ಆ ಸ್ಟಾರ್‌ ಹೀರೋ ಚಿತ್ರಕ್ಕೆ ರಾಕಿಯ ಮೆಹಬೂಬಾ ಶ್ರೀನಿಧಿ ಶೆಟ್ಟಿ ನಾಯಕಿ..?

ಅದೃಷ್ಟ ಅಂದ್ರೆ ಇದು... ಹೀಗಂತ ಗಾಂಧಿನಗರದ ಮಂದಿ ಅಚ್ಚರಿಯಿಂದ ಮಾತಾನಾಡಿಕೊಂಡಿದ್ದು ಕೆಜಿಎಫ್ ಚಿತ್ರದ ಕಥಾ ನಾಯಕಿ ಶ್ರೀನಿಧಿ ಶೆಟ್ಟಿ ವಿಚಾರದಲ್ಲಿ.

ಯಾಕೆಂದರೆ.. ಕೆ.ಜಿ.ಎಫ್ ಶ್ರೀನಿಧಿ ಶೆಟ್ಟಿ ಅಭಿನಯದ ಮೊದಲ ಸಿನಿಮಾ. ಆದರೆ ಬೇರೆ ನಟಿಯರಿಗೆಮೂರು ನಾಲ್ಕು ಚಿತ್ರಗಳಾದರೂ ಸಿಗದ ಪಬ್ಲಿಸಿಟಿ ಶ್ರೀನಿಧಿಗೆ ಆ ಕಾಲದಲ್ಲಿ ಸಿಕ್ಕಿತ್ತು. ಇನ್ನೂ ಮೊದಲನೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಆಗಲೇ ಶ್ರೀನಿಧಿ ಶೆಟ್ಟಿಗೆ ಬೇರೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಸರದಿಯಲ್ಲಿ ನಿಂತಿದ್ದವು. ಬಂದ ಈ ಅವಕಾಶಗಳನ್ನು ಶ್ರೀನಿಧಿ ಎರಡು ಕೈಯಿಂದ ಬಾಚಿಕೊಂಡಿದ್ದರು ಕೂಡ.

Srinidhi Shetty known for her role in KGF will play the leading lady opposite Nani in Hit 3

ಕೆ.ಜಿ.ಎಫ್ ಭಾಗ 1 ಮತ್ತು ಭಾಗ 2ರ ನಂತರ ಸೀದಾ ಕಾಲಿವುಡ್‌ ಕಡೆ ಮುಖ ಮಾಡಿದ್ದ ಶ್ರೀನಿಧಿ, ಚಿಯಾನ್ ವಿಕ್ರಮ್ ಜೊತೆ ತೆರೆ ಹಂಚಿಕೊಂಡರು. ಕೋಬ್ರಾದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಕೋಬ್ರಾ ಚಿತ್ರದ ನಂತರ ಟಿಲ್ಲು ಸ್ಕ್ರೈರ್ ಖ್ಯಾತಿಯ ಸಿದ್ದು ಜೋನಲಗುಡ್ಡ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಹೋದರು ಶ್ರೀನಿಧಿ ಶೆಟ್ಟಿ. ಆದರೆ ವರ್ಷದ ಹಿಂದೆ ಶುರುವಾದ ಈ ಸಿನಿಮಾದ ಕಥೆ ಏನಾಯ್ತು.. ಆ ಸಿನಿಮಾ ಎಲ್ಲಿಗೆ ಬಂತು ಅನ್ನುವುದು ಇನ್ನೂ ನಿಗೂಢ.

ಹೀಗಿರುವಾಗ ಈಗ ಶ್ರೀನಿಧಿ ಶೆಟ್ಟಿ ನಾನಿ ಅಭಿನಯದ ಹಿಟ್ 3 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಗುಲ್ಲಾಗಿದೆ. ಕಾಲಿವುಡ್‌ To ಟಾಲಿವುಡ್, ಟಾಲಿವುಡ್‌ To ಸ್ಯಾಂಡಲ್‌ವುಡ್ ಈ ಸುದ್ದಿ ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದನ್ನೂ ಮಾಡುತ್ತಿದೆ.

Srinidhi Shetty known for her role in KGF will play the leading lady opposite Nani in Hit 3

ಹೌದು.. 'ದಸರಾ' ಮೂಲಕ ಧಮಾಕ ಎಬ್ಬಿಸಿ, ಆ ನಂತರ 'ಹಾಯ್‌ ನನ್ನಾ' ಚಿತ್ರದ ಮೂಲಕ ಜನ ಮನ ಗೆದ್ದ ನ್ಯಾಚುರಲ್ ಸ್ಟಾರ್ ನಾನಿ, ಟಾಲಿವುಡ್‌ನ ಬ್ಲಾಕ್‌ಬಸ್ಟರ್ ಫ್ರಾಂಚೈಸಿ 'ಹಿಟ್' ಚಿತ್ರದ ಮೂರನೇ ಭಾಗಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ವರ್ಷದ ಹಿಂದೆಯೇ ಬಂದಿತ್ತು. ಅಡವಿ ಶೇಷ್ ಅಭಿನಯದ ಎರಡನೇ ಭಾಗದಲ್ಲಿ ನಾನಿ ಗೆಸ್ಟ್ ರೋಲ್‌ ನಿರ್ವಹಿಸಿದ ಹಿನ್ನೆಲೆ ಹರಿದಾಡುತ್ತಿದ್ದ ಸುದ್ದಿ ನಿಜ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ನಂತರ ಈ ಚಿತ್ರದ ಕುರಿತು ಯಾವುದೇ ಬ್ರೇಕಿಂಗ್ ನ್ಯೂಸ್ ಹೊರ ಬಂದಿರಲಿಲ್ಲ. ಹೀಗಾಗಿ ಈ ಚಿತ್ರವನ್ನು ಬಹುತೇಕರು ಮರೆತು ಹೋಗಿದ್ದರು.

ಆದರೆ ಈಗ ಏಕಾಏಕಿ ಆಂಧ್ರದಲ್ಲಿ ಹಿಟ್-03 ಚಿತ್ರದ ಕುರಿತು ಚರ್ಚೆ ಶುರುವಾಗಿದೆ. ಡಾ. ಶೈಲೇಶ್ ಕೊಲನು ನಿರ್ದೇಶನದಲ್ಲಿ ಬರಲಿರುವ ಚಿತ್ರಕ್ಕೆ ಖುದ್ದು ನಾನಿಯೇ ಈ ಚಿತ್ರದ ಚಿತ್ರಕಥೆಯನ್ನೂ ಬರೆಯುತ್ತಿದ್ದಾರೆ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಇದರ ನಡುವೆ ಹಿಟ್ -03 ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ಧಾರೆ ಎಂಬ ವಿಚಾರ ಕೂಡ ಅಖಂಡ ಆಂಧ್ರದೆಲ್ಲೆಡೆ ಗುಲ್ಲಾಗಿದೆ.

srinidhi-shetty-known-for-her-role-in-kgf-will-play-the-leading-lady-opposite-nani-in-hit-3


ಈ ಕುರಿತು ಚಿತ್ರತಂಡವಾಗಲಿ.. ಶ್ರೀನಿಧಿ ಶೆಟ್ಟಿಯಾಗಲಿ.. ಅಧಿಕೃತವಾಗಿ ಏನೂ ಹೇಳದೇ ಇದ್ದರೂ ಸದ್ಯಕ್ಕೆ ರಾಕಿ ಭಾಯ್‌ನ ಮೆಹಬೂಬಾ ಅವರ ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಾಗಿದ್ಧಾರೆ. ನ್ಯಾಚುರಲ್ ಸ್ಟಾರ್ ನಾನಿ ಮತ್ತು ನ್ಯಾಚುರಲ್ ಹೀರೋಯಿನ್ ಶ್ರೀನಿಧಿ ಶೆಟ್ಟಿಯ ಕಾಂಬಿನೇಶನ್ ಬೆಳ್ಳಿತೆರೆಯ ಮೇಲೆ ನೋಡುವುದೇ ಚೆಂದ ಅನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದೆ. ನಿಜಕ್ಕೂ ಶ್ರೀನಿಧಿ ಶೆಟ್ಟಿ ತೆಲುಗಿನ ನಾನಿ ಜೊತೆ ತೆರೆ ಹಂಚಿಕೊಳ್ಳುತ್ತಾರಾ..? ಉತ್ತರ ಸದ್ಯದಲ್ಲಿಯೇ ಸಿಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X