»   » ಶ್ರೀನಗರ ಕಿಟ್ಟಿ 'ಬಹುಪರಾಕ್' ಟ್ರೇಲರ್ ಸೂಪರ್

ಶ್ರೀನಗರ ಕಿಟ್ಟಿ 'ಬಹುಪರಾಕ್' ಟ್ರೇಲರ್ ಸೂಪರ್

Posted By:
Subscribe to Filmibeat Kannada

ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಬಹುಪರಾಕ್'. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಡೈಮಾಂಡ್ ಸ್ಟಾರ್ ಕಿಟ್ಟಿ ಅವರನ್ನು ವಿಭಿನ್ನವಾಗಿ ತೆರೆಗೆ ತರಲಾಗಿದೆ. ಚಿತ್ರದ ಟ್ರೇಲರ್ ನೋಡಿದರೆ ನಿಮಗೂ ಆ ಬದಲಾವಣೆ ಅನುಭವಕ್ಕೆ ಬರದೆ ಇರದು.

ಟ್ರೇಲರ್ ನಲ್ಲಿ ಉತ್ತರ ಕನ್ನಡ ಭಾಷೆಯ ಸೊಗಡಿದೆ. ನಾಯಕ ನಟ ಒಮ್ಮೆ ಲಾಂಗ್ ಹಿಡಿದರೆ ಇನ್ನೊಮ್ಮೆ ಪಿಸ್ತೂಲ್ ಕೈಗೆತ್ತಿಕೊಂಡು ಗುಂಡು ಸಿಡಿಸುತ್ತಾನೆ. ಪ್ರೀತೀನಾ ಸ್ನೇಹಾನಾ ಎಂದು ಹಪಹಪಿಸುತ್ತಾನೆ. ಇನ್ನೊಂದು ಕಡೆ ರಾಜಕೀಯದ ಬಣ್ಣ ರಾಚುತ್ತದೆ.

Bahuparak trailer

ಹಲವಾರು ವೈವಿಧ್ಯಮಯ ಸನ್ನಿವೇಶಗಳಿಂದ ಕೂಡಿರುವ ಟ್ರೇಲರ್ ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಸುತ್ತದೆ. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮೇಘನಾ ಸುಂದರ್ ರಾಜ್ ಜೋಡಿಯಾಗಿರೋ ಸಿನಿಮಾ ಇದು.

ಇಲ್ಲಿ ಶ್ರೀನಗರ ಕಿಟ್ಟಿ ಅನ್ನೋ ಸ್ಟಾರ್ ಒಬ್ಬರ ಸಿನಿಮಾಗೆ ಅಭಿಮಾನಿಗಳು ಹೇಗೆ ಕಾಯ್ತಿದ್ದಾರೋ ಹಾಗೇ ಸುನಿ ನಿರ್ದೇಶಕನ ಸಿನಿಮಾಗೆ ಕಾಯ್ತಿದ್ದಾರೆ. ಯಾಕಂದ್ರೆ ತನ್ನ ಅದ್ಭುತ ಮೇಕಿಂಗ್ ಮತ್ತು ಡೈಲಾಗ್ ಗಳಿಂದ ಯುವ ಸಿನಿಪ್ರೇಮಿಗಳಿಗೆ ಥ್ರಿಲ್ ಕೊಟ್ಟ ನಿರ್ದೇಶಕ ಸುನಿಯವರ ಎರಡನೇ ಚಿತ್ರ ಇದು.

<iframe width="600" height="360" src="//www.youtube.com/embed/oGGdiOrHJeI?feature=player_embedded" frameborder="0" allowfullscreen></iframe>

ಚಿತ್ರದಲ್ಲಿ ಕಿಟ್ಟಿ ಅವರದು ಮೂಡು ಶೇಡ್ ಗಳುಳ್ಳ ಪಾತ್ರ. ಪ್ರೀತಿ, ರಕ್ತ, ಪವರ್ ಚಿತ್ರದ ಪ್ರಮುಖ ಅಂಶಗಳು. ಇವೆಲ್ಲಾ ಹೇಗೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆ ತನಕ ಕಾಯಲೇಬೇಕು.

ಇಲ್ಲೂ ಸುನಿಯವರ ಸಿಂಪಲ್ ಡೈಲಾಗ್ ಗಳ ಥ್ರಿಲ್ ಇರುತ್ತದೆ. ಅದೆಲ್ಲಾ ಹೇಗಿರುತ್ತೆ ಅಂತ ನೋಡೋಕೆ ಅಲ್ಲೀವರ್ಗೂ ಕಾಯ್ಲೇಬೇಕು. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ಭಾವನಾ ಅವರ ಐಟಂ ಹಾಡು ನಿಲ್ಲಲಿದೆ. ಸಾಕಷ್ಟು ವಿಶೇಷತೆಳಿರುವ ಬಹುಪರಾಕ್ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ. (ಒನ್ಇಂಡಿಯಾ ಕನ್ನಡ)

English summary
On the occasion of his 33rd birthday on 8th July, Srinagar Kitty released the trailer of Bahuparak. A song sequence from the movie featuring Srinagar Kitty and Meghna Raj was also released.&#13; &#13;
Please Wait while comments are loading...