»   » ಸದಾ ಮಲ್ಲಿಗೆ ಹೂವು ಮುಡಿಯುತ್ತಿದ್ದ ದರ್ಶನ್ ತಾಯಿ ಕೂದಲನ್ನ ಕತ್ತರಿಸಿದ್ದೇಕೆ?

ಸದಾ ಮಲ್ಲಿಗೆ ಹೂವು ಮುಡಿಯುತ್ತಿದ್ದ ದರ್ಶನ್ ತಾಯಿ ಕೂದಲನ್ನ ಕತ್ತರಿಸಿದ್ದೇಕೆ?

Posted By:
Subscribe to Filmibeat Kannada
ತೂಗುದೀಪ ಶ್ರೀನಿವಾಸ್ ಮೇಲೆ ಮೀನಾ ತೂಗುದೀಪ ತೋರಿದ ಪ್ರೀತಿ ಅಮೋಘ | Filmibeat Kannada

ಒಬ್ಬ ಯಶಸ್ವಿ ನಾಯಕನ ಹಿಂದೆ ಸದಾ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಅದು ತಾಯಿಯ ರೂಪದಲ್ಲಿ ಅಥವಾ ಹೆಂಡತಿಯ ರೂಪದಲ್ಲಿ ಅನ್ನುವ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಮೀನಾ ತೂಗುದೀಪ್ ಶ್ರೀನಿವಾಸ್.

ಪತ್ನಿಯಾಗಿ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಏಳಿಗೆಯಲ್ಲಿ ಶ್ರಮಿಸಿದ ಮೀನಾ ತೂಗುದೀಪಾ ತಮ್ಮ ಮಕ್ಕಳ ಕಷ್ಟದಲ್ಲೂ ಕೈ ಹಿಡಿದು ನಡೆಸಿದ್ದಾರೆ. ಒಬ್ಬರನ್ನ ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ಆಗಿ ಮಾಡಿ ಮತ್ತೊಬ್ಬರನ್ನ ಚಿತ್ರರಂಗದ ತಾಂತ್ರಿಕ ಬ್ರಹ್ಮನಾಗಿ ಬೆಳೆಸಿದ್ದಾರೆ.

ಮೀನಾ ತೂಗುದೀಪ ಅವರನ್ನ ನೀವು ಸಾಮಾನ್ಯವಾಗಿ ಉದ್ದ ಜಡೆಯಲ್ಲಿ ನೋಡಿರಲು ಸಾಧ್ಯವೇ ಇಲ್ಲ. ಸಾಕಷ್ಟು ವರ್ಷದಿಂದ ಅವರ ಜೊತೆ ಸ್ನೇಹದಿಂದ ಇದ್ದವರು ಮಾತ್ರ ಅವರ ನೀಳ ಕೇಶರಾಶಿಯನ್ನ ನೋಡಿರುತ್ತಾರೆ. ಉದ್ದ ಜಡೆಯಿದ್ದ ಮೀನಾ ತೂಗುದೀಪ ಬಾಬ್ ಕಟ್ ಮಾಡಿಕೊಂಡಿದ್ದೇಕೆ ಗೊತ್ತಾ? ಈ ವಿಚಾರ ತಿಳಿದರೆ ಇಂತಹ ಪ್ರೀತಿಯೂ ಉಂಟಾ ಎಂದು ಆಶ್ಚರ್ಯ ಪಡುತ್ತೀರಾ. ಮುಂದೆ ಓದಿ

ಶ್ರೀನಿವಾಸ್ ಅವರೊಂದಿಗೆ ಹೋಯ್ತು ಜಡೆ

ಗಂಡ ತೂಗುದೀಪ ಶ್ರೀನಿವಾಸ್ ಬದುಕಿದ್ದ ಅಷ್ಟೂ ಸಮಯ ಶೂಟಿಂಗ್ ನಿಂದ ಹಿಂದಿರುಗುವಾಗ ತಮ್ಮ ಹೆಂಡತಿಯ ಉದ್ದ ಜಡೆಯನ್ನ ಅಲಂಕರಿಸಲೆಂದೇ ಮೈಸೂರು ಮಲ್ಲಿಗೆ ಹೂ ತಂದು ಕೊಡುತ್ತಿದ್ದರಂತೆ. ಅದಕ್ಕಾಗಿಯೇ ಕಾಯುತ್ತಿದ್ದ ಮೀನಾ ಗಂಡ ಬಂದ ತಕ್ಷಣ ಕೂದಲು ಬಾಚಿ, ಜಡೆ ಹಾಕಿ ಮಲ್ಲಿಗೆ ಹೂವನ್ನು ಮುಡಿಯುತ್ತಿದ್ದರಂತೆ.

ಪತ್ನಿ ಸಂಭ್ರಮ ಕಂಡು ಅಣ್ಣಾವ್ರ ಹಾಡನ್ನ ಹಾಡುತ್ತಿದ್ದರು

ಮೀನಾ ತೂಗುದೀಪ ಹೂ ಮುಡಿದು ಸಂಭ್ರಮವನ್ನ ಪಡುತ್ತಿದ್ದನ್ನು ನೋಡಿ "ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ.." ಎಂದು ರಾಗವಾಗಿ ಹಾಡುತ್ತಿದ್ದರಂತೆ ತೂಗುದೀಪ್ ಶ್ರೀನಿವಾಸ್.

ಯಾವ ಸೌಭಾಗ್ಯಕ್ಕೆ ಕೂದಲು

ಗಂಡ ತೀರಿಕೊಂಡ ಮೇಲೆ ಮಲ್ಲಿಗೆ ಹೂ ತರುವವರಿಲ್ಲ. ಹೀಗಾಗಿ ಉದ್ದ ಕೂದಲಿಗೆ ಕತ್ತರಿ ಹಾಕಿಸಿ ಬಾಬ್ ಕಟ್ ಮಾಡಿಸಿಕೊಂಡರಂತೆ. ಅವರ ನಿಷ್ಕಳಂಕ ಪ್ರೀತಿಯಿಲ್ಲ, ಮಲ್ಲಿಗೆಯೂ ಇಲ್ಲ. ಎಂದು ಖುದ್ದು ಮೀನಾ ತೂಗುದೀಪ ಅವರೇ ಹೇಳಿಕೊಂಡಿದ್ದಾರೆ.

ನಿಷ್ಕಳಂಕವಾಗಿ ಪ್ರೀತಿ ಮಾಡುತ್ತಿದ್ದ ಶ್ರೀನಿವಾಸ್

ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಬರಹಗಾರ ಗಣೇಶ್ ಕಾಸರಗೋಡು ಅವರು ತಮ್ಮ 'ಆನ್ ದಿ ರೆಕಾರ್ಡ್' ನಲ್ಲಿ ಈ ವಿಚಾರವನ್ನ ಬರೆದಿದ್ದಾರೆ. ನಿಜಕ್ಕೂ ಇಂತಹ ಪ್ರೀತಿ ಎಷ್ಟು ಜನರಿಗೆ ತಾನೆ ಸಿಕ್ಕಿತ್ತು. ಪ್ರೀತಿ ಇಲ್ಲದ ಮೇಲೆ ಸೌಂದರ್ಯ ಶೃಂಗಾರ ಏಕೆ ಅನ್ನೋ ಮೀನಾ ತೂಗುದೀಪ ಅವರ ನಿರ್ಧಾರ ನಿಜಕ್ಕೂ ಅದೆಷ್ಟೋ ಜನರಿಗೆ ಸ್ಪೂರ್ತಿ ಆಗಲಿದೆ.

English summary
Srinivas's wife Meena Thugudeepa Srinivas Bob cut after Thuguguda Srinivas died.Meena Thangudeeppa is the mother of actor Challenging star Darshan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X