ನ ಜೊತೆಗೆ ಇದ್ರಿ.'' ಎಂದು ಗಂಡನ ಗುಣಗಾನವನ್ನು ವಿದ್ಯಾ ಶ್ರೀಮುರಳಿ ಮಾಡಿದ್ದಾರೆ.

ಅಂದಹಾಗೆ, 'ಉಗ್ರಂ' 'ರಥಾವರ' ಹಾಗೂ 'ಮುಫ್ತಿ' ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾಗಳನ್ನು ಮುರಳಿ ನೀಡಿದ್ದಾರೆ. ಅವರ ಹೊಸ ಸಿನಿಮಾವನ್ನು ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ.

English summary
Kannada actor Srimurali and his wife Vidyasrimurali calibrated their 10th wedding anniversary.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X