'ಕೆಜಿಎಫ್ 2' ನಲ್ಲಿ ಮದುವೆ ಆಗ್ತಾರಾ ರಾಕಿ - ರೀನಾ?
Recommended Video

'ಕೆಜಿಎಫ್ 2' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದೊಡ್ಡ ಕುತೂಹಲ ಇದೆ. ಹಾಗೇಯೇ ಹಲವು ಪ್ರಶ್ನೆಗಳು ಇವೆ. 'ಕೆಜಿಎಫ್' ಮೊದಲ ಭಾಗ ನೋಡಿರುವ ಜನರು ಮುಂದಿನ ಭಾಗದಲ್ಲಿ ಹೀಗೆ ಆಗುತ್ತೆ.. ಹಾಗೆ ಆಗುತ್ತೆ... ಅಂತ ತಮ್ಮ ತಮ್ಮಲೆ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.
ಅದೇ ರೀತಿ 'ಕೆಜಿಎಫ್ 2' ನಲ್ಲಿ ನಾಯಕ ರಾಕಿ ಹಾಗೂ ನಾಯಕಿ ರೀನಾ ಮದುವೆ ಆಗ್ತಾರಾ? ಎನ್ನುವ ಪ್ರಶ್ನೆ ಹಲವರಿಗೆ ಇದೆ. ಹೌದು, ಇಂತಹ ಪ್ರಶ್ನೆಗಳು ಈಗ ನಟಿ ಶ್ರೀನಿಧಿ ಶೆಟ್ಟಿಗೆ ಎದುರಾಗುತ್ತಿವೆ.
ನಟಿ ಶ್ರೀನಿಧಿ ಶೆಟ್ಟಿ ಇನ್ಟಾಗ್ರಾಮ್ ಖಾತೆಯಲ್ಲಿ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಕೇಳಿದ ಪ್ರಶ್ನೆ ''ಕೆಜಿಎಫ್ 2' ನಲ್ಲಿ ರಾಕಿ ಹಾಗೂ ರೀನಾ ಮದುವೆ ಆಗ್ತಾರಾ ?'' ಎನ್ನುವುದಾಗಿತ್ತು.

ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ ಶ್ರೀನಿಧಿ ಶೆಟ್ಟಿ ಮೊದ ಮೊದಲು ''ಗೊತ್ತಿಲ್ಲ ಕಾದು ನೋಡಬೇಕು. ವೈಟ್ ಅಂಡ್ ಸೀ'' ಎಂದು ನಗುತ್ತಾ ಉತ್ತರ ನೀಡಿದರು.
ಪದೇ ಪದೇ ಇದೇ ಪ್ರಶ್ನೆಗಳು ಶ್ರೀನಿಧಿಗೆ ಬಂತು. ''ಎಷ್ಟೊಂದು ಜನ ರಾಕಿ ಮತ್ತು ರೀನಾ ಮದುವೆ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದೀರಿ ಯಾಕೆ..? ನಿರೀಕ್ಷೆ ಹಾಗೆ ಮುಂದುವರೆಯಲಿ'' ಎನ್ನುವ ಮೂಲಕ ಶ್ರೀನಿಧಿ ಅಭಿಮಾನಿಗಳಿಗೆ ಗೂಗ್ಲಿ ಹಾಕಿದರು.

ಅಂದಹಾಗೆ, 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಯಶ್ ಏಪ್ರಿಲ್ ನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ರಾಕಿ ಮತ್ತು ರೀನಾ ಮದುವೆ ಆಗ್ತಾರಾ ಎನ್ನುವುದಕ್ಕೆ ಉತ್ತರ ಸಿನಿಮಾ ರಿಲೀಸ್ ಆದ ಮೇಲೇಯೇ ಸಿಗುತ್ತದೆ.


Click it and Unblock the Notifications











