ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸಿದ ಶ್ರೀಮುರಳಿ ಪತ್ನಿ ವಿದ್ಯಾ

By Harshitha

Recommended Video

ಶ್ರೀ ಮುರಳಿ ಪತ್ನಿ ಧನ್ಯವಾದ ಹೇಳಿದ್ದು ಯಾಕೆ..? | Oneindia Kannada

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಚ್ಚ ಹೊಸ ಸಿನಿಮಾ 'ಭರಾಟೆ' ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ರಾಜಸ್ಥಾನದ ರಾಜರ ಗೆಟಪ್ ನಲ್ಲಿ ಶ್ರೀಮುರಳಿ ಮಿಂಚಿರುವ ಪೋಸ್ಟರ್ ನಿನ್ನೆ ಬಿಡುಗಡೆಗೊಂಡಿತ್ತು.

'ಉಗ್ರಂ', 'ರಥಾವರ', 'ಮಫ್ತಿ'... ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಕೊಡುತ್ತಿರುವ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಬಗ್ಗೆ ಈಗಲೇ ಕುತೂಹಲ ಜಾಸ್ತಿ ಆಗಿದೆ.

ಸ್ವಾತಂತ್ರೋತ್ಸವದ ಪ್ರಯುಕ್ತ 'ಭರಾಟೆ' ಮೋಷನ್ ಪೋಸ್ಟರ್ ನಿಮ್ಮೆಲ್ಲರ ಮುಂದೆ ಬಂತು ಸರಿ. ಇದರೊಂದಿಗೆ ಆಗಸ್ಟ್ 15ಕ್ಕೂ ಶ್ರೀಮುರಳಿಗೂ ಒಂದು ವಿಶೇಷ ನಂಟಿದೆ. ನಿನ್ನೆಗೆ ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಬಣ್ಣದ ಬದುಕಿಗೆ ಶ್ರೀಮುರಳಿ ಕಾಲಿಟ್ಟರು. 'ಚಂದ್ರ ಚಕೋರಿ' ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರಿಗೆ ಶ್ರೀಮುರಳಿ ಪರಿಚಿತರಾದರು.

ಈ 15 ವರ್ಷಗಳ ಸಿನಿಮಾ ಜರ್ನಿ ಬಗ್ಗೆ ಶ್ರೀಮುರಳಿ ಪತ್ನಿ ವಿದ್ಯಾ ಫೇಸ್ ಬುಕ್ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶ್ರೀಮುರಳಿಯ ಸೋಲು-ಗೆಲುವಿನಲ್ಲಿ ಜೊತೆಯಾಗಿದ್ದ ನಿಮ್ಮಂತಹ ಅಭಿಮಾನಿಗಳಿಗೆ ವಿದ್ಯಾ ಶ್ರೀಮುರಳಿ ಧನ್ಯವಾದ ಅರ್ಪಿಸಿದ್ದಾರೆ. ಮುಂದೆ ಓದಿರಿ...

ಹದಿನೈದು ವರ್ಷ ಪೂರೈಸಿದ್ದಾರೆ

ಹದಿನೈದು ವರ್ಷ ಪೂರೈಸಿದ್ದಾರೆ

''ನನ್ನ ಪತಿ ಚಿತ್ರರಂಗದಲ್ಲಿ ಹದಿನೈದು ವರ್ಷ ಪೂರೈಸಿದ್ದಾರೆ. ಹದಿನೈದು ವರ್ಷಗಳ ಹಿಂದೆ ಈ ದಿನ ಅವರಲ್ಲಿದ್ದ ಮಗುವಿನಂತಹ ಉತ್ಸಾಹ, ಹೆದರಿಕೆ ನನಗಿನ್ನೂ ನೆನಪಿದೆ. ಸೋಲು-ಗೆಲುವಿನ ಅವರ ಈ ಜರ್ನಿಯಲ್ಲಿ ನೀವೆಲ್ಲ ಜೊತೆಯಾಗಿದ್ದೀರಿ. ಉತ್ತಮ ಕೆಲಸ ಮಾಡಿದಾಗ, ನೀವೆಲ್ಲ ಭೇಷ್ ಎಂದು ಬೆನ್ನು ತಟ್ಟಿದ್ದೀರಿ. ಇದೇ ಕಾರಣಕ್ಕೆ ಅವರು ಕೊಂಚ ಸಮಯ ತೆಗೆದುಕೊಂಡು ಒಳ್ಳೆಯ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ನಾನು ಪ್ರತಿದಿನ ನೋಡುವುದರಿಂದಲೇ ಹೇಳುತ್ತಿದ್ದೇನೆ'' - ವಿದ್ಯಾ ಶ್ರೀಮುರಳಿ

ಮನರಂಜನೆ ನೀಡುವುದಷ್ಟೇ ಉದ್ದೇಶ

ಮನರಂಜನೆ ನೀಡುವುದಷ್ಟೇ ಉದ್ದೇಶ

''ನಿಮಗೆಲ್ಲ ಮನರಂಜನೆ ನೀಡುವುದಷ್ಟೇ ಅವರ ಉದ್ದೇಶ. ನೀವು ಥಿಯೇಟರ್ ಒಳಗೆ ಹೋದಾಗ, ನಿಮ್ಮೆಲ್ಲಾ ಟೆನ್ಷನ್ ಗಳನ್ನ ಮರೆಸಿ ಎಂಟರ್ ಟೇನ್ಮೆಂಟ್ ಕೊಡಬೇಕು ಅನ್ನೋದೇ ಅವರ ಗುರಿ'' - ವಿದ್ಯಾ ಶ್ರೀಮುರಳಿ

ಸದಾ ಪ್ರೀತಿ ನೀಡುತ್ತಿರಿ

ಸದಾ ಪ್ರೀತಿ ನೀಡುತ್ತಿರಿ

''ನಾನು ಅವರನ್ನ ಮದುವೆ ಆಗಿದ್ದರೆ, ಅವರು ಸಿನಿಮಾನ ಮದುವೆ ಆಗಿದ್ದಾರೆ. ಹೀಗಾಗಿ ದಯವಿಟ್ಟು ಅವರು ತಪ್ಪು ಮಾಡಿದಾಗ ತಿದ್ದಿ, ಎಷ್ಟೇ ಆದರೂ ಅವರೂ ಮನುಷ್ಯರೇ ತಾನೇ. ನಿಮ್ಮ ಪ್ರೀತಿಯನ್ನ ಅವರಿಗೆ ಸದಾ ನೀಡುತ್ತಿರಿ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಆಭಾರಿ'' - ವಿದ್ಯಾ ಶ್ರೀಮುರಳಿ

ನಿಮಗೆಲ್ಲಾ ಧನ್ಯವಾದಗಳು

''ನಾನು ಅವರ ಶಕ್ತಿ ಅಂತ ಎಷ್ಟೋ ಜನ ಹೇಳ್ತಾರೆ. ಆದ್ರೆ, ನನ್ನ ಪ್ರಕಾರ ನೀವುಗಳೇ ಅವರ ಶಕ್ತಿ. ನಿಮಗೆಲ್ಲಾ ನನ್ನ ಹೃತ್ಪೂರ್ವಕ ಧನ್ಯವಾದಗಳು'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ

More from Filmibeat

English summary
Vidya Srimurali has taken her Facebook account to thank fans on the occasion of Srimurali completing 15 years in Kannada Cinema Industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X