ತೆಲುಗು ಚಿತ್ರರಂಗಕ್ಕೆ ಶ್ರೀನಗರ ಕಿಟ್ಟಿ ಚೊಚ್ಚಲ ಹೆಜ್ಜೆ

By Rajendra

ಕನ್ನಡದಲ್ಲಿ ಒಳ್ಳೆ ಓಪನಿಂಗ್ ಪಡೆದ ಚಿತ್ರಗಳಲ್ಲಿ ಆರ್ ಚಂದ್ರು ನಿರ್ದೇಶನದ 'ಕೋ ಕೋ ಕೋಳಿ ಕೋತಿ' ಚಿತ್ರವೂ ಒಂದು. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಪ್ರಿಯಾಮಣಿ ಮುಖ್ಯಪಾತ್ರಗಳನ್ನು ಪೋಷಿಸಿದ್ದರು. ಈಗ ಈ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ.

ತೆಲುಗು ಚಿತ್ರಕ್ಕೆ 'ತಿಕ್ಕ' (ಐಲು, ತಿಕ್ಕಲು ಎಂದರ್ಥ) ಎಂದು ಹೆಸರಿಡಲಾಗಿದೆ. ಕನ್ನಡದ 'ಕೋ ಕೋ' ಚಿತ್ರದಲ್ಲಿನ ಬಹುತೇಕ ತಾರಾಗಣ ಇಲ್ಲೂ ಇರುತ್ತದೆ. "ತೆಲುಗು ಚಿತ್ರದಲ್ಲಿ ಅಭಿನಯಿಸುವ ಬಯಕೆ ನನಗೂ ಇರಲಿಲ್ಲ. ಆದರೆ ನಿರ್ದೇಶಕ ಒತ್ತಾಯದ ಮೇರೆಗೆ ಒಪ್ಪಿದ್ದೇನೆ..."

"ಕೋ ಕೋ ಚಿತ್ರದ ಕಥೆ ತೆಲುಗಿಗೆ ಬಹುತೇಕ ಹೊಂದಿಕೆಯಾಗುತ್ತದೆ ಎಂದಿದ್ದರು. ನನ್ನ ಪ್ರಯತ್ನ ನಾನು ಮಾಡುತ್ತಿದ್ದೇನೆ" ಎಂದಿದ್ದಾರೆ ಶ್ರೀನಗರ ಕಿಟ್ಟಿ. ಅಲ್ಲಿನವರೇ ಆದ ಕೆಲವು ಕಲಾವಿದರನ್ನು ಬಳಸಿಕೊಳ್ಳುತ್ತಿದ್ದೇನೆ. ಚಿತ್ರದ ಐಟಂ ಹಾಡನ್ನು ಚಿತ್ರೀಕರಿಸುತ್ತಿದ್ದೇವೆ ಎಂದಿದ್ದಾರೆ ಕಿಟ್ಟಿ. ಐಟಂ ಹಾಡಿಗೆ ಸಂಜನಾ ಹೆಜ್ಜೆ ಹಾಕಲಿದ್ದಾರಂತೆ. ಕೋ ಕೋ ಚಿತ್ರ ವಿಮರ್ಶೆ ಓದಿ.

ಒಟ್ಟು ರು.8 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಕೋ ಕೋ ಚಿತ್ರ ಕರ್ನಾಟಕದಾದ್ಯಂತ ತೆರೆಕಂಡಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಒಟ್ಟು 30 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದೆ. ಈಗ ತೆಲುಗಿನತ್ತ ಪಯಣ ಮಾಡಿದ್ದು ಅಲ್ಲೂ ಒಂದಷ್ಟು ಸದ್ದು ಮಾಡುವ ಸೂಚನೆಗಳಿವೆ. (ಏಜೆನ್ಸೀಸ್)

More from Filmibeat

English summary
Kannada romantic film Ko Ko...Koli Kothi starring Srinagar Kitty and Priyamani to be remade in Telugu as 'Tikka' (means crack-brained). The film will mark actor Srinagara Kitty’s debut in Tollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X