»   » 'ಉಗ್ರಂ' ಶ್ರೀಮುರುಳಿಗೆ ಕಣ್ಬಿಟ್ಟ ಅದೃಷ್ಟ ಲಕ್ಷ್ಮಿ.!

'ಉಗ್ರಂ' ಶ್ರೀಮುರುಳಿಗೆ ಕಣ್ಬಿಟ್ಟ ಅದೃಷ್ಟ ಲಕ್ಷ್ಮಿ.!

Posted By:
Subscribe to Filmibeat Kannada

ಅದೃಷ್ಟ ಬಂದರೆ ಹೀಗೆ ಬರಬೇಕು ನೋಡಿ, ಜಸ್ಟ್ ಒಂದು ವರುಷದ ಹಿಂದೆ ನಟ ಶ್ರೀಮುರುಳಿಯನ್ನ ಕೇಳೋರೇ ಇರಲ್ಲಿಲ್ಲ. ಅನೇಕ ತಿಂಗಳುಗಳ ಕಾಲ ಖಾಲಿ ಕೂತಿದ್ದ ನಟ ಶ್ರೀಮುರುಳಿಗೆ ಈಗ ಬಿಡುವಿಲ್ಲದಷ್ಟು ಕೆಲಸ.

ಮುಂದಿನ ಎರಡು ವರ್ಷಗಳಂತೂ ನಟ ಶ್ರೀಮುರುಳಿಗೆ ಪುರುಸೊತ್ತೇ ಇಲ್ಲ. ಕೈ ತುಂಬಾ ಕೆಲಸ, ಲೆಕ್ಕವಿಲ್ಲದಷ್ಟು ಆಫರ್ ಗಳು. ಅಷ್ಟರಮಟ್ಟಿಗೆ ಶ್ರೀಮುರುಳಿ 'ಉಗ್ರ' ಪ್ರತಾಪ ಮೆರೆಯುತ್ತಿದ್ದಾರೆ.

srimuruli2

'ಉಗ್ರಂ' ಸೂಪರ್ ಸಕ್ಸಸ್ ಆಗ್ತಿದ್ದ ಹಾಗೆ ಮತ್ತೆ ಗಾಂಧಿನಗರದ 'ಗೆಲ್ಲುವ ಕುದುರೆ'ಯಾಗಿರುವ ಶ್ರೀಮುರುಳಿ ಕಾಲ್ ಶೀಟ್ ಗೆ ಈಗ ಬಹುಬೇಡಿಕೆ. ಆದ್ರೆ, ಶ್ರೀಮುರುಳಿ ಮಾತ್ರ ತುಂಬಾ ಖಿಲಾಡಿ. ಬಂದ ಅವಕಾಶಗಳನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳದೇ, ಪಾತ್ರ ಮತ್ತು ಚಿತ್ರಕಥೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡು ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ.

ಹಾಗೆ, ಶ್ರೀಮುರುಳಿ ಹ್ಹೂಂ ಅಂತ ತಲೆ ಅಲ್ಲಾಡಿಸಿರುವ ಮೊದಲ ಸಿನಿಮಾ 'ರಥಾವರ'. ಈಗಾಗಲೇ 'ರಥಾವರ' ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಬಿರುಸಿನಿಂದ ಸಾಗ್ತಿದೆ. ಅಲ್ಲೇ ತಮ್ಮ ಹುಟ್ಟುಹಬ್ಬವನ್ನೂ ಶ್ರೀಮುರುಳಿ ಮೊನ್ನೆಯಷ್ಟೇ ಆಚರಿಸಿಕೊಂಡಿದ್ದಾರೆ. [ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]

srimuruli

ಶ್ರೀಮುರುಳಿಯ ಹುಟ್ಟುಹಬ್ಬದ ಪ್ರಯುಕ್ತ 'ರಥಾವರ' ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ವು. ಅದರ ಬೆನ್ನಲೇ, ಶ್ರೀಮುರುಳಿಯ ಹೊಸ ಚಿತ್ರಗಳೂ ಇದೀಗ ಅನೌನ್ಸ್ ಆಗಿದೆ. ಅದರಲ್ಲಿ ಮೊದಲನೆಯದ್ದು - ಪ್ರೊಡಕ್ಷನ್ ನಂ.3, ಎರಡನೆಯದ್ದು - ಉಗ್ರಂ ವೀರಂ ಮತ್ತು ಮೂರನೆಯದ್ದು ಪ್ರೊಡಕ್ಷನ್ ನಂ.4. [ಮೈಸೂರಿನಲ್ಲಿ ಬರ್ತ್ ಡೇ ಬಾಯ್ ಶ್ರೀಮುರಳಿ ಸಂಭ್ರಮ]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಸಾರಥಿ'ಯಂತಹ ಸೂಪರ್ ಹಿಟ್ ಸಿನಿಮಾ ಮಾಡಿದ್ದ ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್, ಶ್ರೀಮುರುಳಿಗಾಗಿ ಒಂದು ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ಡಾ.ಸೂರಿ ನಿರ್ದೇಶಿಸಲಿರುವ ಈ ಚಿತ್ರಕ್ಕೆ (ಪ್ರೊಡಕ್ಷನ್ ನಂ.3) ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

srimuruli4

ಇನ್ನೂ 'ಉಗ್ರಂ' ಚಿತ್ರದ ಸೀಕ್ವೆಲ್ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅದಕ್ಕೂ ಇದೀಗ ಅಧಿಕೃತ ಸಿಗ್ನಲ್ ಸಿಕ್ಕಿದೆ. ಉಗ್ರಂ ಪಾರ್ಟ್ 2, 'ಉಗ್ರಂ ವೀರಂ' ಆಗುವುದು ಖಚಿತವಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್, 'ಉಗ್ರಂ ವೀರಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಇದರೊಂದಿಗೆ, ಗಾಂಧಿನಗರದಲ್ಲಿ ಹೊಸ ಅಲೆ ಸೃಷ್ಟಿಸಿದ್ದ 6-5=2 ಚಿತ್ರದ ನಿರ್ಮಾಪಕರು, ಶ್ರೀಮುರುಳಿಗಾಗಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೂ (ಪೊಡಕ್ಷನ್ ನಂ.4) ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.

srimuruli3

ಒಟ್ಟಿಗೆ ಮೂರ್ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವ ರೋರಿಂಗ್ ಸ್ಟಾರ್ ಬಗ್ಗೆ ಮುಂದಿನ ಎರಡು ವರ್ಷಗಳ ವರೆಗೂ ಕೆಮ್ಮಂಗಿಲ್ಲ. ಅದೃಷ್ಟ ಒದ್ಕೊಂಡು ಬರೋದು ಅಂದರೆ ಇದೇ ಇರಬೇಕು. (ಫಿಲ್ಮಿಬೀಟ್ ಕನ್ನಡ)

English summary
Actor Srimuruli of Ugramm fame have a busy schedule for another two years. Srimuruli has signed three more projects, which is announced on his birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada