'ಭರಾಟೆ' ಡಬ್ಬಿಂಗ್ ರೈಟ್ಸ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ 'ಬಹದ್ದೂರ್' ಚೇತನ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ಭರಾಟೆ'.

'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾಗಳು ಸೂಪರ್ ಹಿಟ್ ಆದ್ಮೇಲೆ ನಿರ್ದೇಶಕ ಚೇತನ್ ಕೈಗೆತ್ತಿಕೊಂಡಿರುವ ಚಿತ್ರ 'ಭರಾಟೆ'. ಇನ್ನೂ 'ಮಫ್ತಿ' ಬಳಿಕ ಶ್ರೀಮುರಳಿ ಅಭಿನಯಿಸುತ್ತಿರುವುದು ಈ ಚಿತ್ರದಲ್ಲಿಯೇ. ಹೀಗಾಗಿ, ಚಿತ್ರದ ಬಗ್ಗೆ ನಿರೀಕ್ಷೆ ಸ್ವಲ್ಪ ಜಾಸ್ತಿ ಇದೆ.

ರಾಜಸ್ಥಾನದಲ್ಲಿ ಭರ್ಜರಿಯಾಗಿ ಫೋಟೋಶೂಟ್ ಮಾಡಿದ್ಮೇಲೆ, ಎಲ್ಲ ಸಿನಿ ಪ್ರಿಯರು ಕಣ್ಣು 'ಭರಾಟೆ' ಮೇಲಿದೆ. ರಾಜಸ್ಥಾನದಲ್ಲಿಯೇ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಇನ್ನೂ ಚಿತ್ರೀಕರಣದ ಹಂತದಲ್ಲಿ ಇರುವ 'ಭರಾಟೆ' ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ ಅಂದ್ರೆ ನೀವು ನಂಬಲೇಬೇಕು. ಮುಂದೆ ಓದಿರಿ...

'ಭರಾಟೆ' ಡಬ್ಬಿಂಗ್ ರೈಟ್ಸ್ ಗೆ ಭಾರಿ ಬೇಡಿಕೆ

'ಭರಾಟೆ' ಡಬ್ಬಿಂಗ್ ರೈಟ್ಸ್ ಗೆ ಭಾರಿ ಬೇಡಿಕೆ

'ಭರಾಟೆ' ಚಿತ್ರದ ಹಿಂದಿ ಹಾಗೂ ಭೋಜ್ ಪುರಿ ಡಬ್ಬಿಂಗ್ ರೈಟ್ಸ್ ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಕಂಪನಿಗಳು 'ಭರಾಟೆ' ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿವೆ. ಅಲ್ಲದೇ, ದೊಡ್ಡ ಮೊತ್ತ ಕೊಟ್ಟು ಡಬ್ಬಿಂಗ್ ರೈಟ್ಸ್ ಪಡೆಯಲು ಹಲವು ಕಂಪನಿಗಳು ಸಾಲುಗಟ್ಟಿ ನಿಂತಿವೆ.

ಕಾರಣ ಇಷ್ಟೇ...

ಕಾರಣ ಇಷ್ಟೇ...

'ಭರಾಟೆ' ಚಿತ್ರದ ಬಹುಪಾಲು ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯಲಿದೆ. ಹೀಗಾಗಿ, ಡಬ್ಬಿಂಗ್ ರೈಟ್ಸ್ ಪಡೆದರೆ ಖಂಡಿತ ಮೋಸ ಇಲ್ಲ ಎಂಬ ನಂಬಿಕೆ ಮೇಲೆ ಹಿಂದಿ ಹಾಗೂ ಭೋಜ್ ಪುರಿ ಭಾಷೆಗೆ ಈಗಲೇ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಚಿತ್ರದಲ್ಲಿ ಒಂಬತ್ತು ವಿಲನ್ ಗಳು.!

ಚಿತ್ರದಲ್ಲಿ ಒಂಬತ್ತು ವಿಲನ್ ಗಳು.!

'ಭರಾಟೆ' ಸಿನಿಮಾದಲ್ಲಿ ನಟ ಶ್ರೀಮುರಳಿ ಒಂಬತ್ತು ವಿಲನ್ ಗಳ ವಿರುದ್ಧ ತೊಡೆ ತಟ್ಟಿ ನಿಲ್ಲದಿದ್ದಾರೆ. ಪಕ್ಕಾ ಮಾಸ್ ಎಂಟರ್ ಟೈನಿಂಗ್ ಚಿತ್ರ ಇದಾಗಿದ್ದು, ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿದೆ.

ಚಿತ್ರದ ಕಥೆ ಏನು.?

ಚಿತ್ರದ ಕಥೆ ಏನು.?

'ಭರಾಟೆ' ಚಿತ್ರದ ಕಥೆ ಬಗ್ಗೆ ನಿರ್ದೇಶಕ ಚೇತನ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ, ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ಚೇತನ್ ಗಿದೆ. ಸುಪ್ರೀತ್ ಎಂಬುವರು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಶ್ರೀಮುರಳಿಗೆ ಶ್ರೀಲೀಲಾ ಜೋಡಿಯಾಗಿದ್ದಾರೆ.

More from Filmibeat

English summary
Srimurali starrer 'Bharaate' Hindi and Bhojpuri dubbing rights are in demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X