»   » 'ಶ್ರೀನಿವಾಸ ಕಲ್ಯಾಣ'ದ ನಂತರ 'ಬೀರ್‌ಬಲ್' ಆದ ಶ್ರೀನಿ

'ಶ್ರೀನಿವಾಸ ಕಲ್ಯಾಣ'ದ ನಂತರ 'ಬೀರ್‌ಬಲ್' ಆದ ಶ್ರೀನಿ

Posted By:
Subscribe to Filmibeat Kannada

ಚಂದನವನದಲ್ಲಿ 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ಲವರ್ ಬಾಯ್‌ಗಳ ಸಿನಿ ಕ್ರೇಜ್ ಹೆಚ್ಚಿಸಿದ ನಿರ್ದೇಶಕ-ನಟ ಎಂ.ಜಿ.ಶ್ರೀನಿವಾಸ್ ಈಗ ಮತ್ತೆ ಕಮಾಲ್ ಮಾಡಲು ಬರುತ್ತಿದ್ದಾರೆ.

ಈ ಹಿಂದೆ ಸ್ಕೂಲ್-ಕಾಲೇಜಿನಲ್ಲಿ ಆದ ಹಳೇ ಲವ್ ಗಳನ್ನು ನೆನಪಿಸುವ ಸೂಪರ್ ಹಿಟ್ ಕಾಮಿಡಿ ರೊಮ್ಯಾಂಟಿಕ್ ಚಿತ್ರ ನೀಡಿದ್ದ ಶ್ರೀನಿ ಈಗ ಒಂದೇ ಟೈಟಲ್ ಇಟ್ಟುಕೊಂಡು ಆ ಚಿತ್ರದ ಮೂರು ಸೀಕ್ವೆಲ್ ಗಳನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಬ್ಲೇಡ್ ಶ್ರೀನಿಯ ಈ ಹೊಸ ಪ್ರಯೋಗದ ಚಿತ್ರದ ಹೆಸರು ಮತ್ತು ವಿಶೇಷಗಳನ್ನು ತಿಳಿಯಲು ಮುಂದೆ ಓದಿರಿ..

ಸಿನಿಮಾ ಹೆಸರು

'ಶ್ರೀನಿವಾಸ ಕಲ್ಯಾಣ' ಖ್ಯಾತಿಯ ನಿರ್ದೇಶಕ ಮತ್ತು ನಟ ಎಂ.ಜಿ.ಶ್ರೀನಿವಾಸ್ ತಾವು ಆಕ್ಷನ್ ಕಟ್ ಹೇಳಲು ಹೊರಟಿರುವ ಹೊಸ ಸಿನಿಮಾ ಹೆಸರು 'ಬೀರ್‌ಬಲ್'. ಈ ಚಿತ್ರ ಮೂರು ಸೀಕ್ವೆಲ್ ಗಳಲ್ಲಿ ಮೂಡಿಬರಲಿದೆ.

ಥ್ರಿಲ್ಲರ್ ಸೀರೀಸ್ 'ಬೀರ್‌ಬಲ್'

ಟೈಮ್ ಥ್ರಿಲ್ಲರ್ 'ಬೀರ್‌ಬಲ್' ಚಿತ್ರವನ್ನು ಮೂರು ಭಾಗಗಳಲ್ಲಿ ತೆರೆಗೆ ತರಲಿದ್ದು, ಮೊದಲ ಭಾಗಕ್ಕೆ 'ಫೈಂಡಿಂಗ್ ವಜ್ರಮುನಿ', ಎರಡನೇ ಭಾಗಕ್ಕೆ 'ಅವ್ರನ್ ಬಿಟ್ಟು ಇವ್ರನ್ ಬಿಟ್ಟು ಅವರ್ಯಾರು', ಮೂರನೇ ಭಾಗಕ್ಕೆ 'ತುರೆಮಣೆ' ಎಂದು ಸಬ್‌ ಟೈಟಲ್ ಇಡಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ಈ ಚಿತ್ರದಲ್ಲಿ ಶ್ರೀನಿವಾಸ್ ಲಾಯರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸಹ ಈಗಾಗಲೇ ಬಿಡುಗಡೆ ಆಗಿದ್ದು ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.

ನಿರ್ಮಾಪಕರು

ಸದ್ಯದಲ್ಲಿ ಗಣೇಶ್ ಅಭಿನಯದ 'ಚಮಕ್' ಮತ್ತು ನವ ನಟ ವಿದ್ಯುತ್ ಚಂದ್ರ ಅಭಿನಯದ 'ಜಾನ್ ಸೀನ' ಚಿತ್ರಕ್ಕೆ ಬಂಡವಾಳ ಹೂಡಿರುವ ಟಿ ಆರ್ ಚಂದ್ರಶೇಖರ್ ಎಂಬುವರು 'ಕ್ರಿಸ್ಟಲ್ ಪಾರ್ಕ್ ಸಿನಿಮಾಸ್' ಅಡಿಯಲ್ಲಿ 'ಬೀರ್‌ಬಲ್' ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ತಾರಾಬಳಗ

'ಬೀರ್‌ಬಲ್' ಚಿತ್ರದಲ್ಲಿ ಎಂ.ಜಿ ಶ್ರೀನಿವಾಸ್ ಲಾಯರ್ ಪಾತ್ರ ನಿರ್ವಹಿಸಲಿದ್ದಾರೆ ಎಂಬುದಷ್ಟೇ ತಿಳಿದಿದ್ದು, ಇತರೆ ಯಾರೆಲ್ಲಾ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಉಪೇಂದ್ರ'ಗೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿ

ನಿರ್ದೇಶಕ ಮತ್ತು ನಟ ಎಂ.ಜಿ ಶ್ರೀನಿವಾಸ್ ಈ ಹಿಂದೆ 'ಶ್ರೀನಿವಾಸ ಕಲ್ಯಾಣ' ಚಿತ್ರ ಮಾತ್ರವಲ್ಲದೇ, ಅದಕ್ಕೂ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರವನ್ನು ನಿರ್ದೇಶನ ಮಾಡಿದ್ದರು.

English summary
'Srinivasa Kalyana' movie fame M G Srinivas all set to begin his new venture titled 'Birbal Trilogy'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada