»   » 'ಚಕ್ರವರ್ತಿ' ದರ್ಶನ್ ಗೆ ಶ್ರೀಮುರಳಿ, ಪ್ರಜ್ವಲ್ ದೇವರಾಜ್ ಶುಭ ಹಾರೈಕೆ

'ಚಕ್ರವರ್ತಿ' ದರ್ಶನ್ ಗೆ ಶ್ರೀಮುರಳಿ, ಪ್ರಜ್ವಲ್ ದೇವರಾಜ್ ಶುಭ ಹಾರೈಕೆ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ನಾಳೆ (ಏಪ್ರಿಲ್ 14) ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಎಲ್ಲೆಲ್ಲೂ 'ಚಕ್ರವರ್ತಿ' ಹವಾ ಜೋರಾಗಿ ಇರುವಾಗಲೇ, 'ದಾಸ' ದರ್ಶನ್ ಹಾಗೂ 'ಚಕ್ರವರ್ತಿ' ಚಿತ್ರತಂಡಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಶುಭ ಹಾರೈಸಿದ್ದಾರೆ.

''ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಚಕ್ರವರ್ತಿ' ಶುಕ್ರವಾರ ಬಿಡುಗಡೆ ಆಗಲಿದೆ. ದರ್ಶನ್, ದಿನಕರ್, ಸೃಜನ್, ಆದಿತ್ಯ ರವರನ್ನ ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಗುಡ್ ಲಕ್'' ಅಂತ ನಟ ಶ್ರೀಮುರಳಿ ಫೇಸ್ ಬುಕ್ ನಲ್ಲಿ 'ಚಕ್ರವರ್ತಿ' ತಂಡಕ್ಕೆ ವಿಶ್ ಮಾಡಿದ್ದಾರೆ.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]ನಟ ಶ್ರೀಮುರಳಿ ಮಾತ್ರ ಅಲ್ಲ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ 'ಚಕ್ರವರ್ತಿ' ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.ದರ್ಶನ್ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಗೆ ದೀಪಾ ಸನ್ನಿಧಿ ಜೋಡಿ. ಚಾರುಲತಾ, ಕುಮಾರ್ ಬಂಗಾರಪ್ಪ, ಆದಿತ್ಯ, ಸೃಜನ್ ಲೋಕೇಶ್ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ಚಕ್ರವರ್ತಿ' ನಾಳೆ ಬಿಡುಗಡೆ ಆಗಲಿದೆ. ನೋಡಲು ನೀವು ರೆಡಿನಾ.?[ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್]

English summary
Kannada Actor Srimurali and Prajwal Devaraj has taken their Facebook Account to wish Challenging Star Darshan for 'Chakravarthy' release.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X