'ರಾಜಕುಮಾರ' ನಿರ್ಮಾಪಕರ ಜೊತೆ ಶ್ರೀ ಮುರಳಿ ಹೊಸ ಸಿನಿಮಾ !
ನಟ ಶ್ರೀ ಮುರಳಿ ಅಭಿನಯದ 'ಮಫ್ತಿ' ಸಿನಿಮಾ ಹಿಟ್ ಆಗಿದೆ. 'ಉಗ್ರಂ' ಮತ್ತು 'ರಥಾವರ' ಸಿನಿಮಾಗಳ ಬಳಿಕ ಮತ್ತೆ ಶ್ರೀ ಮುರಳಿ ಗೆದ್ದಿದ್ದಾರೆ. ಇದೀಗ ಮುರಳಿ 'ಮಫ್ತಿ' ನಂತರ ಹೊಸ ಸಿನಿಮಾಗೆ ಕೈ ಹಾಕಿದ್ದಾರಂತೆ.
'ರಾಜಕುಮಾರ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೋಡಕ್ಷನ್ ನಲ್ಲಿ ಶ್ರೀ ಮುರಳಿ ಸಿನಿಮಾ ವೊಂದನ್ನು ಮಾಡಲಿದ್ದಾರಂತೆ. ಹೊಂಬಾಳೆ ಪ್ರೋಡಕ್ಷನ್ ಸದ್ಯ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆ ಚಿತ್ರದ ನಂತರ ಶ್ರೀ ಮುರಳಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಒಟ್ಟಿಗೆ ಚಿತ್ರವೊಂದನ್ನು ಮಾಡಲಿದ್ದಾರಂತೆ.

ಅಂದಹಾಗೆ, ಈ ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇವರು 'ಸನ್ ಆಫ್ ಬಂಗಾರದ ಮನುಷ್ಯ' ಮತ್ತು 'ಖುಷಿ ಖುಷಿಯಾಗಿ' ಚಿತ್ರವನ್ನು ನಿರ್ದೇಶಕನ ಮಾಡಿದ್ದರು. ಇನ್ನು ಈ ಹೊಸ ಚಿತ್ರದ ಸುದ್ದಿ ಬಗ್ಗೆ ಸದ್ಯ ಶ್ರೀ ಮುರಳಿ ಆಗಲಿ ಅಥಾವ ನಿರ್ದೇಶಕ ನಿರ್ಮಾಪಕರಾಗಲಿ ಬಹಿರಂಗ ಪಡಿಸಿಲ್ಲ.
More from Filmibeat
English summary
According to the sources 'Rajakumara' kannada movie producer Vijay Kiragandur planning to do a movie with Actor Srimurali.


Click it and Unblock the Notifications











