For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕನಾಗ್ತಿದ್ದಾರೆ ಸೃಜನ್ ಲೋಕೇಶ್; ಯಾವ ರೀತಿಯ ಸಿನಿಮಾ ಎಂಬ ಮಾಹಿತಿ ಬಿಚ್ಚಿಟ್ಟ ಸೃಜಾ

  |

  ನಟ, ನಿರ್ಮಾಪಕ ಹಾಗೂ ನಿರೂಪಕನಾಗಿ ಈಗಾಗಲೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇದೀಗ ತಮ್ಮ ತಂದೆ ಮತ್ತು ತಾತನಂತೆ ನಿರ್ದೇಶಕನಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

  ಸಿನಿಮಾ ವೆಬ್ ತಾಣವೊಂದರ ಜತೆ ಮಾತನಾಡಿದ ನಟ ಸೃಜನ್ ಲೋಕೇಶ್ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ತಾವು ನಿರ್ದೇಶನ ಮಾಡಲಿರುವ ಚಿತ್ರ ಹಾರರ್ ಕಾಮಿಡಿ ಆಗಿರಲಿದೆ ಎಂಬ ವಿಷಯಯನ್ನು ಹಂಚಿಕೊಂಡಿದ್ದಾರೆ.

  "ನನ್ನ ತಾತ ಸುಬ್ಬಯ್ಯ ನಾಯ್ಡು ಮತ್ತು ನನ್ನ ತಂದೆ ನಟ ನಿರ್ದೇಶಕ ಲೋಕೇಶ್ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ನಾನು ಸಂತಸ ಪಡೆುತ್ತೇನೆ. ನನ್ನ ನಿರ್ದೇಶನದ ಚೊಚ್ಚಲ ಚಿತ್ರವನ್ನು ಶುರು ಮಾಡಲು ಉತ್ಸುಕನಾಗಿದ್ದು ಈಗಾಗಲೇ ಈ ಚಿತ್ರಕ್ಕಾಗಿ ಸ್ಕ್ರಿಪ್ಟ್ ಕೆಲಸ ಮಾಡಿ ಮುಗಿಸಿದ್ದೇನೆ" ಎಂದು ಸೃಜನ್ ಲೋಕೇಶ್ ತಿಳಿಸಿದ್ದಾರೆ.

  ಇನ್ನೂ ಮುಂದುವರಿದು ಮಾತನಾಡಿರುವ ಸೃಜನ್ ಲೋಕೇಶ್ ತಾನು ನಿರ್ದೇಶನ ಮಾಡಲಿರುವ ಚಿತ್ರದ ಕತೆ ಮನರಂಜನೆಯಿಂದ ಕೂಡಿರಲಿದ್ದು, ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಚಿತ್ರ ತಯಾರಾಗಲಿದೆ ಎಂದಿದ್ದಾರೆ. ಹಾಗೂ ತಾರಾಗಣದ ಕುರಿತು ಮಾತನಾಡಿದ ಸೃಜನ್ ಲೋಕೇಶ್ ತಮ್ಮ ತಾಯಿ ಗಿರಿಜಾ ಲೋಕೇಶ್ ಅವರನ್ನು ಕೂಡ ಆಯ್ಕೆ ಮಾಡಿಕೊಳ್ಳಲಿದ್ದು, ತಮ್ಮ ತಾಯಿಗೆ ಆ್ಯಕ್ಷನ್ ಕಟ್ ಹೇಳಲು ಕಾತುರನಾಗಿದ್ದೇನೆ ಎಂದಿದ್ದಾರೆ.

  Srujan Lokesh revealed about his debut directional venture

  ಹಾಗೂ ಸೃಜನ್ ಲೋಕೇಶ್ ನಿರ್ದೇಶನವಿರುವ ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಲಿದ್ದು, ಲೋಕೇಶ್ ಪ್ರೊಡಕ್ಷನ್ಸ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಲಿದೆ. ಇನ್ನು ಈ ಚಿತ್ರಕ್ಕೆ ಚಂದನ್ ಶೆಟ್ಟಿ ಅವರ ಸಂಗೀತವಿರಲಿದ್ದು, ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಸಂಭಾಷಣೆಕಾರನಾಗಿ ಕೆಲಸ ನಿರ್ವಹಿಸಿರುವ ಕೆ ಎಲ್ ರಾಜಶೇಖರ್ ಈ ಚಿತ್ರಕ್ಕೆ ಡೈಲಾಗ್ ಬರೆಯಲಿದ್ದಾರೆ ಹಾಗೂ ಹೆಚ್ ಸಿ ವೇಣು ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

  English summary
  Srujan Lokesh revealed about his debut directional venture. Read on
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X