»   » 'ದಂಡುಪಾಳ್ಯ' ನಿರ್ದೇಶಕನಿಂದ ಮತ್ತೊಂದು ರಿಯಲ್ ಸ್ಟೋರಿ ಸಿನಿಮಾ

'ದಂಡುಪಾಳ್ಯ' ನಿರ್ದೇಶಕನಿಂದ ಮತ್ತೊಂದು ರಿಯಲ್ ಸ್ಟೋರಿ ಸಿನಿಮಾ

Posted By:
Subscribe to Filmibeat Kannada

'ದಂಡುಪಾಳ್ಯ 2' ಸಿನಿಮಾದ ಮೂಲಕ ಸದ್ಯ ಸುದ್ದಿಯಲ್ಲಿರುವ ನಿರ್ದೇಶಕ ಶ್ರೀನಿವಾಸ್ ರಾಜು ಈಗ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಮತ್ತೊಮ್ಮೆ ರಿಯಲ್ ಸ್ಟೋರಿಯ ಹಿಂದೆ ಬಿದ್ದಿರುವ ಶ್ರೀನಿವಾಸ್ ರಾಜು ಕಂಚಿ ಮಠದ ಸ್ವಾಮಿಜಿ ಶಂಕರಾಚಾರ್ಯ ಜಯೇಂದ್ರ ಅವರ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಿದ್ದಾರಂತೆ.

Srinivas Raju planing to do a Movie On Kanchi Sankararaman case

2004ರಲ್ಲಿ ಕಂಚಿ ಮಠದ ವ್ಯವಸ್ಥಾಪಕ ಶಂಕರರಾಮನ್ ಅವರ ಕೊಲೆ ಮತ್ತು ಆ ನಂತರದ ಬಂಧನ ಮತ್ತಿತರ ಘಟನೆಗಳ ಸುತ್ತ ಈ ಚಿತ್ರ ಸುತ್ತಲಿದೆಯಂತೆ. ಈ ಘಟನೆಗಳು ಹೆಚ್ಚು ಕುತೂಹಲ ತರಿಸುವ ರೀತಿ ಇದ್ದು, ಅದಕ್ಕೆ ಸಿನಿಮಾ ಮಾಡುವ ನಿರ್ಧಾರಕ್ಕೆ ಶ್ರೀನಿವಾಸ ರಾಜು ಬಂದರಂತೆ. ಸಿನಿಮಾದ ಸ್ಕ್ರಿಪ್ಟ್ ವರ್ಕ್ ಅಂತಿಮ ಹಂತದಲ್ಲಿದ್ದು ತಾರಾಗಣಕ್ಕಾಗಿ ನಟರ ಹುಡುಕಾಟದಲ್ಲಿ ಅವರು ತೊಡಗಿದ್ದಾರೆ.

Srinivas Raju planing to do a Movie On Kanchi Sankararaman case

ಈಗಾಗಲೇ ಸಿನಿಮಾಗೆ 'ಆಚಾರ್ಯ ಅರೆಸ್ಟ್' ಅಂತ ಹೆಸರಿಟ್ಟಿದ್ದು, ಚಿತ್ರ ಅವರ ಬ್ಯಾನರ್ ನಲ್ಲಿಯೇ ಮೂಡಿ ಬರಲಿದೆಯಂತೆ. ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ಸಿನಿಮಾವನ್ನು ನಿರ್ಮಾಣವಾಗಲಿದೆ ಅಂತ ಹೇಳಲಾಗಿದೆ.

English summary
Kannada Director Srinivas Raju planing to do a movie on 'Kanchi Sankararaman' case

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada