For Quick Alerts
  ALLOW NOTIFICATIONS  
  For Daily Alerts

  ಒಗಟು ಬಿಡಿಸಿ.. ಡಾ.ರಾಜ್ ಕುಮಾರ್ ಗೆ ಶುಭಾಶಯ ಹಾರೈಸಿ..

  By ಶ್ರೀನಾಥ್ ಭಲ್ಲೆ
  |

  ಏಪ್ರಿಲ್ 24 ಬಂತು ಅಂದ್ರೆ, ಕನ್ನಡ ಸಿನಿ ಪ್ರಿಯರಿಗೆ ಅಕ್ಷರಶಃ ಹಬ್ಬ. ಯಾಕಂದ್ರೆ, ಇಂದು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ರವರ ಜನ್ಮದಿನೋತ್ಸವ. 'ಅಭಿಮಾನಿಗಳೇ ದೇವರು' ಎಂದು ಕರೆಯುತ್ತಿದ್ದ ಅಭಿಮಾನಿಗಳ ಆರಾಧ್ಯ ದೈವ ಅಣ್ಣಾವ್ರ ಹುಟ್ಟುಹಬ್ಬ.

  ರಾಜಣ್ಣನ ಸವಿನೆನಪಿನಲ್ಲಿ ಇಂದು ರಕ್ತದಾನ, ಆರೋಗ್ಯ ಶಿಬಿರ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಅಭಿಮಾನಿಗಳು 'ವರನಟ'ನ ಬರ್ತಡೇಯನ್ನ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

  'ರಾಜರ ರಾಜ' ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ಒನ್ ಇಂಡಿಯಾ ಕನ್ನಡದ ಅಂಕಣಕಾರರಾದ ಶ್ರೀನಾಥ್ ಭಲ್ಲೆ 'ಒಗಟು'ಗಳ ಮೂಲಕವೇ ಅಣ್ಣಾವ್ರಿಗೆ ಶುಭಾಶಯ ತಿಳಿಸಿದ್ದಾರೆ. ಡಾ.ರಾಜ್ ರವರ ಚಿತ್ರಗಳಿಂದಲೇ ಈ ಒಗಟುಗಳು ರಚಿತವಾಗಿದ್ದು, ಅದನ್ನ ನೀವೂ ಬಿಡಿಸಿ, ದೊಡ್ಮನೆ ದೇವರಿಗೆ ಶುಭಾಶಯಗಳನ್ನು ಹಾರೈಸಿ..

  ಒಗಟು ಒಂದು

  ಒಗಟು ಒಂದು

  ಅಣ್ಣಾವ್ರು LIC ಏಜೆಂಟ್ ಪಾತ್ರ ನಿರ್ವಹಿಸಿದ್ದ ಚಿತ್ರ ಹೆಸರು ಗೊತ್ತೇ? ಕ್ಲೂ ಬೇಕು ಎಂದರೆ ನಮ್ಮಲ್ಲಿ ಈಗ ಇದೇ ಋತು ನಡೀತಿದೆ. ಚಿತ್ರದ ಹೆಸರೇನು? ಗೊತ್ತಾದ ಮೇಲೆ ಮೊದಲಕ್ಷರ ಬರೆದುಕೊಳ್ಳಿ.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಒಗಟು ಎರಡು

  ಒಗಟು ಎರಡು

  "ದುರುದುರು ನೋಡದೆ ಕಿಡಿಗಳ ಕಾರದೆ, ಕೆಣಕದೆ ಕಾಡದೆ ದೂರಕೆ ಓಡದೆ" ... ಹಾಡು ಗೊತ್ತಲ್ಲಾ? ಹಾಗಿದ್ರೆ ಸಿನಿಮಾ ಹೆಸರೂ ಗೊತ್ತಿರಲೇಬೇಕು. ಚಿತ್ರದ ಹೆಸರೇನು? ಮೊದಲ ಅಕ್ಷರ ಬರೆದುಕೊಳ್ಳಿ

  ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು? ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?

  ಒಗಟು ಮೂರು

  ಒಗಟು ಮೂರು

  ಚಿತ್ರ ಒಂದೇ ಆದರೂ ಒಬ್ಬರೇ ಲೇಖಕರ ಮೂರು ಕಥೆಗಳ ಆಧಾರಿತ. ಹೆಸರು ಗೊತ್ತಿಲ್ಲದೇ ಇರೋಕ್ಕೆ ಸಾಧ್ಯವೇ ಇಲ್ಲ. ಇರಲಿ, ಹೇಳಿಬಿಡಿ. ಈ ಚಿತ್ರದಲ್ಲಿ ಅಣ್ಣಾವ್ರ ಪಾತ್ರದ ಹೆಸರೇನು? ಅದರ ಮೊದಲಕ್ಷರ ಹೇಳಿ, ಬರ್ಕೊಳಿ.

  ಅಣ್ಣಾವ್ರ ಜನುಮದಿನಕ್ಕೆ ವಿಶೇಷವಾಗಿ ಶುಭಕೋರಿದ ಸಿನಿತಾರೆಯರುಅಣ್ಣಾವ್ರ ಜನುಮದಿನಕ್ಕೆ ವಿಶೇಷವಾಗಿ ಶುಭಕೋರಿದ ಸಿನಿತಾರೆಯರು

  ಒಗಟು ನಾಲ್ಕು

  ಒಗಟು ನಾಲ್ಕು

  ಅಣ್ಣಾವ್ರ ಮಗನ ಚಿತ್ರ ಈ ಹೆಸರಲ್ಲಿ ಈಗ ಬಂದಿರಬಹುದು. ಮೈಲಾರಿ ಹೆಸರಲ್ಲಿ ರಾಜ್ ಅವರ ಪ್ರಾಣಪ್ರಿಯವಾದ ಈ ಪ್ರಾಣಿ ಯಾವುದು? ಚಿತ್ರದ ಹೆಸರೇನು? ಪ್ರಾಣಿಯ ಹೆಸರಿನ ಮೊದಲ ಅಕ್ಷರ ಗೀಚಿಕೊಳ್ಳಿ.

  ಒಗಟು ಐದು

  ಒಗಟು ಐದು

  ರವಿಚಂದ್ರನ್ ಮತ್ತು ಚಿರಂಜೀವಿ ಒಟ್ಟಿಗೆ ನಟಿಸಿದ್ದ ಚಿತ್ರ ಗೊತ್ತೇ? ಈ ಹೆಸರು ಕೇಳಿದ ಕೂಡಲೇ ರಾಜ್ ಯಾವ ಪಾತ್ರದಲ್ಲಿ ಕಾಣಿಸಿಕೊಂಡು ಬದಲಾದರು ಅನ್ನೋದು ಗೊತ್ತಿದೆ. ಹಾಗಿದ್ರೆ ಆ ಪಾತ್ರದ ಹೆಸರು ನೆನಪಿಗೆ ಬರಲೇಬೇಕು. ಆಗಲೇ ಅಣ್ಣಾವ್ರ ಚಿತ್ರದ ಹೆಸರು ಪೂರ್ತಿ ಆಗೋದು. ಚಿತ್ರದ ಹೆಸರೇನು? ಪಾತ್ರದ ಹೆಸರೇನು?

  ಒಗಟು ಆರು

  ಒಗಟು ಆರು

  "ಏರಿ ಮೇಲೆ ಏರಿ, ಮೇಲೆ ಕೆಳಗೆ ಹಾರಿ, ಹಕ್ಕಿ ಬಂದು ಕುಂತೈತಲ್ಲೋ" ಹಾಡು ಗೊತ್ತೇ.? ಸಿನಿಮಾ ಹೆಸರು ಗೊತ್ತೇ ಇರುತ್ತೆ.! ಚಿತ್ರದ ಹೆಸರಿನ ಮೊದಲ ಅಕ್ಷರ ಬರ್ಕೊಳ್ಳಿ ಮತ್ತೆ!

  ಒಗಟು ಏಳು

  ಒಗಟು ಏಳು

  "ಕುರಿ ಬುದ್ದಿ ಕುರಿಗೆ, ನರಿ ಬುದ್ದಿ ನರಿಗೆ. ಒಬ್ಬಟಿನಾಗೆ ಹೂರಣ ತುಂಬಿದಾಗೆ ತಲೆಯಾಗೆ ಬುದ್ದಿ ತುಂಬಿರ್ತಾನೆ ದ್ಯಾವ್ರು" ಹೆಸರು ಹೇಳಬೇಕಾಗಿ ವಿನಂತಿ. ಚಿತ್ರದ ಹೆಸರಲ್ಲ ಆದರೆ ಪಾತ್ರಧಾರಿಯ ಹುಟ್ಟೂರು ಮತ್ತು ಕಾಯಕ. ಎರಡರದ್ದೂ ಮೊದಲಕ್ಷರ ಒಂದೇ. ಯಾವುದಾದ್ರೂ ಬರ್ಕೊಳ್ಳಿ ಅಡ್ಡಿಯಿಲ್ಲ.!

  ಒಗಟು ಎಂಟು

  ಒಗಟು ಎಂಟು

  ಈ ಗಂಡು "ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿದೆ..." ಎಂದಿದ್ದು ಯಾರಿಗೆ? ಹೋಗಲಿ ಬಿಡಿ ಹಾಡು ಗೊತ್ತೇ? ಹಾಡಿನ ಸಾಹಿತ್ಯದ ಮೊದಲಕ್ಷರ ಬರೆದುಕೊಳ್ಳಿ.

  ಒಗಟು ಒಂಬತ್ತು

  ಒಗಟು ಒಂಬತ್ತು

  "ಅವನು ತಿನ್ತಾ ಇರೋ ಅನ್ನ ನಮ್ದು, ಅವನು ಉಟ್ಟಿರೋ ಬಟ್ಟೆ ನಮ್ಮದು..." ಇತ್ಯಾದಿ ಮಾತುಗಳನ್ನು ಕೇಳಿದ ಮನುಷ್ಯನ ಪಾತ್ರದ ಹೆಸರು ನಿಮಗೆಲ್ಲಾ ಗೊತ್ತಿದೆ ಅಲ್ಲವೇ? ಚಲನಚಿತ್ರದ ಹೆಸರಲ್ಲಿ ಅರ್ಧ ಈಗಾಗಲೇ ಹೇಳಿದ್ದೇನೆ. ಪಾತ್ರದ ಹೆಸರು ಹೇಳಿ, ಮೊದಲಕ್ಷರವನ್ನು ಸ್ವಲ್ಪ ತುಂಡು ಹಾಕಿ ಬರ್ಕೊಳ್ಳಿ

  ಸಾಲಾಗಿ ಜೋಡಿಸಿ...

  ಸಾಲಾಗಿ ಜೋಡಿಸಿ...

  ಈಗ ಬರ್ಕೊಂಡಿದ್ದೆಲ್ಲಾ ಸಾಲಾಗಿ ಜೋಡಿಸಿ . . . ಏಪ್ರಿಲ್ 24 ರಂದು ಹುಟ್ಟಿದ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಹಾರೈಸಿಬಿಡಿ.! (ಕೃಪೆ: ಶ್ರೀನಾಥ್ ಭಲ್ಲೆ)

  English summary
  Try to answer the Riddles given by Srinath Bhalle and wish Dr.Rajkumar on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X