ಕನ್ನಡಾಭಿಮಾನಿಗಳಿಗೆ ನಟ ಶ್ರೀಮುರಳಿ ಕೊಟ್ಟ 'ಬಾಂಬ್' ನ್ಯೂಸ್ ಏನು?
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒಂದೇ ಸೌಂಡು. ನಟ ಶ್ರೀಮುರಳಿ, ಭಾನುವಾರ ಬೆಳಗ್ಗೆ 10.59ಕ್ಕೆ ಸರಿಯಾಗಿ ಒಂದು 'ಬಾಂಬ್ ಬ್ಲಾಸ್ಟಿಂಗ್' ಸುದ್ದಿ ಕೊಡ್ತಾರೆ ಅಂತ.
ಅಂತೂ, ಮೇ 22 ಬಂದಿದೆ. ಸಮಯ ಕಳೆದಿದೆ. ನಟ ಶ್ರೀಮುರಳಿ ಕೊಟ್ಟ ಬಿಗ್ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂತ ನೀವು ಯೋಚನೆ ಮಾಡ್ತಿದ್ರೆ, ಇಲ್ಲಿದೆ ನೋಡಿ ಉತ್ತರ...

ಹೌದು, 'ಉಗ್ರಂ', 'ರಥಾವರ' ಚಿತ್ರಗಳ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ 'Production - 15' ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಮಿಂಚಲಿದ್ದಾರೆ. [ಇನ್ನೆರಡು ದಿನಗಳಲ್ಲಿ 'ಬಾಂಬ್ ಬ್ಲಾಸ್ಟಿಂಗ್' ಸುದ್ದಿ ನೀಡ್ತಾರೆ ನಟ ಶ್ರೀಮುರಳಿ]
ಈಗಾಗಲೇ 'ಭಜರಂಗಿ' ಚಿತ್ರದ 'ಬಾಸು...ನಮ್ ಬಾಸು...' ಹಾಡಲ್ಲಿ ಶಿವಣ್ಣ ಜೊತೆ ಶ್ರೀಮುರಳಿ ಸ್ಟೆಪ್ ಹಾಕಿದ್ದರು. ಅಷ್ಟು ಬಿಟ್ಟರೆ, ಶಿವಣ್ಣ ಹಾಗೂ ಶ್ರೀಮುರಳಿ ಒಟ್ಟಾಗಿ ಅಭಿನಯಿಸಿಲ್ಲ. ಈಗ ಜಯಣ್ಣ-ಭೋಗೇಂದ್ರ ನಿರ್ಮಿಸುತ್ತಿರುವ 15ನೇ ಚಿತ್ರದಲ್ಲಿ ಕನ್ನಡದ ಇಬ್ಬರು ಸ್ಟಾರ್ ನಟರು ತೆರೆಹಂಚಿಕೊಳ್ಳಲಿದ್ದಾರೆ. [ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?]
ತಮ್ಮ ಜೊತೆ ಶಿವರಾಜ್ ಕುಮಾರ್ ಅಭಿನಯಿಸಲು ಸಜ್ಜಾಗಿರುವುದಕ್ಕೆ ನಟ ಶ್ರೀಮುರಳಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಯುವ ಪ್ರತಿಭೆ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications











