ಹುಟ್ಟುಹಬ್ಬದ ದಿನ ಸಿಹಿ ಸುದ್ದಿ ಕೊಟ್ಟ ಸೃಜನ್ ಲೋಕೇಶ್.!
Recommended Video

ಬೆಳ್ಳಿತೆರೆ ಮೇಲೆ ಬಿಗ್ ಹಿಟ್ ಕೊಡದೇ ಇದ್ದರೂ, ಕಿರುತೆರೆಯಲ್ಲಿ ಮಾತ್ರ ಸೃಜನ್ ಲೋಕೇಶ್ 'ಸೂಪರ್ ಸ್ಟಾರ್' ಆಗಿದ್ದಾರೆ.
'ಮಜಾ ವಿತ್ ಸೃಜ' ಹಾಗೂ 'ಮಜಾ ಟಾಕೀಸ್'... ನಂತಹ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನ ಗೆದ್ದವರು ನಟ ಸೃಜನ್ ಲೋಕೇಶ್. ತಂದೆ ಹೆಸರಿನಲ್ಲಿ 'ಲೋಕೇಶ್ ಪ್ರೊಡಕ್ಷನ್ಸ್' ಎಂಬ ಸಂಸ್ಥೆ ಹುಟ್ಟುಹಾಕಿದ ಸೃಜನ್ ಲೋಕೇಶ್, 'ಚಾಲೆಂಜ್', 'ಚೋಟಾ ಚಾಂಪಿಯನ್', 'ಕಾಸಿಗೆ ಟಾಸ್' ಹಾಗೂ 'ಮಜಾ ಟಾಕೀಸ್' ಅಂತಹ ರಿಯಾಲಿಟಿ ಶೋಗಳನ್ನ ನೀಡಿದ್ದಾರೆ.
ಇಲ್ಲಿಯವರೆಗೂ ಕಿರುತೆರೆಗೆ ಮಾತ್ರ ಸೀಮಿತವಾಗಿದ್ದ 'ಲೋಕೇಶ್ ಪ್ರೊಡಕ್ಷನ್ಸ್' ಇದೀಗ ಬೆಳ್ಳಿತೆರೆಗೂ ಕಾಲಿಡಲು ಸಜ್ಜಾಗಿದೆ. ಈ ಸಿಹಿ ಸುದ್ದಿಯನ್ನ ನಟ ಸೃಜನ್ ಲೋಕೇಶ್ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಬಹಿರಂಗ ಪಡಿಸಿದರು. ಮುಂದೆ ಓದಿರಿ...

ಬೆಳ್ಳಿತೆರೆಗೆ ಲೋಕೇಶ್ ಪ್ರೊಡಕ್ಷನ್ಸ್
''ಲೋಕೇಶ್ ಪ್ರೊಡಕ್ಷನ್ಸ್' ನಿಂದ ಬರೀ ಟಿವಿ ಅಲ್ಲ. ಈ ವರ್ಷ ಸಿನಿಮಾ ಪ್ರೊಡಕ್ಷನ್ ಕೂಡ ಶುರು ಮಾಡಬೇಕು ಅಂತಿದ್ದೀವಿ. ಅದರ ಕೆಲಸ ಆಗಲೇ ಶುರು ಮಾಡಿದ್ದೇವೆ'' ಎಂದರು ನಟ ಸೃಜನ್ ಲೋಕೇಶ್.

ಹೊಸಬರಿಗೆ ಚಾನ್ಸ್ ಕೊಡಲು ರೆಡಿ
''ಬರೀ ದೊಡ್ಡ ಹೀರೋಗಳಿಗೆ ಮಾತ್ರ ಸಿನಿಮಾ ಮಾಡಬೇಕು ಅಂತಿಲ್ಲ. ಒಳ್ಳೆ ಕಥೆ ಇದ್ದರೆ, ಹೊಸಬರಿಗೂ ಚಾನ್ಸ್ ಕೊಡುತ್ತೇವೆ'' - ಸೃಜನ್ ಲೋಕೇಶ್.

ದರ್ಶನ್ ಗಾಗಿ ಚಿತ್ರ ಮಾಡ್ತಾರಾ ಸೃಜನ್.?
ತಮ್ಮ 'ಲೋಕೇಶ್ ಪ್ರೊಡಕ್ಷನ್ಸ್' ಮೂಲಕ ದರ್ಶನ್ ಗೆ ಸಿನಿಮಾ ಮಾಡ್ತೀರಾ ಅಂತ ಕೇಳಿದ್ದಕ್ಕೆ, ''ಖಂಡಿತ ಮಾಡ್ತೀವಿ. ದರ್ಶನ್ ಜೊತೆಗೆ ಸಿನಿಮಾ ಮಾಡಲು ಕಥೆ ರೆಡಿ ಮಾಡಿಕೊಂಡಿದ್ದೇವೆ. ದರ್ಶನ್ ಒಪ್ಪಿದರೆ, ನಮ್ಮ ಬ್ಯಾನರ್ ನಲ್ಲೇ ಸಿನಿಮಾ ಮಾಡುತ್ತೇವೆ'' ಎನ್ನುತ್ತಾರೆ ನಟ ಸೃಜನ್ ಲೋಕೇಶ್.

ಆಲ್ ದಿ ಬೆಸ್ಟ್
ಇಷ್ಟು ದಿನ ವೀಕ್ಷಕರನ್ನು ನಕ್ಕು ನಲಿಸುತ್ತಿದ್ದ ಸೃಜನ್ ಲೋಕೇಶ್, ಇನ್ಮೇಲೆ ಸಿನಿಮಾ ನಿರ್ಮಾಪಕ ಆಗಿ ಒಳ್ಳೊಳ್ಳೆ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ನೀಡಲು ತಯಾರಿ ನಡೆಸಿದ್ದಾರೆ. ಸೃಜನ್ ಹೊಸ ಸಾಹಸಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.


Click it and Unblock the Notifications











