ಎಷ್ಟು ಬಾರಿ 'ಕೆಜಿಎಫ್' ಸಿನಿಮಾ ನೋಡಿದ್ರು ಶ್ರೀನಿಧಿ ಶೆಟ್ಟಿ?
Recommended Video

ಯಶ್ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳು ಮನಸಾರೆ ಮೆಚ್ಚಿ ಗೆಲ್ಲಿಸಿದ ಸಿನಿಮಾ 'ಕೆಜಿಎಫ್'. ಕನ್ನಡದ ಈ ಹೆಮ್ಮೆಯ ಸಿನಿಮಾವನ್ನು ಎಲ್ಲರೂ ನೋಡಿ ಇಷ್ಟ ಪಟ್ಟಿದ್ದಾರೆ. ಕೆಲವರು ಎರಡ್ಮೂರು ಬಾರಿ ಸಿನಿಮಾ ನೋಡಿದ್ದಾರೆ.
ಚಿತ್ರದ ನಟಿ ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್' ಬಗ್ಗೆ ಬಹಳ ಖುಷಿ ಇದೆ. ಈ ಸಿನಿಮಾದ ಮೂಲಕ ಅವರು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಹಾಗಿದ್ದ ಮೇಲೆ ತಮ್ಮನ್ನು ತಾವು ಎಷ್ಟು ಬಾರಿ ಪರದೆ ಮೇಲೆ ಶ್ರೀನಿಧಿ ನೋಡಿಕೊಂಡಿದ್ದಾರೆ ಎನ್ನುವ ಸಣ್ಣ ಕುತೂಹಲ ಅಭಿಮಾನಿಗಳಿಗೆ ಇರಬಹುದು.
ಶ್ರೀನಿಧಿ ಶೆಟ್ಟಿ ಇದುವರೆಗೆ ಐದು ಬಾರಿ ಸಿನಿಮಾವನ್ನು ನೋಡಿದ್ದಾರೆ. ಚಿತ್ರತಂಡದ ಜೊತೆಗೆ, ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಹೀಗೆ ಐದು ಬಾರಿ ತಮ್ಮ ಸಿನಿಮಾವನ್ನ ವೀಕ್ಷಿಸಿದ್ದಾರೆ. ಐದನೇ ಬಾರಿ ಸಿನಿಮಾ ನೋಡುತ್ತಿರುವ ಫೋಟೋವನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

ಅಂದಹಾಗೆ, 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ನಾಳೆಗೆ ಎರಡು ವಾರ ಕಳೆಯಲಿದೆ. ಈ ಸಿನಿಮಾ ಕೋಟಿ ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಾಡಿದೆ.


Click it and Unblock the Notifications











