ಗೌಳಿ ಟೀಸರ್: ಭಯಾನಕ ಅವತಾರದಲ್ಲಿ ಬಂದ ಶ್ರೀನಗರ ಕಿಟ್ಟಿ

ಮುದ್ದು ಮುಖದ ಲವರ್ ಬಾಯ್ ಆಗಿದ್ದ ಶ್ರೀನಗರ ಕಿಟ್ಟಿ ಈಗ ಅವತಾರವನ್ನು ಪೂರ್ಣವಾಗಿ ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಹೆಣ್ಣುಮಕ್ಕಳ ಜಡೆಯಷ್ಟುದ್ದ ಗಡ್ಡ ಬಿಟ್ಟು ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನ ರೊಮ್ಯಾಂಟಿಕ್ ಪ್ರೇಮಕತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಗರ ಕಿಟ್ಟಿ, ತಮ್ಮ ಲುಕ್‌ ಜೊತೆಗೆ ಕಥೆಯ ಆಯ್ಕೆಯಲ್ಲೂ ಬದಲಾವಣೆ ಮಾಡಿಕೊಂಡು ಪಕ್ಕಾ ಹಳ್ಳಿ ಆಕ್ಷನ್ ಸಿನಿಮಾದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಗೌಳಿ' ಸಿನಿಮಾದ ಟೀಸರ್‌ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಮೇಕಿಂಗ್ ಟೀಸರ್‌ನಲ್ಲಿಯೇ ಗಮನ ಸೆಳೆಯುತ್ತಿದೆ. ಅದರಲ್ಲಿಯೂ ಕಿಟ್ಟಿಯ ಭಯಾನಕ ಅವತಾರವಂತೂ ಭಾರಿ ನಿರೀಕ್ಷೆ ಹುಟ್ಟಿಸುತ್ತಿದೆ.

Srinagara Kitty Starrer Gauli Movie Teaser Released
ನಿನ್ನೆಯಷ್ಟೆ ಟೀಸರ್ ಅನ್ನು ಶ್ರೀನಗರ ಕಿಟ್ಟಿಯ ಆಪ್ತ ಗೆಳೆಯರಾದ ನಟ ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ನಟ ಪ್ರೇಮ್ ಹಾಗೂ ಹಲವರು ಬಿಡುಗಡೆ ಮಾಡಿದ್ದಾರೆ.

'ಗೌಳಿ' ಸಿನಿಮಾವು ನಿಜ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾ ಎಂದು ಟೀಸರ್‌ನಲ್ಲಿ ಹೇಳಲಾಗಿದ್ದು, ಸಿನಿಮಾವು ಗೌಳಿ ಸಮುದಾಯದ ಜನರ ಕತೆಯಿರಬಹುದೆಂಬ ಊಹೆಯೊಂದು ಟೀಸರ್‌ ನೋಡಿದ ಬಳಿಕ ಮೂಡುತ್ತದೆ. ಇದಕ್ಕೆ ಪೂರಕವಾಗಿ ರಂಗಾಯಣ ರಘು ಅವರ ಸಂಭಾಷಣೆಯೂ ಇದೆ.

ಕಚ್ಚಾ ಸಂಭಾಷಣೆಗಳು, ಮೃಗೀಯ ರೀತಿಯ ಫೈಟ್‌ಗಳು, ಆಕ್ಷನ್‌ ದೃಶ್ಯಗಳು ಸಿನಿಮಾದಲ್ಲಿ ಸಾಕಷ್ಟು ಇದ್ದಾವೆಂಬುದು ಟೀಸರ್‌ನಿಂದಲೇ ಗೊತ್ತಾಗುತ್ತಿದೆ. ಶ್ರೀನಗರ ಕಿಟ್ಟಿಯ ಈವರೆಗಿನ ಎಲ್ಲ ಸಿನಿಮಾಗಳಿಗಿಂತಲೂ ಸಂಪೂರ್ಣ ಭಿನ್ನವಾಗಿದೆ 'ಗೌಳಿ' ಎಂಬುದಂತೂ ಪಕ್ಕಾ.

ಶ್ರೀನಗರ ಕಿಟ್ಟಿ ಸಹ ಚಿತ್ರರಂಗದಿಂದ ಕೆಲ ವರ್ಷ ವಿರಾಮ ತೆಗೆದುಕೊಂಡು ಈಗ 'ಗೌಳಿ' ಸಿನಿಮಾದಿಂದ ಮರಳಿದ್ದಾರೆ. 2017 ರಲ್ಲಿ ಬಿಡುಗಡೆ ಆಗಿದ್ದ 'ಸಿಲಿಕಾನ್ ಸಿಟಿ' ಸಿನಿಮಾದ ಬಳಿಕ ಶ್ರೀನಗರ ಕಿಟ್ಟಿ ಕಣ್ಮರೆಯಾಗಿಬಿಟ್ಟಿದ್ದರು. ಆ ನಂತರ ಯಾವ ಸಿನಿಮಾದಲ್ಲಿಯೂ ನಟಿಸಿರಲಿಲ್ಲ. ಈಗ 'ಗೌಳಿ' ಮೂಲಕ ಮರಳಿ ಬರುತ್ತಿದ್ದಾರೆ.

'ಗೌಳಿ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಜೊತೆಗೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನಾ ಗೌಡ, ಯಶ್ ಶೆಟ್ಟಿ, ಸುಧಿ, ಗೋವಿಂದೇಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಸೂರ ಎಂಬುವರು ನಿರ್ದೇಶನ ಮಾಡಿದ್ದಾರೆ. ರಘು ಸಿಂಘಂ ನಿರ್ಮಾಣ ಮಾಡಿದ್ದಾರೆ. ಸಂಗೀತ ಶಶಾಂತ್ ಶೇಷಗಿರಿಯದ್ದು. ಸಂದೀಪ್ ವಲ್ಲುರಿ ಸಿನಿಮಾಟೊಗ್ರಫಿ, ಸಂಕಲನ ಉಮೇಶ್ ಆರ್‌ಬಿ ಅವರದ್ದು.

More from Filmibeat

English summary
Srinagara Kitty starrer Gauli movie teaser released on February 02. Srinagara Kitty looking completely different in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X