ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!

ರೆಬೆಲ್ ಸ್ಟಾರ್ ಅಂಬರೀಶ್ ಸಂಧಾನ ವಿಫಲಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇವತ್ತು ನಡೆದ ಸಭೆಯಲ್ಲಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಪ್ರಯತ್ನ ಫೇಲ್ ಆಯ್ತು.

ಇಂದು ಸಂಜೆ 4.30 ರ ವೇಳೆಗೆ ಫಿಲ್ಮ್ ಚೇಂಬರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ವಿಚಾರಣೆ ಸಭೆ ನಡೆಯಿತು. ಸಭೆಯಲ್ಲಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಸಭೆಯಲ್ಲಿ ಹಾಜರ್ ಇದ್ದರು.

ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಜೊತೆಗೆ ಪ್ರತ್ಯೇಕವಾಗಿ ಅಂಬರೀಶ್ ಮಾತುಕತೆ ನಡೆಸಿದರು. ಪ್ರಕರಣಕ್ಕೆ ಸುಖಾಂತ್ಯ ಕಾಣಿಸಲು ಅಂಬರೀಶ್ ಪ್ರಯತ್ನ ಪಟ್ಟರು. ಆದರೆ ಅದು ಸಾಕಾರ ಆಗಲಿಲ್ಲ. ಮುಂದೆ ಓದಿರಿ...

ಬಿಗಿ ಪಟ್ಟು ಹಿಡಿದ ಶ್ರುತಿ ಹರಿಹರನ್

ಬಿಗಿ ಪಟ್ಟು ಹಿಡಿದ ಶ್ರುತಿ ಹರಿಹರನ್

''ಶ್ರುತಿ ಹರಿಹರನ್ ಬಹಿರಂಗವಾಗಿ ಕ್ಷಮೆ ಕೇಳಬೇಕು'' ಎಂದು ಅರ್ಜುನ್ ಸರ್ಜಾ ಬಿಗಿ ಪಟ್ಟು ಹಿಡಿದರು. ಅದ್ರೆ, ''ಕ್ಷಮೆ ಕೇಳಲ್ಲ'' ಅಂತ ಶ್ರುತಿ ಹರಿಹರನ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರು. ಹೀಗಾಗಿ ಸಂಧಾನ ವಿಫಲವಾಯಿತು.

ಸಾಕ್ಷಿ ಕೊಡದ ಶ್ರುತಿ ಹರಿಹರನ್

ಸಾಕ್ಷಿ ಕೊಡದ ಶ್ರುತಿ ಹರಿಹರನ್

''#ಮೀಟೂ ಅಭಿಯಾನ ಚಿತ್ರರಂಗದಲ್ಲಿ ಶುರುವಾಗಿದೆ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಹೆಸರು #ಮೀಟೂದಲ್ಲಿ ಬಂದಿದೆ. ಇಬ್ಬರ ನಡುವೆ ಸಂಧಾನ ಮಾಡಲು ಮುಂದಾದ್ವಿ. ಇಬ್ಬರ ಮಧ್ಯೆ ಏನಾಯ್ತು ಅಂತ ನಾವು ಕೂಲಂಕುಶವಾಗಿ ಕೇಳಿದ್ವಿ. ಶ್ರುತಿ ಹರಿಹರನ್ ಯಾವುದೇ ಸಾಕ್ಷಿ, ದಾಖಲೆ ನಮಗೆ ಕೊಟ್ಟಿಲ್ಲ'' ಅಂತ ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್ ಹೇಳಿದರು.

ಕೋರ್ಟ್ ನಲ್ಲಿ ಕೇಸ್ ಇದೆ

ಕೋರ್ಟ್ ನಲ್ಲಿ ಕೇಸ್ ಇದೆ

''ಕೆಲ ಆಪ್ಷನ್ ಗಳನ್ನು ಕೊಟ್ವಿ. ಅದು ಎಲ್ಲಿ ತನಕ ಬರುತ್ತೆ ಅನ್ನೋದು ಅವರಿಗೆ ಬಿಟ್ಟಿದ್ದೀವಿ. ಕೋರ್ಟಿಗೆ ಕೇಸ್ ಹೋದಾಗ, ಮಾತನಾಡುವ ಅರ್ಹತೆ ನಮಗೆ ಇಲ್ಲ. ಹೀಗಾಗಿ, ಅವರ ನಿರ್ಧಾರ ಅವರಿಗೆ ಬಿಟ್ಟಿದ್ದೇವೆ. ಇಬ್ಬರಿಗೂ ಬೇಸರ ಆಗಿದೆ. ತಕ್ಷಣಕ್ಕೆ ಪರಿಹಾರ ಸೂಚಿಸುವ ವಿಷಯ ಅಲ್ಲ ಇದು'' ಅಂತಾರೆ ಅಂಬರೀಶ್.

ಚಿತ್ರರಂಗದವರಿಗೆ ಜಾತಿ ಇಲ್ಲ

ಚಿತ್ರರಂಗದವರಿಗೆ ಜಾತಿ ಇಲ್ಲ

''ಲೆಫ್ಟ್-ರೈಟ್ ಅಂತ ಏನೂ ಇಲ್ಲ. ಚಿತ್ರರಂಗದವರಿಗೆ ಜಾತಿ ಇಲ್ಲ. ಎಲ್ಲ ಜಾತಿಯವರೂ ಸಿನಿಮಾ ನೋಡ್ತಾರೆ. ಹಾಗಂತ ಯಾರಾದರೂ ಅಂದುಕೊಂಡಿದ್ದರೆ, ಅದು ಅವರ ಭ್ರಮೆ'' - ಅಂಬರೀಶ್, ನಟ, ಕಲಾವಿದರ ಸಂಘದ ಅಧ್ಯಕ್ಷ.

'ಫೈರ್' ಸಂಸ್ಥೆ ಬಗ್ಗೆ ಅಂಬರೀಶ್ ಕಾಮೆಂಟ್

'ಫೈರ್' ಸಂಸ್ಥೆ ಬಗ್ಗೆ ಅಂಬರೀಶ್ ಕಾಮೆಂಟ್

''ಫೈರ್' ಸಂಸ್ಥೆಯಿಂದ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಹೊರಗೆ ಬಂದಿದ್ದಾರೆ. ಅಲ್ಲಿಗೆ, ಆ ಸಂಸ್ಥೆ ಸರಿ ಇಲ್ಲ ಅಂತರ್ಥ'' ಎನ್ನುತ್ತಾರೆ ಅಂಬರೀಶ್.

ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸದ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. #ಮೀಟೂ ವಿವಾದ ಕೋರ್ಟ್ ನಲ್ಲಿ ಏನು ನಿರ್ಧಾರ ಆಗುತ್ತೋ, ನೋಡಬೇಕು.

More from Filmibeat

English summary
Sruthi Hariharan allegations against Arjun Sarja: Ambareesh addresses Press meet in KFCC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X