ಅಭಿಮಾನಿ ಕೇಳಿದ ತಕ್ಷಣ ಮೊಬೈಲ್ ನಂಬರ್ ನೀಡಿದ 'ಕೆಜಿಎಫ್' ಕ್ವೀನ್

Recommended Video

ಅಭಿಮಾನಿಗೆ ಮೊಬೈಲ್ ನಂಬರ್ ಕೊಟ್ಟ ಕೆಜಿಎಫ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ | FILMIBEAT KANNADA

ಸ್ಟಾರ್ ಗಳ ಜೊತೆಗೆ ಅಭಿಮಾನಿಗಳು ಒಂದು ಫೋಟೋ ಪಡೆದುಕೊಳ್ಳುವುದು ದೊಡ್ಡ ವಿಚಾರ. ಹೀಗಿರುವಾಗ, ಸ್ಟಾರ್ ಗಳ ಮೊಬೈಲ್ ನಂಬರ್ ಸಿಗುವುದು ಕಷ್ಟದ ಕೆಲಸ. ಅದರಲ್ಲಿಯೂ ಹೀರೋಯಿನ್ ಗಳ ಮೊಬೈಲ್ ನಂಬರ್ ಸಾಮಾನ್ಯ ಅಭಿಮಾನಿಗೆ ಸಿಗುವುದು ಕನಸಿನ ಮಾತು ಬಿಡಿ.

ಇಂತಹ ಸಂದರ್ಭ ಇರುವಾಗ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಾಯಕ ನಟಿಯ ನಂಬರ್ ಅನ್ನು ಒಂದೇ ಕ್ಷಣದಲ್ಲಿ ಪಡೆದುಕೊಂಡಿದ್ದಾರೆ. ಹೌದು, ಈ ರೀತಿ ಅಭಿಮಾನಿಗೆ ತನ್ನ ನಂಬರ್ ನೀಡಿದ ನಟಿ ಶ್ರೀನಿಧಿ ಶೆಟ್ಟಿ.

'ಕೆಜಿಎಫ್' ಸಿನಿಮಾದ ಮೂಲಕ ಲಾಂಚ್ ಆದ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದ ಮೂಲಕವೇ ಇಡೀ ಇಂಡಿಯಾದ ತುಂಬ ಫೇಮಸ್ ಆದರು. ಹೀಗೆ ದೊಡ್ಡ ಯಶಸ್ಸು ಪಡೆದಿರುವ ಶ್ರೀನಿಧಿ ಅಭಿಮಾನಿಗಳ ಪ್ರೀತಿಗೆ ಬೆಲೆ ನೀಡುತ್ತಾರೆ.

srinidhi shetty gave mobile number to her unknown fan

ಶ್ರೀನಿಧಿ ಶೆಟ್ಟಿ ಇತ್ತೀಚಿಗಷ್ಟೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿ ಎಂದಿದ್ದರು. ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಮಾತು ಕೊಟ್ಟಿದ್ದರು. ಈ ಸಮಯದಲ್ಲಿ ಕಿಲಾಡಿ ಅಭಿಮಾನಿಯೊಬ್ಬ ''ನಿಮ್ಮ ನಂಬರ್ ನನಗೆ ಸಿಗಬಹುದಾ..?'' ಎಂದು ಕೇಳಿದ್ದರು.

ಅಭಿಮಾನಿಯ ಕೊರಿಕೆಯನ್ನು ಈಡೇರಿಸಲು ಹಿಂದೇಟು ಹಾಕದ ಶ್ರೀನಿಧಿ ತನ್ನ ನಂಬರ್ ಮೊಬೈಲ್ ನಂಬರ್ ಅನ್ನು ನೀಡಿದರು. ಅಭಿಮಾನಿ ಕೇಳಿದ ಕೂಡಲೇ ಶ್ರೀನಿಧಿ ಯಾವುದೋ ಒಂದು ನಂಬರ್ ಕೊಟ್ಟಿರಬಹುದು ಎನ್ನುವ ಅನುಮಾನ ಕೆಲವರಿಗೆ ಬರಬಹುದು ಆದರೆ, ಶ್ರೀನಿಧಿ ನೀಡಿದ್ದು ತಮ್ಮ ನಂಬರ್ ಅನ್ನೇ. ಟ್ರೂ ಕಾಲರ್ ನಲ್ಲಿ ಕೂಡ ಅದಕ್ಕೆ ಸಾಕ್ಷಿ ನೀಡಿತ್ತು.

More from Filmibeat

English summary
'KGF' kannada movie Actress Srinidhi Shetty gave mobile number to her unknown fan in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X