ಕೊರೊನಾ ಸೋಂಕಿನಿಂದ ನಟ ಶ್ರೀನಗರ ಕಿಟ್ಟಿ ಸಹೋದರ ಸಾವು
ಕೊರೊನಾ ಸೋಂಕಿನಿಂದ ಮೃತವಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ ನಟ ಶ್ರೀನಗರ ಕಿಟ್ಟಿ ಸಹೋದರ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
Recommended Video
Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada
ನಾಯಕ ನಟ ಶ್ರೀನಗರ ಕಿಟ್ಟಿ ಸಹೋದರ ಶಂಕರಣ್ಣ ಜೂನ್ 29 ರಂದು ಹೃದಯಾಘಾತದಿಂದ ನಿಧನವಾಗಿದ್ದರು. ನಿಯಮಗಳಂತೆ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿದೆ.
ಕಿಟ್ಟಿ ಸಹೋದರ ಶಂಕರಣ್ಣ ಅವರನ್ನು ಸರ್ಕಾರಿ ನಿಯಮಾವಳಿಗಳಿಗೆ ಅನುಸಾರ ಅಂತಿಮ ಸಂಸ್ಕಾರ ಮಾಡಲಾಗಿದೆ. ನಂತರ ಶ್ರೀನಗರ ಕಿಟ್ಟಿ ಕುಟುಂಬ ಸದಸ್ಯರೂ ಸಹ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ ಎನ್ನಲಾಗುತ್ತಿದೆ.

ನೆಗೆಟಿವ್ ವರದಿ ಬಂದಿದ್ದರೂ ಸಹ ಕುಟುಂಬದ ಎಲ್ಲರನ್ನೂ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ.
More from Filmibeat
English summary
Actor Srinagar Kitty's brother Shankaranna died of coronavirus. He died on June 29 when tested him report came affected by coronavirus.


Click it and Unblock the Notifications











