Gowli Trailer: 'ಗೌಳಿ' ಗೂಳಿ ಆದ್ರೆ ಹೇಗಿರುತ್ತೆ? ಈ ಸಲ ಕಿಟ್ಟಿ ಗೆಲ್ಲೋದು ಗ್ಯಾರೆಂಟಿ?

ಸೋಲಿನ ಸುಳಿಗೆ ಸಿಲುಕಿರುವ ಶ್ರೀನಗರ ಕಿಟ್ಟಿ 'ಗೌಳಿ' ಆಗಿ ಕಂಬ್ಯಾಕ್ ಮಾಡುವ ಸುಳಿವು ಸಿಗುತ್ತಿದೆ. ಮುಂದಿನ ವಾರ ಸಿನಿಮಾ ತೆರೆಗಪ್ಪಳಿಸಲಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಉತ್ತರ ಕನ್ನಡದ ಸುತ್ತಾಮುತ್ತಾ ಇರುವ 'ಗೌಳಿ' ಸಮುದಾಯದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗಿದೆ.

ಸೂರ ನಿರ್ದೇಶನದ 'ಗೌಳಿ' ಚಿತ್ರವನ್ನು ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದು ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಗೌಳಿ' ಸಿನಿಮಾ ಮೇಕಿಂಗ್, ಬಿಜಿಎಂ ಎಲ್ಲವೂ ಕಿಕ್ ಕೊಡ್ತಿದೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿರುವ ಶ್ರೀನಗರ ಕಿಟ್ಟಿ ಈ ಚಿತ್ರದ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದಾರೆ. ಟ್ರೈಲರ್ ನೋಡಿದವರು ಶ್ರೀನಗರ ಕಿಟ್ಟಿ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದಾರೆ.

ವಿಭಿನ್ನ ಕಥೆ, ಅದಕ್ಕೆ ತಕ್ಕ ಟ್ರೀಟ್‌ಮೆಂಟ್, ನುರಿತ ಕಲಾವಿದರು, ತಂತ್ರಜ್ಞರ ಕೈಚಳಕದ 'ಗೌಳಿ' ಸಿನಿಮಾ ಟ್ರೈಲರ್‌ನಿಂದಲೇ ಭರವಸೆ ಮೂಡಿಸಿದೆ. ಅಷ್ಟೇ ಸೊಗಸಾಗಿ ಚಿತ್ರವನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ.

ರಿವೇಂಜ್ ಡ್ರಾಮಾ 'ಗೌಳಿ'

ರಿವೇಂಜ್ ಡ್ರಾಮಾ 'ಗೌಳಿ'

ಹಸು ಸಾಕುತ್ತಾ ಹಾಲು ಮಾರಿ ಬದುಕುವ ಗೌಳಿ ಸಮುದಾಯದಲ್ಲಿ ನಡುವೆ ನಡೆಯುವ ಕಥೆ ಇದು. ಬದುಕಿನ ಮೇಲಿನ ಆಸೆಯಿಂದ ತಾನಾಯಿತು, ತನ್ನ ಕುಟುಂಬ ಆಯಿತು ಎಂದು ಬದುಕುತ್ತಿರುವ ಒಬ್ಬ ಗೌಳಿಯ ಕಥೆ ಇಲ್ಲಿದೆ. ಇಂತಹ ಕುಟುಂಬಕ್ಕೆ ಸಮಸ್ಯೆ ಎದುರಾದಾಗ ಮನೆಯ ಒಡೆಯ ಹೇಗೆ ತಿರುಗಿ ಬೀಳುತ್ತಾನೆ. ಆತನಲ್ಲಿರುವ ಮೃಗೀಯ ಭಾವನೆಗಳು ಹೊರಗೆ ಬಂದರೆ ಏನಾಗುತ್ತದೆ? ಆತ ಹೇಗೆ ಸೇಡು ತೋರಿಸಿಕೊಳ್ಳುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ಚಿತ್ರದಲ್ಲಿವೆ ಗಟ್ಟಿ ಪಾತ್ರಗಳು

ಚಿತ್ರದಲ್ಲಿವೆ ಗಟ್ಟಿ ಪಾತ್ರಗಳು

ರಾಜ್ಯದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗೌಳಿ ಸಮುದಾಯದ ಜನ ವಾಸಿಸುತ್ತಿದ್ದಾರೆ. ಗೌಳಿ ಜನಾಂಗದ ಕಷ್ಟ, ಸುಖ, ಆ ಜನಾಂಗಕ್ಕೆ ಕಂಟಕವಾಗುವ ಮಾಫಿಯಾ ಎಲ್ಲವನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ನಾಯಕನಷ್ಟೇ ಎದುರಾಳಿ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶರತ್‌ ಲೋಹಿತಾಶ್ವ, ಕಾಕ್ರೋಚ್ ಸುಧಿ ಪಾತ್ರಗಳಿಗೂ ಚಿತ್ರದಲ್ಲಿ ಬಹಳ ಪ್ರಾಮುಖ್ಯತೆ ಇರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.

ರಗಡ್ ಲುಕ್‌ನಲ್ಲಿ ಕಿಟ್ಟಿ

ರಗಡ್ ಲುಕ್‌ನಲ್ಲಿ ಕಿಟ್ಟಿ

'ಗೌಳಿ' ಚಿತ್ರದ ಈ ಪಾತ್ರಕ್ಕಾಗಿ ಬಹಳ ದಿನಗಳಿಂದ ನಟ ಶ್ರೀನಗರ ಕಿಟ್ಟಿ ಉದ್ದನೆಯ ಗಡ್ಡ, ಕೂದಲು ಬಿಟ್ಟಿದ್ದರು. ಚಿತ್ರದಲ್ಲಿ ಬಹಳ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಸೋಲಿನಿಂದ ಕಂಗೆಟ್ಟ ಕಿಟ್ಟಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಪಾತ್ರವನ್ನ ಸೂರ ಡಿಸೈನ್ ಮಾಡಿದ್ದು ಕಿಟ್ಟಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಇದು ತಮಗೆ ಪರ್ಫೆಕ್ಟ್ ಕಂಬ್ಯಾಕ್ ಸಿನಿಮಾ ಆಗುತ್ತದೆ ಎಂದುಕೊಂಡಿದ್ದಾರೆ. ಈ ಹಿಂದೆ ಇಂತಹ ಪಾತ್ರದಲ್ಲಿ ಎಂದು ಅವರು ನಟಿಸಿರಲಿಲ್ಲ.

ಫೆಬ್ರವರಿ 24ಕ್ಕೆ 'ಗೌಳಿ' ರಿಲೀಸ್

ಫೆಬ್ರವರಿ 24ಕ್ಕೆ 'ಗೌಳಿ' ರಿಲೀಸ್

ಪೋಸ್ಟರ್, ಟೀಸರ್‌ಗಳಿಂದ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸದ್ದು ಮಾಡ್ತಿದ್ದ 'ಗೌಳಿ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಶಿರಸಿ ಸುತ್ತಾಮುತ್ತಾ ಹಳ್ಳಿಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಇಂಟೆನ್ಸ್ ಕಥೆಯನ್ನು ಅಷ್ಟೇ ಇಂಟೆನ್ಸ್ ಆಗಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ.

More from Filmibeat

English summary
Srinagara Kitty Starrer Gowli Trailer Released. movie releasing at theaters this February 24th. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X