ಶ್ವೇತಾ ಚಂಗಪ್ಪ ಸೀಮಂತ ಕಾರ್ಯದಲ್ಲಿ ಮಜಾ ಫ್ಯಾಮಿಲಿ

Recommended Video

ಶ್ವೇತಾ ಚಂಗಪ್ಪ ಸೀಮಂತ ಕಾರ್ಯದಲ್ಲಿ ಮಜಾ ಫ್ಯಾಮಿಲಿ

ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ತುಂಬು ಗರ್ಭಿಣಿ ಶ್ವೇತಾ ಇತ್ತೀಚಿಗಷ್ಟೆ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಖುಷಿಯ ವಿಚಾರವನ್ನು ಶೇರ್ ಮಾಡಿದ್ದರು.

ಇತ್ತೀಚಿಗಷ್ಟೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಕೂಡ ಮಾಡಲಾಗಿದೆ. ಈ ಸುಂದರ ಕ್ಷಣಗಳ ಅದ್ಭುತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಾಯಿಯಾಗುತ್ತಿರುವ ಖುಷಿಯನ್ನು ಅನುಭವಿಸುತ್ತಿರುವ ಶ್ವೇತಾ ಅವರಿಗೆ ಕುಟುಂಬದವರು ಮತ್ತು ಸ್ನೇಹಿತರು ಇಷ್ಟವಾದ ತಿನಿಸುಗಳನ್ನು ಮಾಡಿ ಬಡಿಸುತ್ತಿದ್ದಾರೆ.

ಇತ್ತೀಚಗಷ್ಟೆ ಶ್ವೇತಾ ಮನೆಗೆ ಮಜಾ ಟಾಕೀಸ್ ಫ್ಯಾಮಿಲಿ ಎಂಟ್ರಿ ಕೊಟ್ಟಿದೆ. ಮಜಾ ಟಾಕೀಸ್ ಶೋ ಶ್ವೇತಾ ಅವರಿಗೆ ಮತ್ತೊಂದು ಕುಟುಂಬವಂತಿದೆ. ಈ ಶೋ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದರು ಶ್ವೇತಾ. ಗರ್ಭಿಣಿ ಆದ ಬಳಿಕ ಶ್ವೇತಾ ಮಜಾ ಟಾಕೀಸ್ ಕಾರ್ಯಕ್ರಮದಿಂದ ದೂರ ಉಳಿದ್ದಾರೆ.

Srujan Lokesh Family And Maja Talkies Team Visited To Shwetha Changappa House

ಆದ್ರೆ ಶ್ವೇತಾ ಅವರ ಮನೆಗೆ ಮಜಾ ಟಾಕೀಸ್ ತಂಡ ಬಂದಿದೆ. ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ದಂಪತಿ, ಸೃಜನ್ ಸಹೋದರಿ, ನಿರೂಪಕಿ ಅಪರ್ಣ ಮತ್ತು ರೆಮೊ ಸೇರಿದಂತೆ ಇಡೀ ಮಜಾ ಟಾಕೀಸ್ ಟೀಂ ಶ್ವೇತಾ ಮನೆಗೆ ಬಂದು ಶ್ವೇತಾ ಯೋಗಕ್ಷೇಮ ವಿಚಾರಿಸಿದ್ದಾರೆ.

Srujan Lokesh Family And Maja Talkies Team Visited To Shwetha Changappa House

ಎಲ್ಲ ಪೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ ಶ್ವೇತಾ. ಫೋಟೋಗಳ ಜೊತೆಗೆ ಒಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. "ಈ ಪೋಸ್ಟ್ ಗೆ ಯಾವುದೆ ಕೋಟ್ಸ್ ಅಗತ್ಯ ವಿದೆಯೇ. ಏನು ಗೊತ್ತ? ಈ ಫೋಟೋ ಹೇಳುತ್ತಿದೆ ಇವರು ನನ್ನ ಸ್ನೇಹಿತರು. ಬ್ಯುಸಿಯ ನಡುವೆಯು ಸಮಯ ಮಾಡಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Kannada actor Srujan Lokesh and his family and Maja talkies team visited to Shwetha Changappa house.
Read more about: tv baby ಟಿವಿ ಮಗು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X