ತುಮಕೂರಿನಲ್ಲಿ 'ಯಜಮಾನ'ನ ಬಗ್ಗೆ ಹಾಡಿ ಹೊಗಳಿದ ಶ್ರೀಮುರಳಿ
Recommended Video

ಭರಾಟೆ ಚಿತ್ರೀಕರಣ ಬಹುತೇಕ ಮುಗಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ತೆರೆಮೇಲೆ ಬರಲು ಸಜ್ಜಾಗ್ತಿದ್ದಾರೆ. ಮಫ್ತಿ ಚಿತ್ರದ ನಂತರ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸೂಪರ್ ಸಿನಿಮಾ ನೀಡಲು ಶ್ರೀಮುರಳಿ ಸಿದ್ಧವಾಗಿದ್ದಾರೆ.
ಈ ಮಧ್ಯೆ ದರ್ಶನ್ ಅಭಿನಯದ ಯಜಮಾನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಕಾಲೇಜ್ ಒಂದರಲ್ಲಿ ನಿನ್ನೆ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮುರಳಿ ದರ್ಶನ್ ನಟನೆಯ ಯಜಮಾನ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಬೆಳಿಗ್ಗೆ ಯಜಮಾನ ಚಿತ್ರದ ಬಗ್ಗೆ ಎಲ್ಲೆಡೆಯೂ ಪಾಸಿಟೀವ್ ಟಾಕ್ ಬಂದಿತ್ತು. ಈ ಬಗ್ಗೆ ಆಪ್ತರಿಂದ ಮಾಹಿತಿ ತಿಳಿದುಕೊಂಡ ಶ್ರೀಮುರಳಿ, ''ಯಜಮಾನ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ, ಕನ್ನಡದ ಮತ್ತೊಂದು ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದರ್ಶನ್ ಅವರು ತುಂಬಾ ಅದ್ಭುತವಾಗಿ ಮಾಡಿದ್ದಾರಂತೆ'' ಎಂದು ಕಾಲೇಜ್ ವಿದ್ಯಾರ್ಥಿಗಳ ಮುಂದೆ ಹೇಳಿದರು.

ವಾಸ್ತವವಾಗಿ ಶ್ರೀಮುರಳಿ ಅವರು ಸಿನಿಮಾ ನೋಡಿಲ್ಲ ಅಂದ್ರು, ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ತಾವು ಕೂಡ ಖುಷಿಯಾಗಿದ್ದಾರೆ. ದರ್ಶನ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ಶ್ರೀಮುರಳಿ ಸ್ನೇಹಿತನ ಚಿತ್ರದ ಬಗ್ಗೆ ಹಾಡಿ ಹೊಗಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇನ್ನು ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿ ವಾಪಸ್ ಬಂದ ಬಗ್ಗೆಯೂ ಮಾತನಾಡಿದ ಶ್ರೀಮುರಳಿ ''ಅಭಿನಂದನ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ, ಅವರ ಮತ್ತೆ ತಾಯ್ನಾಡಿಗೆ ಬಂದಿದ್ದು ಖುಷಿ ಕೊಟ್ಟಿದೆ'' ಎಂದಿದ್ದಾರೆ.

ಅಂದ್ಹಾಗೆ, ಭರಾಟೆ ಚಿತ್ರವನ್ನ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಶ್ರೀ ಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಭರಾಟೆ ಬಳಿಕ ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನ ಮಾಡಲಿರುವ ಮದಗಜ ಚಿತ್ರದಲ್ಲಿ ಶ್ರೀಮುರಳಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











