twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2' ನಲ್ಲಿ ಮದುವೆ ಆಗ್ತಾರಾ ರಾಕಿ - ರೀನಾ?

    |

    Recommended Video

    KGF Movie : ಅಭಿಮಾನಿಗಳಿಗಿದ್ದ ಅನುಮಾನಗಳಿಗೆ ಉತ್ತರ ಕೊಟ್ಟ ಶ್ರೀನಿಧಿ ಶೆಟ್ಟಿ | FILMIBEAT KANNADA

    'ಕೆಜಿಎಫ್ 2' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದೊಡ್ಡ ಕುತೂಹಲ ಇದೆ. ಹಾಗೇಯೇ ಹಲವು ಪ್ರಶ್ನೆಗಳು ಇವೆ. 'ಕೆಜಿಎಫ್' ಮೊದಲ ಭಾಗ ನೋಡಿರುವ ಜನರು ಮುಂದಿನ ಭಾಗದಲ್ಲಿ ಹೀಗೆ ಆಗುತ್ತೆ.. ಹಾಗೆ ಆಗುತ್ತೆ... ಅಂತ ತಮ್ಮ ತಮ್ಮಲೆ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಚಾಪ್ಟರ್ 2 ಕಥೆ ಬಗ್ಗೆ ಹೀಗೊಂದು ಚರ್ಚೆ, ಇದು ನಿಜ ಆದ್ರೆ.?ಕೆಜಿಎಫ್ ಚಾಪ್ಟರ್ 2 ಕಥೆ ಬಗ್ಗೆ ಹೀಗೊಂದು ಚರ್ಚೆ, ಇದು ನಿಜ ಆದ್ರೆ.?

    ಅದೇ ರೀತಿ 'ಕೆಜಿಎಫ್ 2' ನಲ್ಲಿ ನಾಯಕ ರಾಕಿ ಹಾಗೂ ನಾಯಕಿ ರೀನಾ ಮದುವೆ ಆಗ್ತಾರಾ? ಎನ್ನುವ ಪ್ರಶ್ನೆ ಹಲವರಿಗೆ ಇದೆ. ಹೌದು, ಇಂತಹ ಪ್ರಶ್ನೆಗಳು ಈಗ ನಟಿ ಶ್ರೀನಿಧಿ ಶೆಟ್ಟಿಗೆ ಎದುರಾಗುತ್ತಿವೆ.

    ನಟಿ ಶ್ರೀನಿಧಿ ಶೆಟ್ಟಿ ಇನ್ಟಾಗ್ರಾಮ್ ಖಾತೆಯಲ್ಲಿ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಕೇಳಿದ ಪ್ರಶ್ನೆ ''ಕೆಜಿಎಫ್ 2' ನಲ್ಲಿ ರಾಕಿ ಹಾಗೂ ರೀನಾ ಮದುವೆ ಆಗ್ತಾರಾ ?'' ಎನ್ನುವುದಾಗಿತ್ತು.

    srinidhi shetty answered her fans questions about kgf chapter 2

    ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ ಶ್ರೀನಿಧಿ ಶೆಟ್ಟಿ ಮೊದ ಮೊದಲು ''ಗೊತ್ತಿಲ್ಲ ಕಾದು ನೋಡಬೇಕು. ವೈಟ್ ಅಂಡ್ ಸೀ'' ಎಂದು ನಗುತ್ತಾ ಉತ್ತರ ನೀಡಿದರು.

    ಕೆಜಿಎಫ್ 2 ಮುಹೂರ್ತ : ಪೂಜೆ ಮಾಡಿದ ಪುರೋಹಿತರೂ ಬಿಟ್ಟಿದ್ದರು 'ಗಡ್ಡ'ಕೆಜಿಎಫ್ 2 ಮುಹೂರ್ತ : ಪೂಜೆ ಮಾಡಿದ ಪುರೋಹಿತರೂ ಬಿಟ್ಟಿದ್ದರು 'ಗಡ್ಡ'

    ಪದೇ ಪದೇ ಇದೇ ಪ್ರಶ್ನೆಗಳು ಶ್ರೀನಿಧಿಗೆ ಬಂತು. ''ಎಷ್ಟೊಂದು ಜನ ರಾಕಿ ಮತ್ತು ರೀನಾ ಮದುವೆ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದೀರಿ ಯಾಕೆ..? ನಿರೀಕ್ಷೆ ಹಾಗೆ ಮುಂದುವರೆಯಲಿ'' ಎನ್ನುವ ಮೂಲಕ ಶ್ರೀನಿಧಿ ಅಭಿಮಾನಿಗಳಿಗೆ ಗೂಗ್ಲಿ ಹಾಕಿದರು.

    srinidhi shetty answered her fans questions about kgf chapter 2

    ಅಂದಹಾಗೆ, 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಯಶ್ ಏಪ್ರಿಲ್ ನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ರಾಕಿ ಮತ್ತು ರೀನಾ ಮದುವೆ ಆಗ್ತಾರಾ ಎನ್ನುವುದಕ್ಕೆ ಉತ್ತರ ಸಿನಿಮಾ ರಿಲೀಸ್ ಆದ ಮೇಲೇಯೇ ಸಿಗುತ್ತದೆ.

    English summary
    Actress Srinidhi Shetty answered her fans questions about 'KGF chapter 2'.
    Thursday, March 21, 2019, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X