For Quick Alerts
  ALLOW NOTIFICATIONS  
  For Daily Alerts

  ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ: ಗಮನ ಸೆಳೆಯುತ್ತಿದೆ ಪೋಸ್ಟರ್

  |

  ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿಯನ್ನು ತೆರೆಮೇಲೆ ನೋಡದೆ ವರ್ಷಗಳಾಗಿದೆ. ಸಿಲಿಕಾನ್ ಸಿಟಿ ಸಿನಿಮಾ ಮೂಲಕ ಕೊನೆಯದಾಗಿ ಕಾಣಿಸಿಕೊಂಡಿದ್ದ ಕಿಟ್ಟಿ ಬಳಿಕ ಮಾಯವಾಗಿದ್ದರು. ಅವತಾರ ಪುರುಷ ಸಿನಿಮಾ ಬಿಟ್ಟರೆ ಕಿಟ್ಟಿ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

  ಆದರೀಗ ಕಿಟ್ಟಿ ಭಯಾನಕ ಲುಕ್ ನಲ್ಲಿ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಿಟ್ಟಿಯ ವಿಭಿನ್ನ ಲುಕ್ ನೋಡಿ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ. ಕಿಟ್ಟಿ ತನ್ನ ವೃತ್ತಿ ಜೀವನದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಮೊದಲ ಈ ರೀತಿಯ ನಟೋರಿಯಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ವಿಲನ್ ಆದ ಶ್ರೀನಗರ ಕಿಟ್ಟಿ?ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ವಿಲನ್ ಆದ ಶ್ರೀನಗರ ಕಿಟ್ಟಿ?

  ಅಂದಹಾಗೆ ಕಿಟ್ಟಿಯ ಈ ಹೊಸ ಗೆಟಪ್ ಗೌಳಿ ಸಿನಿಮಾದ್ದು. ಸೂರಾ ಎನ್ನುವ ನಿರ್ದೇಶಕರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ರಕ್ತಸಿಕ್ತವಾಗಿ, ಭಯಾನಕ ನೋಟ ಬೀರುತ್ತಿರುವ ಕಿಟ್ಟಿಯ ಈ ಲುಕ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

  ಗೌಳಿ ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಸದ್ಯ ಪಾತ್ರಗಳ ಆಯ್ಕೆಯಲ್ಲಿರುವ ಸಿನಿಮಾತಂಡ ಇನ್ನೆರಡು ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.

  ಚಿತ್ರಕ್ಕೆ ಪ್ರಸಿದ್ಧ ಹಿನ್ನಲೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನು ಖ್ಯಾತ ಛಾಯಾಗ್ರಾಹಕ ಭುವನ್ ಗೌಡ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಗೌಡ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

  ಸಂಭ್ರಮದ ಹೆಸರಲ್ಲಿ ಕೊರೊನಾ ಹರಡಲು ಕಾರಣರಾಗ್ತಿದ್ದಾರಾ ಸ್ಯಾಂಡಲ್ವುಡ್ ಸ್ಟಾರ್ಸ್! | Filmibeat Kannada

  ಶ್ರೀನಗರ ಕಿಟ್ಟಿ ಸದ್ಯ ಶರಣ್ ನಾಯಕನಾಗಿ ನಟಿಸುತ್ತಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾವಿದು. ಇನ್ನು ಕಾದರ್ ಕುಮಾರ್ ನಿರ್ದೇಶನದ ವೀರಂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಿಟ್ಟಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೀಗ ಗೌಳಿ ಸಿನಿಮಾದ ಲುಕ್ ಚಿತ್ರಾಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿದೆ.

  English summary
  Actor Srinagar Kitty starrer Gawli movie first look poster release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X