'ಭರಾಟೆ'ಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.!
Recommended Video

'ಮಫ್ತಿ' ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ 'ಭರಾಟೆ' ಸಿನಿಮಾಗೆ ಚಾಲನೆ ನೀಡಿರುವುದು ನಿಮಗೆಲ್ಲಾ ಗೊತ್ತೇ ಇದೆ. 'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾಗಳ ನಂತರ ನಿರ್ದೇಶಕ ಚೇತನ್ 'ಭರಾಟೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈಗಾಗಲೇ 'ಭರಾಟೆ' ಸಿನಿಮಾದ ಫೋಟೋಶೂಟ್ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಫೋಟೋಶೂಟ್ ಗಾಗಿಯೇ ಲೊಕೇಶನ್ ಹುಡುಕಿ ರಾಜಸ್ಥಾನದವರೆಗೂ ಪ್ರಯಾಣ ಮಾಡಿರುವ ಈ ತಂಡ, ಇಡೀ ಚಿತ್ರವನ್ನೂ ಗ್ರ್ಯಾಂಡ್ ಆಗಿ ತೆರೆಮೇಲೆ ಮೇಲೆ ತರಲು ಸಜ್ಜಾಗುತ್ತಿದೆ.
ಈ ನಡುವೆ 'ಭರಾಟೆ' ಅಡ್ಡದಿಂದ ಒಂದು ಭರ್ಜರಿ ಸುದ್ದಿ ಬ್ರೇಕ್ ಆಗಿದೆ. ಅದೇನು ಅಂತ ತಿಳಿಯುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಇದೇ ನೋಡಿ ಭರ್ಜರಿ ಸುದ್ದಿ.!
'ಭರಾಟೆ' ಸಿನಿಮಾದಲ್ಲಿ ಒಂದಲ್ಲ, ಎರಡಲ್ಲ... ಬರೋಬ್ಬರಿ 9 ನೆಗೆಟಿವ್ ಕ್ಯಾರೆಕ್ಟರ್ ಗಳು ಇರಲಿವೆ. 9 ಜನ ನಡೆಸುವ ಮಸಲತ್ತಿನ ವಿರುದ್ಧ ಸಿಡಿದು ನಿಲ್ಲಲ್ಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ.

ಜನಪ್ರಿಯ ಕೇಡಿಗಳೇ ಅಖಾಡಕ್ಕೆ ಇಳಿಯಲಿದ್ದಾರೆ.
ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಸೋನು ಸೂದ್, ಟಾಲಿವುಡ್ ನ ಖ್ಯಾತ ನಟರಾದ ಜಗಪತಿ ಬಾಬು, ಸುಮನ್ ಸೇರಿದಂತೆ ಪ್ರಖ್ಯಾತ ವಿಲನ್ ಪಾತ್ರಧಾರಿಗಳೇ 'ಭರಾಟೆ' ಚಿತ್ರದ 9 ನೆಗೆಟಿವ್ ಕ್ಯಾರೆಕ್ಟರ್ ಗಳಿಗೆ ಬಣ್ಣ ಹಚ್ಚಲಿದ್ದಾರಂತೆ.

ಮಾತುಕತೆ ಹಂತದಲ್ಲಿದೆ
''ಚಿತ್ರದಲ್ಲಿ 9 ನೆಗೆಟಿವ್ ಪಾತ್ರಗಳಿವೆ. ಆ ಪಾತ್ರಗಳಲ್ಲಿ ಸುಮನ್, ಸಂಪತ್ ಕುಮಾರ್, ಸೋನು ಸೂದ್ ಸೇರಿದಂತೆ ಹಲವು ನಟ ಕಾಲ್ ಶೀಟ್ ಗಾಗಿ ಮಾತುಕತೆ ನಡೆಸಿದ್ದೇವೆ'' ಎಂದು ನಿರ್ದೇಶಕ ಚೇತನ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಖಚಿತ ಪಡಿಸಿದ್ದಾರೆ.

ಮಾಸ್ ಕಮ್ ಕ್ಲಾಸ್
''ಶ್ರೀಮುರಳಿ ರವರಿಗೆ ಯಾವ ಇಮೇಜ್ ಇದ್ಯೋ, ಆ ಇಮೇಜ್ ಗೆ ತಕ್ಕ ಹಾಗೆ ಕಥೆ ರೆಡಿ ಮಾಡಲಾಗಿದೆ. 'ಭರಾಟೆ' ಫ್ಯಾಮಿಲಿ ಎಂಟರ್ ಟೇನರ್. ಜೊತೆಗೆ ಮಾಸ್ ಎಲಿಮೆಂಟ್ಸ್ ಕೂಡ ಇದೆ'' ಎನ್ನುತ್ತಾರೆ ಡೈರೆಕ್ಟರ್ ಚೇತನ್.

'ಭರಾಟೆ' ಕುರಿತು
ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ 'ಭರಾಟೆ' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಸುಪ್ರೀತ್. ಸಿನಿಮಾಗೆ ಭುವನ್ ಗೌಡ ಛಾಯಾಗ್ರಹಣ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಇರಲಿದೆ.


Click it and Unblock the Notifications











