For Quick Alerts
  ALLOW NOTIFICATIONS  
  For Daily Alerts

  ಸುದೀಪ್, ಪುನೀತ್ ಕೈ ಸೇರಿದ ಸಚಿವ ಶ್ರೀರಾಮುಲು ಮಗಳ ಮದುವೆ ಪತ್ರಿಕೆ

  |

  ಆರೋಗ್ಯ ಸಚಿವ ಶ್ರೀರಾಮುಲು ಸದ್ಯ ಪುತ್ರಿ ರಕ್ಷಿತಾ ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀರಾಮುಲು ಈಗ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಸ್ನೇಹಿತರು, ಕುಟುಂಬದವರು ಮತ್ತು ರಾಜಕೀಯ ಗಣ್ಯರ ಜೊತೆಗೆ ಚಿತ್ರರಂಗದ ಗಣ್ಯಯರಿಗೂ ಮಗಳ ಮದುವೆಗೆ ಪ್ರೀತಿಯ ಆಹ್ವಾನ ನೀಡುತ್ತಿದ್ದಾರೆ.

  ಇತ್ತೀಚಿಗೆ ಶ್ರೀರಾಮುಲು, ಅಭಿನಯ ಚಕ್ರವರ್ತಿ ಸುದೀಪ್ ಮನೆಗೆ ಭೇಟಿ ನೀಡಿ ಇಡಿ ಕುಟುಂಬಕ್ಕೆ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ. ಸುದೀಪ್ ಮತ್ತು ಶ್ರೀರಾಮುಲು ಉತ್ತಮ ಸ್ನೇಹಿತರು. ಈ ಹಿಂದೆ ಸುದೀಪ್ ಶ್ರೀರಾಮುಲು ಪರ ಚುನಾವಣಾ ಪ್ರಚಾರ ಕೂಡ ಮಾಡಿದ್ದರು. ಅಲ್ಲದೆ ಶ್ರೀರಾಮುಲು ಅವರಿಗೆ ನಮ್ಮ ಬೆಂಬಲ ಯಾವಾಗಲು ಇರುತ್ತೆ ಎಂದು ಸುದೀಪ್ ಹೇಳಿದ್ದರು.

  ಮಗಳ ಮದುವೆಗೆ ಮೋದಿಯನ್ನು ಆಹ್ವಾನಿಸಿದ ಶ್ರೀರಾಮುಲು

  ಈಗ ಚಿತ್ರರಂಗದ ಸ್ನೇಹಿತನನ್ನು ಶ್ರೀರಾಮುಲು ಮಗಳ ಮದುವೆಗೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ. ಸುದೀಪ್ ಕುಟುಂಬದ ಜೊತೆ ಇರುವ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ತಂದೆ ಸಂಜೀವ್ ಕೈಯಿಗೆ ಮದುವೆ ಪತ್ರಿಕೆ ನೀಡಿ ಶ್ರೀರಾಮುಲು ಪ್ರೀತಿಯಿಂದ ಮದುವೆಗೆ ಕರೆ ನೀಡಿದ್ದಾರೆ.

  Sriramulu Invited To Sudeep And Puneeth For His Daughter Marriage

  ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಗೂ ಭೇಟಿ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಪುನೀತ್ ಮನೆಗೆ ಭೇಟಿ ನೀಡಿದ ಶ್ರೀರಾಮುಲು ಪವರ್ ಸ್ಟಾರ್ ಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿ ಮದುವೆಗೆ ಆಹ್ವಾನಿಸಿದ್ದಾರೆ. ಅಂದ್ಹಾಗೆ ಶ್ರೀರಾಮುಲು ಮಗಳ ಮದುವೆ ಮುಂದಿನ ತಿಂಗಳು ಅಂದರೆ ಮಾರ್ಚ್ 4 ಮತ್ತು 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮಗಳು ರಕ್ಷಿತಾ ಹೈದರಾಬಾದ್ ಮೂಲದ ಉದ್ಯಮಿಯ ಪುತ್ರ ಲಲಿತ್ ಕುಮಾರ್ ಜೊತೆ ಹಸೆಮಣೆ ಏರುತ್ತಿದ್ದಾರೆ.

  English summary
  Politician Sriramulu invited to sudeep and Puneeth Rajkumar for his Daughter marriage. His daughter will get married on March 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X