'ರಾಜನಿವಾಸ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಸ್ಪೆಷಲ್ ಎಂಟ್ರಿ
ಡಿಎಎಂ36ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ರಾಜನಿವಾಸ' ಕನ್ನಡ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಂತದಲ್ಲಿದೆ. ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದ್ದು ಜೊತೆಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್ ವೊಂದರಲ್ಲಿ ಚಿತ್ರದ ಮುಖ್ಯಭಾಗವನ್ನು ಚಿತ್ರೀಕರಿಸಲಾಗಿದೆ.
ಮುಖ್ಯ ಭೂಮಿಕೆಯಲ್ಲಿ ರಾಘವ್ ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಖ್ಯಾತ ನಟ ಶ್ರೀ ನಗರ ಕಿಟ್ಟಿ ಅವರು ವಿಶೇಷ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಮಿಥುನ್ ಸುವರ್ಣ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ದಾ.ಪಿ ಆಂಜನಪ್ಪ ಹಾಗೂ ಲೋಕೇಶ್ ಎನ್ ಗೌಡ ಅವರು ಬಂಡವಾಳ ಹೂಡಿದ್ದಾರೆ.

ದಸರಾ ಹಬ್ಬದಂದು ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಗೌಳಿ ಚಿತ್ರದಲ್ಲಿ ಕಿಟ್ಟಿ ರಗಡ್
ಶ್ರೀನಗರ ಕಿಟ್ಟಿ ಗೌಳಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದಕ್ಕಾಗಿ ಗಡ್ಡ ಬಿಟ್ಟು ಪೂರ್ವ ತಯಾರಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ್ದ ಕಿಟ್ಟಿ, ''ಗೌಳಿ' ಸಿನಿಮಾದ ಹಲವು ವಿಭಾಗಗಳಲ್ಲಿ ಭಿನ್ನವಾದ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಸಿನಿಮಾದ ನಾಯಕನ ಪಾತ್ರ, ಆತನ ಗೆಟಪ್‌ನಿಂದ ಹಿಡಿದು ಪಾತ್ರ ಪೋಷಣೆ, ಆತನ ಸಂಭಾಷಣೆ, ಒಟ್ಟಾರೆ ಚಿತ್ರಕತೆಯನ್ನು ಹೆಣೆದಿರುವ ರೀತಿ ಇನ್ನೂ ಕೆಲವು ವಿಭಾಗಗಳಲ್ಲಿ ಹೊಸತನದ ಪ್ರಯತ್ನ ಮಾಡಿದ್ದೀವಿ. ಸಿನಿಮಾದ ಚಿತ್ರೀಕರಣದ ಯೋಜನೆ ತಯಾರಾಗಿದೆ. ಮೊದಲು 20 ದಿನಗಳ ಶೆಡ್ಯೂಲ್ ಯಲ್ಲಾಪುರ ಸಮೀಪದ ಹಳ್ಳಿಯಲ್ಲಿ ಮುಗಿಸಲಿದ್ದೇವೆ. ಆ ನಂತರ ಉಳಿದ ಭಾಗದ ಚಿತ್ರೀಕರಣ ಮುಗಿಸಿ ಇನ್ನು ಮೂರು ತಿಂಗಳ ಒಳಗೆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ'' ಎಂದು ಕಿಟ್ಟಿ ಮಾಹಿತಿ ನೀಡಿದ್ದಾರೆ.


Click it and Unblock the Notifications











