»   » ಚಮ್ಕಾಯ್ಸಿ ಚಿಂದಿ ಉಡಾಯಿಸಿದ ಶ್ರೀಮುರಳಿ 'ರಥಾವರ'

ಚಮ್ಕಾಯ್ಸಿ ಚಿಂದಿ ಉಡಾಯಿಸಿದ ಶ್ರೀಮುರಳಿ 'ರಥಾವರ'

Posted By:
Subscribe to Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ರಥಾವರ' ಚಿತ್ರದ ಆರ್ಭಟಕ್ಕೆ ಬ್ರೇಕ್ ಹಾಕುವವರು ಯಾರೂ ಇಲ್ಲ ಬಿಡಿ.

ಬಹುನಿರೀಕ್ಷೆಯೊಂದಿಗೆ ತೆರೆಗೆ ಬಂದ 'ರಥಾವರ' ಚಿತ್ರ ಬಿಡುಗಡೆ ಆದ ಮೊದಲೆರಡು ದಿನಗಳಲ್ಲಿ 5 ಕೋಟಿ ಕಲೆಕ್ಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿತ್ತು. ಇದೀಗ 'ರಥಾವರ' ಚಿತ್ರದ ವಾರಾಂತ್ಯದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. [ಶ್ರೀಮುರಳಿ 'ರಥಾವರ' ಆರ್ಭಟಕ್ಕೆ ಬಾಕ್ಸ್ ಫೀಸ್ ಉಡೀಸ್!]


rathaavara

'ಫಿಲ್ಮಿಬೀಟ್' ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾಹಿತಿ ನೀಡಿರುವ ಪ್ರಕಾರ, ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಮೂರು ದಿನಗಳಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶ್ರೀಮುರಳಿ ಕೆರಿಯರ್ ನಲ್ಲೇ ಇದು ಅತ್ಯಂತ ಅಧಿಕ. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]


ನಿರೀಕ್ಷೆಯಂತೆ 'ರಥಾವರ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಒಳ್ಳೆಯ ಪ್ರಯತ್ನಕ್ಕೆ ಯಶಸ್ಸು ಖಂಡಿತ ಅನ್ನೋದಕ್ಕೆ 'ರಥಾವರ' ಸಿನಿಮಾ ಲೇಟೆಸ್ಟ್ ಉದಾಹರಣೆ ಅಷ್ಟೆ.

English summary
According to the sources, Kannada Actor Sriimurali starrer Kannada Movie 'Rathaavara' box office collection is Rs.8 crore in 3 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada