ಗಂಡು ಮಗುವಿಗೆ ಜನ್ಮ ನೀಡಿದ ಸೃಜನ್ ಪತ್ನಿ ಗ್ರೀಷ್ಮ
ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಇಂದು ಗಂಡು ಮಗುವಿಗೆ ಜನ್ಮ ನೀಡಿದರು ಎಂಬ ಸುದ್ದಿ ಬಂದಿತ್ತು. ಆ ಬಳಿಕ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನಟ ಸೃಜನ್ ಲೋಕೇಶ್ ಈಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.
ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೃಜನ್ ಲೋಕೇಶ್ ಹಾಗೂ ಗ್ರೀಷ್ಮ ದಂಪತಿಗೆ ಒಬ್ಬ ಮಗ ಇದ್ದಾನೆ. ಈಗ ಎರಡನೇ ಮಗು ಕೂಡ ಗಂಡಾಗಿದೆ. ಲೋಕೇಶ್ ಕುಟುಂಬಕ್ಕೆ ಇಬ್ಬರು ಮುದ್ದು ಮೊಮ್ಮಕ್ಕಳಾಗಿದ್ದಾರೆ.

ಇತ್ತೀಚಿಗಷ್ಟೆ ಗ್ರೀಷ್ಮ ಅವರ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಸೃಜನ್ ಕುಟುಂಬ ಗೆಳೆಯರು ಚಿತ್ರರಂಗದ ಸ್ನೇಹಿತರು ಇದರಲ್ಲಿ ಭಾಗಿಯಾಗಿದ್ದರು.
ಅಂದಹಾಗೆ, 2010ರಲ್ಲಿ ಸೃಜನ್ ಮತ್ತು ಗ್ರೀಷ್ಮ ದಂಪತಿ ಮದುವೆಯಾಗಿದ್ದರು.
More from Filmibeat
English summary
Kannada actor Srujan Lokesh wife Greeshma blessed with baby boy Today (Aprli 7th).


Click it and Unblock the Notifications











