ತಾಯಿಯ ಹುಟ್ಟುಹಬ್ಬಕ್ಕೆ ಸೃಜನ್ ಬರೆದ ನಾಲ್ಕು ಸಾಲು
ಹಿರಿಯ ನಟಿ ಗಿರಿಜಾ ಲೋಕೇಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲೋಕೇಶ್ ಕುಟುಂಬದ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಿರಿಜಾ ಲೋಕೇಶ್ ಅವರಿಗೆ ವಿಶ್ ಮಾಡುತ್ತಿದ್ದಾರೆ..
ಜೊತೆಗೆ ಪ್ರೀತಿಯ ಪುತ್ರ ಸೃಜನ್ ಕಡೆಯಿಂದ ಕೂಡ ಗಿರಿಜಾ ಲೋಕೇಶ್ ಅವರಿಗೆ ಶುಭಾಶಯ ತಲುಪಿದೆ. ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ತಾಯಿಯ ಬಗ್ಗೆ ನಾಲ್ಕು ಸಾಲುಗಳನ್ನು ಸೃಜನ್ ಬರೆದುಕೊಂಡಿದ್ದಾರೆ.
''ನನ್ನ ಪ್ರೀತಿಯ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲದಕ್ಕೂ ಧನ್ಯವಾದಗಳು ಅಮ್ಮ. ನನ್ನ ಜೀವನವನ್ನು ಬದಲಾಯಿಸಿದ ನೀನು ಒಬ್ಬ ಅದ್ಬುತ ವ್ಯಕ್ತಿ. ನಾನು ಇಂದು ಏನೇ ಆಗಿದ್ದರೂ ಅದು ನಿನ್ನಿಂದ. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ.'' ಎಂದು ಅಮ್ಮನಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ..

ದರ್ಶನ್ ಅಭಿಮಾನಿಗಳು ಸಹ ಗಿರಿಜಾ ಲೋಕೇಶ್ ಬರ್ತ್ ಡೇ ಗೆ ವಿಶ್ ಮಾಡುತ್ತಿದ್ದಾರೆ. ಇನ್ನು ಗಿರಿಜಾ ಲೋಕೇಶ್ ಹಾಗೂ ಸೃಜನ್ ತಾಯಿ ಮಗ ರೀತಿ ಎನ್ನುವುದಕ್ಕಿಂತ, ಗೆಳೆಯ ಗೆಳತಿಯಾಗಿದ್ದಾರೆ. ಅಂದಹಾಗೆ, ಸೃಜನ್ 'ಮಜಾ ಟಾಕೀಸ್' ಮಾತ್ರವಲ್ಲದೆ ಹೊಸ ಸಿನಿಮಾ ಶುರು ಮಾಡಿದ್ದಾರೆ.
ನಟಿ ಹರಿಪ್ರಿಯಾ ಹಾಗೂ ಸೃಜನ್ ನಟನೆಯ 'ಎಲ್ಲಿದೆ ಇಲ್ಲಿ ತನಕ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.


Click it and Unblock the Notifications











