ಶ್ರೀಲೀಲಾ ಜೊತೆ ಸ್ವಿಡ್ಜರ್ ಲ್ಯಾಂಡ್ ಗೆ ಹೊರಟ ನಟ ಶ್ರೀಮುರಳಿ
Recommended Video
ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಭರಾಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಟಾಕಿ ಪೋಷನ್ ಮುಗಿಸಿರುವ ಭರಾಟೆ ಈಗ ಹಾಡಿನ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಭಾಕಿ ಉಳಿದಿದ್ದು ಈ ಹಾಡುಗಳನ್ನು ಚಿತ್ರೀಕರಿಸಲು ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದೆ ಚಿತ್ರತಂಡ.
ಹೌದು, ಭರಾಟೆ ಚಿತ್ರದ ಎರಡು ಪ್ರಮುಖ ಹಾಡುಗಳನ್ನು ಚಿತ್ರೀಕರಿಸಲು ಸ್ವಿಡ್ಜರ್ ಲ್ಯಾಂಡ್ ಗೆ ಹೋಗುವ ತಯಾರಿಮಾಡಿಕೊಳ್ಳುತ್ತಿದೆ ಚಿತ್ರತಂಡ. ಮುಂದಿನ ತಿಂಗಳು ಆಗಸ್ಟ್ 2ಕ್ಕೆ ಭರಾಟೆ ಟೀಂ ಸ್ವಿಡ್ಜರ್ ಲ್ಯಾಂಡ್ ಗೆ ಹಾರಲಿದ್ದು ಅಲ್ಲಿಯ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತೆ.
ಈ ಹಾಡಿಗೆ ನೃತ್ಯ ನಿರ್ದೇಶಕ ಎ. ಹರ್ಷ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಅಂದ್ಹಾಗೆ ಭರಾಟೆ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ರಿಲೀಸ್ ಗೆ ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಈಗಾಗಲೆ ಭರಾಟೆ ಸಾಕಷ್ಟು ವಿಶೇಷತೆಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಭರಾಟೆ ನಿರ್ದೇಶಕ ಚೇತನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಸುಪ್ರಿತ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ 10 ಜನ ಖಳನಟರು ಕಾಣಿಸಿಕೊಂಡಿದ್ದಾರೆ. ಘಟಾನುಘಟಿ ಖಳ ನಟರ ವಿರುದ್ಧ ಶ್ರಿಮುರಳಿ ಕಾದಾಡಲಿದ್ದಾರೆ. ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಕಾಣಿಸಿಕೊಂಡಿರುವ ಭರಾಟೆ ಚಿತ್ರ ಸೆಪ್ಟಂಬರ್ 27ಕ್ಕೆ ತೆರೆಗೆ ಬರಲಿದೆ.


Click it and Unblock the Notifications











