For Quick Alerts
  ALLOW NOTIFICATIONS  
  For Daily Alerts

  ಇನ್ನೆರಡು ದಿನಗಳಲ್ಲಿ 'ಬಾಂಬ್ ಬ್ಲಾಸ್ಟಿಂಗ್' ಸುದ್ದಿ ನೀಡ್ತಾರೆ ನಟ ಶ್ರೀಮುರಳಿ

  By Harshitha
  |

  ಮೇ 22ನೇ ತಾರೀಖು, ಭಾನುವಾರ ಬೆಳಗ್ಗೆ 10.59ಕ್ಕೆ ಸರಿಯಾಗಿ ನಿಮಗೊಂದು 'ಬಾಂಬ್ ಬ್ಲಾಸ್ಟಿಂಗ್' ನ್ಯೂಸ್ ಕಾದಿದೆ. ಅದು ರೋರಿಂಗ್ ಸ್ಟಾರ್ ಶ್ರೀಮುರಳಿ ರವರಿಂದ.

  'ಉಗ್ರಂ', 'ರಥಾವರ' ಚಿತ್ರಗಳ ಯಶಸ್ಸಿನ ನಂತರ ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿ ಇರುವ ಶ್ರೀಮುರಳಿ, ನಿಮಗೆಲ್ಲರಿಗೂ ಒಂದು ಸಿಹಿ ಸುದ್ದಿ ಹೇಳಲು ಸಜ್ಜಾಗಿದ್ದಾರೆ. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

  ಸಿಹಿ ಸುದ್ದಿ ಅಂತ ಹೇಳಿದ ತಕ್ಷಣ, ದೂರಾಲೋಚನೆ ಮಾಡಬೇಡಿ. ಶ್ರೀಮುರಳಿ ಹಾಗೆ 'ಬಾಂಬ್ ಸುದ್ದಿ' ಶೇರ್ ಮಾಡಲು ಹೊರಟಿರುವುದು ತಮ್ಮ ಮುಂದಿನ ಚಿತ್ರದ ಕುರಿತಾಗಿ ಮಾತ್ರ.

  ಹಾಗ್ನೋಡಿದ್ರೆ, ಶ್ರೀಮುರಳಿ 35ನೇ ಹುಟ್ಟುಹಬ್ಬದಂದೇ, ಅವರ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಆಗಿತ್ತು. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಅಂತ ಜಗಜ್ಜಾಹೀರಾಗಿತ್ತು. [ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?]

  ಆದರೆ, ಸಿನಿಮಾಗಿನ್ನೂ ಟೈಟಲ್ ಫಿಕ್ಸ್ ಆಗಿರ್ಲಿಲ್ಲ. ಹೀಗಾಗಿ, ಮೇ 22 ರಂದು ಶ್ರೀಮುರಳಿ ರವರ ಮುಂದಿನ ಚಿತ್ರದ 'ಶೀರ್ಷಿಕೆ' ಅನಾವರಣವಾಗುತ್ತಾ? ನಮಗಂತೂ ಗೊತ್ತಿಲ್ಲ. ಯಾವುದಕ್ಕೂ ಭಾನುವಾರ ಬೆಳಗ್ಗೆ 11 ಗಂಟೆವರೆಗೆ ಕಾದು ನೋಡೋಣ.

  English summary
  Kannada Actor Srimurali is all set to share Bomb News about his next film on Sunday, May 22nd at 10.59 am.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X