For Quick Alerts
  ALLOW NOTIFICATIONS  
  For Daily Alerts

  'ಚಿನ್ನಾರಿಮುತ್ತ'ನಿಗೆ ಶುಭ ಕೋರಿದ ರೋರಿಂಗ್ ಸ್ಟಾರ್ ಶ್ರೀಮುರಳಿ

  By Bharath Kumar
  |

  ಇಂಡಸ್ಟ್ರಿಯಲ್ಲಿ ನಾವು ಅಣ್ಣ-ತಮ್ಮನಂತೆ ಇದ್ದೀವಿ ಎನ್ನುವ ಹಲವು ನಟರು ಸಿಕ್ತಾರೆ. ಆದ್ರೆ, ನಿಜ ಜೀವನದಲ್ಲಿ ಅಣ್ಣ-ತಮ್ಮನಾಗಿ ಇಂಡಸ್ಟ್ರಿಯಲ್ಲಿ ಸಕ್ಸಸ್ ಕಾಣೋರೋ ಅಪರೂಪ. ಅಂತವರ ಪೈಕಿ ನಟ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಜೋಡಿ ಕೂಡ ಒಂದು.

  ಕನ್ನಡದ 'ಚಿನ್ನಾರಿ ಮುತ್ತಾ' ವಿಜಯ ರಾಘವೇಂದ್ರ ಅವರಿಗೆ ಇಂದು ಜನುಮದಿನ. ಈ ವಿಶೇಷ ದಿನ ಸಹೋದರನಿಗೆ ಶ್ರೀಮುರಳಿ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ''ನಿಮ್ಮನ್ನ ತುಂಬ ಪ್ರೀತಿಸುತ್ತೇನೆ ಅಣ್ಣ. ಈ ವರ್ಷ ನಿಮಗೆ ಅದ್ಭುತವಾಗಿರಲಿ'' ಎಂದು ಶ್ರೀಮುರಳಿ ವಿಶ್ ಮಾಡಿದ್ದಾರೆ.

  ಇನ್ನು ವಿಜಯ ರಾಘವೇಂದ್ರ ಅವರ ಬರ್ತಡೇಗೆ ಬಿಗ್ ಬಾಸ್ ವಿನ್ನರ್, ಒಳ್ಳೆ ಹುಡುಗ ಪ್ರಥಮ್ ಕೂಡ ವಿಶ್ ಮಾಡಿದ್ದಾರೆ. ಇನ್ನೊಂದು ತಿಳಿದಿರಲಿ ವಿಜಯ ರಾಘವೇಂದ್ರ ಕೂಡ ಬಿಗ್ ಬಾಸ್ ಗೆದ್ದಿದ್ದಾರೆ.

  4 ವರ್ಷವಿರವಾಗಲೇ ಬಣ್ಣ ಹಚ್ಚಿದ್ದ ವಿಜಯ ರಾಘವೇಂದ್ರ ಅವರು ಬಾಲಕಲಾವಿದನಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದರು. ನಂತರ 'ಕೊಟ್ರೇಶಿ ಕನಸು' ಮತ್ತು 'ಚಿನ್ನಾರಿ ಮುತ್ತಾ' ಚಿತ್ರದಲ್ಲಿ ಅಭಿನಯಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. 'ಚಿನ್ನಾರಿ ಮುತ್ತಾ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ, 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

  ನಂತರ 2002ರಲ್ಲಿ 'ನಿನಗಾಗಿ' ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ವಿಜಯ ರಾಘವೇಂದ್ರ, 'ಪ್ರೇಮಖೈದಿ', 'ರೋಮಿಯೋ ಜುಲಿಯೇಟ್', 'ಹಾರ್ಟ್ ಬೀಟ್', 'ಖುಷಿ', 'ಸೇವಂತಿ ಸೇವಂತಿ', 'ಕಲ್ಲರಳಿ ಹೂವಾಗಿ', 'ಗೋಕುಲ', 'ಚೌಕ', 'ಎರಡು ಕನಸು' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ಕನ್ನಡದ ಖ್ಯಾತ ನಿರ್ಮಾಪಕ ಎಸ್.ಎ ಚೆನ್ನೇಗೌಡ ಅವರ ಮಕ್ಕಳು ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ. ಚೆನ್ನೇಗೌಡ ಅವರ ಸಹೋದರಿ ಡಾ ಪಾರ್ವತಮ್ಮ ರಾಜ್ ಕುಮಾರ್. ಹೀಗಾಗಿ, ಡಾ ರಾಜ್ ಕುಟುಂಬ ಮತ್ತು ಚೆನ್ನೇಗೌಡರ ಕುಟುಂಬ ಹತ್ತಿರದ ಸಂಬಂಧಿಕರು.

  English summary
  Kannada actor vijaya raghavendra celebrating his birthday today (may 26th). roaring star sri murali wish to his brother birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X